Gold Price : ಇವತ್ತಿನ ಚಿನ್ನ ಬೆಳ್ಳಿಯ ದರ ಹೇಗಿದೆ?
ಬೆಂಗಳೂರು, ಜನವರಿ 2: ಹೊಸ ವರ್ಷದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver Rates) ಹೆಚ್ಚು ವ್ಯತ್ಯಯ ಕಂಡಿಲ್ಲ. ವಿದೇಶೀ ಮಾರುಕಟ್ಟೆಗಳಲ್ಲಿ ಕೆಲ ಕಡೆ ಮಾತ್ರವೇ ತುಸು ಬದಲಾವಣೆ ಆಗಿದೆ. ಕಳೆದ ಒಂದು ವರ್ಷದ ಚಿನ್ನದ ಬೆಲೆ ಅವಲೋಕಿಸಿದರೆ ಶೇ. 15ಕ್ಕಿಂತ ಹೆಚ್ಚು ದುಬಾರಿಯಾಗಿದೆ ಚಿನ್ನ. 2023ರ ಜನವರಿ 1ರಂದು 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 50,600 ರೂ ಇತ್ತು. ಇದೀಗ ಅದು 58,550 ರೂ ತಲುಪಿದೆ. ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಒಂದು ವರ್ಷದಲ್ಲಿ ಶೇ. 15ಕ್ಕಿಂತಲೂ ಹೆಚ್ಚು ಲಾಭ ಬಂದಂತಾಗಿದೆ. ಬೆಳ್ಳಿ ಬೆಲೆಯೂ ಕೂಡ ಶೇ. 10ಕ್ಕಿಂತಲೂ ಹೆಚ್ಚು ಬೆಳೆದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,860 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,600 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 2ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,870 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 786 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,870 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 58,550 ರೂ
- ಚೆನ್ನೈ: 59,100 ರೂ
- ಮುಂಬೈ: 58,550 ರೂ
- ದೆಹಲಿ: 58,700 ರೂ
- ಕೋಲ್ಕತಾ: 58,550 ರೂ
- ಕೇರಳ: 58,550 ರೂ
- ಅಹ್ಮದಾಬಾದ್: 58,600 ರೂ
- ಜೈಪುರ್: 58,700 ರೂ
- ಲಕ್ನೋ: 58,700 ರೂ
- ಭುವನೇಶ್ವರ್: 58,550 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 3,030 ರಿಂಗಿಟ್ (54,864 ರುಪಾಯಿ)
- ದುಬೈ: 2,302.50 ಡಿರಾಮ್ (52,145 ರುಪಾಯಿ)
- ಅಮೆರಿಕ: 630 ಡಾಲರ್ (52,609 ರುಪಾಯಿ)
- ಸಿಂಗಾಪುರ: 845 ಸಿಂಗಾಪುರ್ ಡಾಲರ್ (53,243 ರುಪಾಯಿ)
- ಕತಾರ್: 2,365 ಕತಾರಿ ರಿಯಾಲ್ (54,023 ರೂ)
- ಸೌದಿ ಅರೇಬಿಯಾ: 2,370 ಸೌದಿ ರಿಯಾಲ್ (52,573 ರುಪಾಯಿ)
- ಓಮನ್: 250 ಒಮಾನಿ ರಿಯಾಲ್ (54,050 ರುಪಾಯಿ)
- ಕುವೇತ್: 197 ಕುವೇತಿ ದಿನಾರ್ (53,352 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,600 ರೂ
- ಚೆನ್ನೈ: 8,000 ರೂ
- ಮುಂಬೈ: 7,860 ರೂ
- ದೆಹಲಿ: 7,860 ರೂ
- ಕೋಲ್ಕತಾ: 7,860 ರೂ
- ಕೇರಳ: 8,000 ರೂ
- ಅಹ್ಮದಾಬಾದ್: 7,860 ರೂ
- ಜೈಪುರ್: 7,860 ರೂ
- ಲಕ್ನೋ: 7,860 ರೂ
- ಭುವನೇಶ್ವರ್: 8,000 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)