ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ದರದಲ್ಲಿನ ಅಸ್ಥಿರತೆ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿರುವ ಉಭಯ ಲೋಹದ ದರಗಳು ಅದೇ ಟ್ರೆಂಡ್ ಮುಂದುವರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಬೆಳ್ಳಿ ದರ ತುಸು ಹೆಚ್ಚಾಗಿದೆ. ಆಯಾ ರಾಜ್ಯಗಳಲ್ಲಿ ದರ ತುಸು ವ್ಯತ್ಯಾಸವಿರುತ್ತದೆ. ಇದರಂತೆ, ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಮುಂಬೈಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಹೆಚ್ಚಳ ಕಂಡುಬಂದಿದೆ. ಹಿಂದಿನ ದಿನ ಚಿನ್ನದ ದರ ಹೆಚ್ಚಳವಾಗಿದ್ದರೆ ಬೆಳ್ಳಿ ದರ ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, 49,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯೂ ತಟಸ್ಥವಾಗಿದ್ದು 54,000 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂ. ಹೆಚ್ಚಾಗಿ 66,200 ರೂಪಾಯಿ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,230 ರೂ. ಮುಂಬೈ- 49,500 ರೂ, ದೆಹಲಿ- 49,650 ರೂ, ಕೊಲ್ಕತ್ತಾ- 49,500 ರೂ, ಬೆಂಗಳೂರು- 49,550 ರೂ, ಹೈದರಾಬಾದ್- 49,500 ರೂ, ಕೇರಳ- 49,500 ರೂ, ಪುಣೆ- 49,500 ರೂ, ಮಂಗಳೂರು- 49,550 ರೂ, ಮೈಸೂರು- 49,550 ರೂ. ಆಗಿದೆ.
ಚೆನ್ನೈ- 54,790 ರೂ, ಮುಂಬೈ- 54,000 ರೂ, ದೆಹಲಿ- 54,150 ರೂ, ಕೊಲ್ಕತ್ತಾ- 54,000 ರೂ, ಬೆಂಗಳೂರು- 54,050 ರೂ, ಹೈದರಾಬಾದ್- 54,000 ರೂ, ಕೇರಳ- 54,000 ರೂ, ಪುಣೆ- 54,000 ರೂ, ಮಂಗಳೂರು- 54,050 ರೂ, ಮೈಸೂರು- 54,050 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 71,300 ರೂ, ಮೈಸೂರು- 71,300 ರೂ., ಮಂಗಳೂರು- 71,300 ರೂ., ಮುಂಬೈ- 66,200 ರೂ, ಚೆನ್ನೈ- 71,300 ರೂ, ದೆಹಲಿ- 66,200 ರೂ, ಹೈದರಾಬಾದ್- 71,300 ರೂ, ಕೊಲ್ಕತ್ತಾ- 66,200 ರೂ. ಆಗಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist