ಶುಕ್ರವಾರ, ಡಿಸೆಂಬರ್ 13, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Glen Maxwell: 109 ಮೀಟರ್ ದೂರದ ಸಿಕ್ಸರ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
Glen Maxwell: 109 ಮೀಟರ್ ದೂರದ ಸಿಕ್ಸರ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್; ಇಲ್ಲಿದೆ ವಿಡಿಯೋ

ಸಿಡ್ನಿ: ವೆಸ್ಟ್​ ಇಂಡೀಸ್​ ವಿರುದ್ಧದ ದ್ವಿತೀಯ ಟಿ20(Australia vs West Indies 2nd T20I) ಪಂದ್ಯದಲ್ಲಿ ಶತಕ ಬಾರಿಸುವ ಜತೆಗೆ ಬಹು ದೂರದ ಸಿಕ್ಸರ್​ ಬಾರಿಸಿಯೂ ಗ್ಲೆನ್ ಮ್ಯಾಕ್ಸ್​ವೆಲ್​(Glenn Maxwell) ಸುದ್ದಿಯಾಗಿದ್ದಾರೆ. ಆಸ್ಟ್ರೇಲಿಯಾ ಬ್ಯಾಟಿಂಗ್​ ಇನ್ನಿಂಗ್ಸ್​ನ 12ನೇ ಓವರ್​ನಲ್ಲಿ ಅಲ್ಜಾರಿ ಜೋಸೆಫ್​ ಎಸೆತದಲ್ಲಿ ಮ್ಯಾಕ್ಸ್​ವೆಲ್​ ಬರೋಬ್ಬರಿ 109 ಮೀಟರ್ ದೂರದ ಸಿಕ್ಸರ್​ ಬಾರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಈ ಸಿಕ್ಸರ್​ ಬಾರಿಸುವ ವೇಳೆ ಮ್ಯಾಕ್ಸ್​ವೆಲ್​ 41 ರನ್​ ಗಳಿಸಿದ್ದರು. ಸಿಕ್ಸರ್​ ನೆರವಿನಿಂದ 47 ರನ್​ ಕಲೆಹಾಕಿದರು. ಆ ಬಳಿಕವೂ ಹೊಡಿ ಬಡಿ ಆಟವಾಡಿದ ಮ್ಯಾಕ್ಸ್​ವೆಲ್​ ಕೇವಲ 50 ಎಸೆತಗಳಲ್ಲಿ 100 ರನ್​ ಪೂರ್ತಿಗೊಳಿಸಿದರು. ಮೈದಾನದ ಮೂಲೆ ಮೂಲೆಗೂ ಎಡ-ಬಲ ಬ್ಯಾಟಿಂಗ್​ ಶೈಲಿಯಲ್ಲಿ ಸಿಕ್ಸರ್ ಮತ್ತು​ ಬೌಂಡರಿ ಬಾರಿಸಿ 55 ಎಸೆತಗಳಲ್ಲಿ 120 ರನ್​ ಹೊಡೆದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್​ ವೇಳೆ ಬರೋಬ್ಬರಿ 12 ಬೌಂಡರಿ ಮತ್ತು 8 ಸಿಕ್ಸರ್​ ಸಿಡಿಯಿತು.

ಮ್ಯಾಕ್ಸ್​ವೆಲ್​ ಅವರು ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ 5 ಶತಕ ಬಾರಿಸಿದ ರೋಹಿತ್​ ಶರ್ಮ ಅವರ ದಾಖಲೆಯನ್ನು ಸರಿಗಟ್ಟಿದರು. ಇದೀಗ ಉಭಯ ಆಟಗಾರರು ಕೂಡ 5 ಶತಕ ಬಾರಿಸಿ ಅತಿ ಹೆಚ್ಚು ಶತಕ ಬಾರಿಸಿದ ಅಗ್ರ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್​ವೆಲ್​ ಅವರ ಈ ಬ್ಯಾಟಿಂಗ್​ ಸಾಹಸದಿಂದ ಆಸ್ಟ್ರೇಲಿಯಾ 34 ರನ್​ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ವಿಂಡೀಸ್ ತಂಡ​ 14 ರನ್​ಗಳಿಸುವಷ್ಟರಲ್ಲಿ ಆಸೀಸ್​ ತಂಡದ ಮೊದಲ ವಿಕೆಟ್​ ಕಿತ್ತರೂ ಕೂಡ ಆ ಬಳಿಕ ಲಯ ಕಳೆದುಕೊಂಡು ಸರಿಯಾಗಿ ದಂಡಿಸಿಕೊಂಡರು.​ ಆಸೀಸ್​ ಕೇವಲ 4 ವಿಕೆಟ್​ ಕಳೆದುಕೊಂಡು 241 ರನ್​ ಬಾರಿಸಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ವೆಸ್ಟ್​ ಇಂಡೀಸ್​ ನಿಗದಿತ 20 ಓವರ್​ ಬ್ಯಾಟಿಂಗ್​ ನಡೆಸಿ 9 ವಿಕೆಟ್​ಗೆ 207ರನ್ ಬಾರಿಸಲಷ್ಟೇ ಶಕ್ತವಾಯಿತು. ಮೊದಲ ಮೂವರು ಬ್ಯಾಟರ್​ಗಳಾದ ಬ್ರಾಂಡನ್ ಕಿಂಗ್(5), ಜಾನ್ಸನ್ ಚಾರ್ಲ್ಸ್(24) ಮತ್ತು ನಿಕೋಲಸ್​ ಪೂರನ್​(18) ಅಗ್ಗಕ್ಕೆ ಔಟಾದದ್ದು ತಂಡದ ಸೋಲಿಗೆ ನೇರ ಕಾರಣವಾಯಿತು. ಇದರಲ್ಲಿ ಕನಿಷ್ಠ ಒಬ್ಬರಾದರೂ 50 ರನ್​ ಬಾರಿಸುತ್ತಿದ್ದರೆ ಪಂದ್ಯವನ್ನು ಆರಾಮವಾಗಿ ಗೆಲ್ಲಬಹುದಿತ್ತು.

ನಾಯಕ ರೋವ್ಮನ್ ಪೊವೆಲ್ ಏಕಾಂಗಿಯಾಗಿ ಹೋರಾಟ ನಡೆಸಿ 63 ರನ್​ ಬಾರಿಸಿದರು. ಆ್ಯಂಡ್ರೆ ರಸೆಲ್​ 37 ರನ್​ ಬಾರಿಸಿ ಮಾರ್ಕಸ್​ ಸ್ಟೋಯಿನಿಸ್​ಗೆ ವಿಕೆಟ್​ ಒಪ್ಪಿಸಿದರು. ಜಾಸನ್​ ಹೋಲ್ಡರ್​ ಅಜೇಯ 28 ರನ್​ ಬಾರಿಸಿದರೂ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇತ್ತಂಡಗಳ ನಡುವಣ ಮೂರನೇ ಹಾಗು ಅಂತಿಮ ಟಿ20 ಪಂದ್ಯ ಫೆಬ್ರವರಿ 13ರಂದು ನಡೆಯಲಿದೆ. ಈ ಪಂದ್ಯದಲ್ಲಾದರೂ ಗೆದ್ದು ವಿಂಡೀಸ್​ ವೈಟ್​ ವಾಶ್​ ಮುಖಭಂಗದಿಂದ ಪಾರಾಗಲಿದೆಯಾ ಎಂದು ಕಾದು ನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist