ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Gold Rate : ಕುಸಿತ ಕಂಡ ಚಿನ್ನದ ಬೆಲೆ ; ಆಭರಣ ಖರೀದಿದಾರರಿಗೆ ಇಂದಿನ ಚಿನ್ನ- ಬೆಳ್ಳಿಯ ದರದ ಅಪ್ಡೇಟ್ಸ್

Twitter
Facebook
LinkedIn
WhatsApp
Gold Rate : ಕುಸಿತ ಕಂಡ ಚಿನ್ನದ ಬೆಲೆ ; ಆಭರಣ ಖರೀದಿದಾರರಿಗೆ ಇಂದಿನ ಚಿನ್ನ- ಬೆಳ್ಳಿಯ ದರದ ಅಪ್ಡೇಟ್ಸ್

ಬೆಂಗಳೂರು, ಅಕ್ಟೋಬರ್ 02: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಕುಸಿತ ಮುಂದುವರಿಯುತ್ತಿದೆ. ಚಿನ್ನದ ಬೆಲೆಯಂತೂ ದೊಡ್ಡ ಪ್ರಮಾಣದಲ್ಲಿಇಳಿಯುತ್ತಿದೆ. ಭಾರತದಲ್ಲಿ ಹಬ್ಬದ ಋತು ಇದ್ದರೂ ಚಿನ್ನದ ಬೆಲೆ ಕುಸಿತ ನಿಲ್ಲುತ್ತಿಲ್ಲ. ಬೆಳ್ಳಿ ಬೆಲೆಯಲ್ಲೂ ತುಸು ಇಳಿಕೆಯಾಗಿದೆ. ಅಮೆರಿಕದ ಬಾಂಡ್​ಗಳ ಮೇಲೆ ಹೂಡಿಕೆದಾರರ ಚಿತ್ತ ನೆಟ್ಟಿರುವುದರಿಂದ ಚಿನ್ನಕ್ಕೆ ಬೇಡಿಕೆ ಸದ್ಯದ ಮಟ್ಟಿಗೆ ಕಡಿಮೆ ಆಗಿದೆ. ಕಳೆದ 6 ತಿಂಗಳಲ್ಲೇ ಚಿನ್ನದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ. ದಿಢೀರ್ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಕಳೆದ ಒಂದು ವರ್ಷದಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಸದ್ಯ ನಿರಾಸೆಯಾಗಿರಬಹುದು. ಆದರೆ, ಚಿನ್ನದ ಆಭರಣ ಖರೀದಿಸುವವರಿಗೆ ಇದಿನ್ನೂ ಸಕಾಲವೇ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 53,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 58,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 53,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,170 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 2ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,200 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,200 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 717 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 53,350 ರೂ
  • ಚೆನ್ನೈ: 53,600 ರೂ
  • ಮುಂಬೈ: 53,350 ರೂ
  • ದೆಹಲಿ: 53,500 ರೂ
  • ಕೋಲ್ಕತಾ: 53,350 ರೂ
  • ಕೇರಳ: 53,350 ರೂ
  • ಅಹ್ಮದಾಬಾದ್: 53,400 ರೂ
  • ಜೈಪುರ್: 53,500 ರೂ
  • ಲಕ್ನೋ: 54,500 ರೂ
  • ಭುವನೇಶ್ವರ್: 53,350 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,780 ರಿಂಗಿಟ್ (49,164 ರುಪಾಯಿ)
  • ದುಬೈ: 2,072.50 ಡಿರಾಮ್ (46,852 ರುಪಾಯಿ)
  • ಅಮೆರಿಕ: 570 ಡಾಲರ್ (47,329 ರುಪಾಯಿ)
  • ಸಿಂಗಾಪುರ: 786 ಸಿಂಗಾಪುರ್ ಡಾಲರ್ (47,764 ರುಪಾಯಿ)
  • ಕತಾರ್: 2,145 ಕತಾರಿ ರಿಯಾಲ್ (48,852 ರೂ)
  • ಓಮನ್: 226.50 ಒಮಾನಿ ರಿಯಾಲ್ (48,849 ರುಪಾಯಿ)
  • ಕುವೇತ್: 179 ಕುವೇತಿ ದಿನಾರ್ (48,082 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,170 ರೂ
  • ಚೆನ್ನೈ: 7,600 ರೂ
  • ಮುಂಬೈ: 7,350 ರೂ
  • ದೆಹಲಿ: 7,350 ರೂ
  • ಕೋಲ್ಕತಾ: 7,350 ರೂ
  • ಕೇರಳ: 7,600 ರೂ
  • ಅಹ್ಮದಾಬಾದ್: 7,350 ರೂ
  • ಜೈಪುರ್: 7,350 ರೂ
  • ಲಕ್ನೋ: 7,350 ರೂ
  • ಭುವನೇಶ್ವರ್: 7,600 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ