Passport: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ 2024ರ ಪಟ್ಟಿ ಬಿಡುಗಡೆ; 58 ರಾಷ್ಟ್ರಗಳಿಗೆ ವೀಸಾ-ಮುಕ್ತ ಪ್ರವೇಶ, ಭಾರತೀಯ ಪಾಸ್‌ಪೋರ್ಟ್ ಸ್ಥಾನ?
ಭಾರತೀಯ ಪಾಸ್‌ಪೋರ್ಟ್‌ನ ಶ್ರೇಯಾಂಕ ಸುಧಾರಿಸಿದೆ! 2024 ಕ್ಕೆ ಹೆನ್ಲಿ ಮತ್ತು ಪಾಲುದಾರರು ನೀಡಿದ ಇತ್ತೀಚಿನ ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ, ಭಾರತೀಯ ಪಾಸ್‌ಪೋರ್ಟ್ (Passport) 82 ನೇ ಸ್ಥಾನದಲ್ಲಿದೆ.
ಸಿಂಗಾಪುರ ಮೊದಲ ಸ್ಥಾನದಲ್ಲಿ ಮುಂದುವರದಿದೆ. 2023 ರಲ್ಲಿ, ಭಾರತದ ಪಾಸ್‌ಪೋರ್ಟ್ 84 ನೇ ಸ್ಥಾನದಲ್ಲಿತ್ತು ಮತ್ತು ಅದರ ಹಿಂದಿನ ವರ್ಷ ಅದು 83 ನೇ ಸ್ಥಾನದಲ್ಲಿತ್ತು.
ಭಾರತದ ಶ್ರೇಯಾಂಕದಲ್ಲಿ ಸುಧಾರಣೆಯ ಹೊರತಾಗಿಯೂ, ಭಾರತೀಯರಿಗೆ ವೀಸಾ ಮುಕ್ತ ಸ್ಥಳಗಳ ಸಂಖ್ಯೆ ಕಡಿಮೆಯಾಗಿದೆ. 2022 ಮತ್ತು 2023 ರಲ್ಲಿ, ಭಾರತೀಯರಿಗೆ ವೀಸಾ ಅಗತ್ಯವಿಲ್ಲದೇ 60 ಸ್ಥಳಗಳಿಗೆ ಭೇಟಿ ನೀಡಲು ಅನುಮತಿಸಲಾಗಿದೆ. ಆದಾಗ್ಯೂ, ಇತ್ತೀಚಿನ ಶ್ರೇಯಾಂಕದಲ್ಲಿ, ಭಾರತೀಯ ಪಾಸ್‌ಪೋರ್ಟ್‌ಗಾಗಿ ಲಭ್ಯವಿರುವ ವೀಸಾ-ಮುಕ್ತ ತಾಣಗಳ ಸಂಖ್ಯೆಯನ್ನು 58 ಕ್ಕೆ ಇಳಿಸಲಾಗಿದೆ.
ಇತ್ತೀಚಿನ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ ಪಾಕಿಸ್ತಾನದ ಪಾಸ್ಪೋರ್ಟ್ ಸತತ ನಾಲ್ಕನೇ ವರ್ಷ 100 ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ನಾಗರಿಕರು ಮುಂಗಡ ವೀಸಾ ಇಲ್ಲದೆ (visa free travel) 33 ದೇಶಗಳಿಗೆ ಮಾತ್ರವೇ ಪ್ರಯಾಣಿಸಬಹುದು.
ಒಂದು ದೇಶದ ನಾಗರಕರು ವೀಸಾ ಮುಕ್ತವಾಗಿ ಎಷ್ಟು ದೇಶಗಳಿಗೆ ಪ್ರಯಾಣಿಸಬಹುದು ಎನ್ನುವುದರ ಆಧಾರದ ಮೇಲೆ 199 ದೇಶಗಳಿಗೆ ಹೆನ್ಲೀ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ರ‍್ಯಾಂಕಿಂಗ್ ನೀಡಲಾದೆ. ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ನ (ಐಎಟಿಎ) ದತ್ತಾಂಶ ಆಧರಿಸಿ ಈ ಪಟ್ಟಿ ಮಾಡಲಾಗಿದೆ.
ಪಾಕಿಸ್ತಾನದ ಮತ್ತು ಯೆಮೆನ್ ದೇಶಗಳ ನಾಗರಿಕರು ತಲಾ 33 ದೇಶಗಳಿಗೆ ಮುಂಗಡ ವೀಸಾ ಮುಕ್ತ ಪ್ರಯಾಣಾವಕಾಶವನ್ನು ಹೊಂದಿದ್ದಾರೆ. ಅಂತೆಯೇ ಈ ಎರಡು ದೇಶಗಳು 100ನೇ ಸ್ಥಾನವನ್ನು ಹಂಚಿಕೊಂಡಿವೆ. ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ ಪಾಕಿಸ್ತಾನಕ್ಕಿಂತ ಹೀನವಾಗಿರುವುದು ಇರಾಕ್ (101), ಸಿರಿಯಾ (102) ಮತ್ತು ಅಫ್ಘಾನಿಸ್ತಾನ (103). ಅಫ್ಘಾನಿಸ್ತಾನ ವಿಶ್ವದ ಅತ್ಯಂತ ದುರ್ಬಲ ಪಾಸ್ಪೋರ್ಟ್ ಹೊಂದಿರುವ ದೇಶವೆನಿಸಿದೆ. ಅದರ ನಾಗರಿಕರು ಕೇವಲ 26 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು.
ಇರಾನ್ ಮತ್ತು ಸುಡಾನ್ 94 ನೇ ಸ್ಥಾನ, ಎರಿಟ್ರಿಯಾ 95 ನೇ ಸ್ಥಾನ, ಉತ್ತರ ಕೊರಿಯಾ 96 ನೇ ಸ್ಥಾನ, ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ 97 ನೇ ಸ್ಥಾನ, ಲಿಬಿಯಾ ಮತ್ತು ನೇಪಾಳ 98 ನೇ ಸ್ಥಾನ ಮತ್ತು ಸೊಮಾಲಿಯಾ 99 ನೇ ಸ್ಥಾನದಲ್ಲಿವೆ.
ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ ಭಾರತ 82ನೇ ಸ್ಥಾನ
ಹೆನ್ಲೀ ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ ಭಾರತ 82ನೇ ಸ್ಥಾನ ಪಡೆದಿದೆ. ಭಾರತದ ನಾಗರಿಕರು 58 ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಬಹುದು. 195 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯುವ ಮೂಲಕ ಸಿಂಗಾಪುರ ಮತ್ತೊಮ್ಮೆ ದಾಖಲೆಯ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಜರ್ಮನಿ, ಇಟಲಿ, ಜಪಾನ್, ಫ್ರಾನ್ಸ್ ಮತ್ತು ಸ್ಪೇನ್ ಕ್ರಮವಾಗಿ 192 ದೇಶಗಳಿಗೆ ಪ್ರವೇಶ ನೀಡುವ ಮೂಲಕ ಎರಡನೇ ಸ್ಥಾನದಲ್ಲಿವೆ.
ಆಸ್ಟ್ರಿಯಾ, ಫಿನ್ಲ್ಯಾಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ಮೂರನೇ ಸ್ಥಾನದಲ್ಲಿವೆ. 190 ದೇಶಗಳ ಪ್ರಯಾಣಕ್ಕೆ ಅವಕಾಶ ನೀಡುವ ಮೂಲಕ ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನೊಂದಿಗೆ ಯುನೈಟೆಡ್ ಕಿಂಗ್ಡಮ್ ನಾಲ್ಕನೇ ಸ್ಥಾನದಲ್ಲಿದೆ. 186 ಸ್ಥಳಗಳಿಗೆ ಪ್ರವೇಶದೊಂದಿಗೆ ಯುನೈಟೆಡ್ ಸ್ಟೇಟ್ಸ್ ಎಂಟನೇ ಸ್ಥಾನದಲ್ಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೊದಲ ಬಾರಿಗೆ 185 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಮೂಲಕ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ. 62ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಜಿಗಿಯುವ ಮುಖೇನ ವಿಶ್ವದ ಗಮನಸೆಳೆದಿದೆ. ವ್ಯವಹಾರ, ಪ್ರವಾಸೋದ್ಯಮ ಮತ್ತು ಹೂಡಿಕೆಗೆ ಜಾಗತಿಕ ಕೇಂದ್ರವಾಗಲು ಯುಎಇ ಪ್ರಯತ್ನಿಸುತ್ತಿರುವುದರ ಫಲ ಇದು ಎನ್ನುತ್ತಾರೆ ಹೆನ್ಲೆ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಸಿಇಒ ಜುರ್ಗ್ ಸ್ಟೆಫೆನ್.
ಭಾರತೀಯರಿಗೆ ವೀಸಾ-ಮುಕ್ತ ಸ್ಥಳಗಳ ಪಟ್ಟಿ
2024 ರ ಶ್ರೇಯಾಂಕದಂತೆ, ಭಾರತೀಯರು ವೀಸಾ ಇಲ್ಲದೆ 58 ಸ್ಥಳಗಳಿಗೆ ಪ್ರಯಾಣಿಸಬಹುದು. ಈ ಗಮ್ಯಸ್ಥಾನಗಳು -
- ಅಂಗೋಲಾ
- ಬಾರ್ಬಡೋಸ್
- ಭೂತಾನ್
- ಬೊಲಿವಿಯಾ
- ಬ್ರಿಟಿಷ್ ವರ್ಜಿನ್ ದ್ವೀಪಗಳು
- ಬುರುಂಡಿ
- ಕಾಂಬೋಡಿಯಾ
- ಕೇಪ್ ವರ್ಡೆ ದ್ವೀಪಗಳು
- ಕೊಮೊರೊ ದ್ವೀಪಗಳು
- ಕುಕ್ ದ್ವೀಪಗಳು
- ಜಿಬೌಟಿ
- ಡೊಮಿನಿಕಾ
- ಇಥಿಯೋಪಿಯಾ
- ಫಿಜಿ
- ಗ್ರೆನಡಾ
- ಗಿನಿ-ಬಿಸ್ಸೌ ಹೈಟಿ
- ಇಂಡೋನೇಷ್ಯಾ
- ಇರಾನ್
- ಜಮೈಕಾ
- ಜೋರ್ಡಾನ್
- ಕಝಾಕಿಸ್ತಾನ್
- ಕೀನ್ಯಾ
- ಕಿರಿಬಾಟಿ
- ಲಾವೋಸ್
- ಮಕಾವು (SAR ಚೀನಾ)
- ಮಡಗಾಸ್ಕರ್
- ಮಲೇಷ್ಯಾ
- ಮಾಲ್ಡೀವ್ಸ್
- ಮಾರ್ಷಲ್ ದ್ವೀಪಗಳು
- ಮಾರಿಟಾನಿಯ
- ಮಾರಿಷಸ್
- ಮೈಕ್ರೋನೇಶಿಯಾ
- ಮಾಂಟ್ಸೆರಾಟ್
- ಮೊಜಾಂಬಿಕ್
- ಮ್ಯಾನ್ಮಾರ್
- ನೇಪಾಳ
- ನಿಯು
- ಪಲಾವ್ ದ್ವೀಪಗಳು
- ಕತಾರ್
- ರುವಾಂಡಾ
- ಸಮೋವಾ
- ಸೆನೆಗಲ್
- ಸೀಶೆಲ್ಸ್
- ಸಿಯೆರಾ ಲಿಯೋನ್
- ಸೊಮಾಲಿಯಾ
- ಶ್ರೀಲಂಕಾ
- ಸೇಂಟ್ ಕಿಟ್ಸ್ ಮತ್ತು ನೆವಿಸ್
- ಸೇಂಟ್ ಲೂಸಿಯಾ
- ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
- ತಾಂಜಾನಿಯಾ
- ಥೈಲ್ಯಾಂಡ್
- ಟಿಮೋರ್-ಲೆಸ್ಟೆ
- ಟ್ರಿನಿಡಾಡ್ ಮತ್ತು ಟೊಬಾಗೊ
- ಟುನೀಶಿಯಾ
- ಟುವಾಲು
- ವನವಾಟು
- ಜಿಂಬಾಬ್ವೆ