ಗ್ಲಾಮರಸ್ ಉಡುಗೆ ಯಲ್ಲಿ ಫೋಟೊಶೂಟ್ ಮಾಡಿಸಿಕೊಂಡ ನಟಿ ಕೀರ್ತಿ ಸುರೇಶ್
ಸಾಂಪ್ರದಾಯಿಕ ಉಡುಗೆಗಳನ್ನು ಹೆಚ್ಚಾಗಿ ಧರಿಸುತ್ತಿದ್ದ ನಟಿ ಕೀರ್ತಿ ಸುರೇಶ್ ಗ್ಲಾಮರಸ್ ಉಡುಗೆ ತೊಟ್ಟಿದ್ದಾರೆ.
ಗ್ಲಾಮರಸ್ ಉಡುಗೆ ತೊಟ್ಟು ಹೊಸ ಫೋಟೊಶೂಟ್ ಮಾಡಿಸಿಕೊಂಡಿರುವ ಕೀರ್ತಿ ಸುರೇಶ್.
ತಮ್ಮ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.
ಕೀರ್ತಿ ಸುರೇಶ್ ಸಾಮಾನ್ಯವಾಗಿ ಗ್ಲಾಮರಸ್ ಅಲ್ಲದ ಬಹುತೇಕ ಮಹಿಳೆಯರು ತೊಡುವ ಉಡುಗೆಗಳನ್ನಷ್ಟೆ ತೊಡುತ್ತಾರೆ.
ಸೀರೆಯುಟ್ಟು ಅಪ್ಸರೆಯಂತೆ ಕಂಗೊಳಿಸಿದ ‘ಗೌರಿ’ ಸಾನ್ಯ ಅಯ್ಯರ್
ಬಿಗ್ ಬಾಸ್ ಬೆಡಗಿ (Bigg Boss Kannada) ಸಾನ್ಯ ಅಯ್ಯರ್ (Saanya Iyer) ಅವರು ಸ್ಯಾಂಡಲ್‌ವುಡ್‌ಗೆ (Sandalwood) ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಗೌರಿ ಸಿನಿಮಾಗೆ ಹೀರೋಯಿನ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸೀರೆಯುಟ್ಟು ಮಿಂಚಿದ್ದರು. ಈಗ ಸೀರೆಯಲ್ಲಿನ ತಮ್ಮ ಚೆಂದದ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ಫೋಟೋಶೂಟ್‌ನಲ್ಲಿ ಸಾನ್ಯ ಅಯ್ಯರ್ ಅವರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಲೈಟ್ ಬಣ್ಣದ ಸೀರೆಯುಟ್ಟು ಕೊಂಚ ರೆಟ್ರೋ ಸ್ಟೈಲಿನಲ್ಲಿ ಮಿಂಚಿದ್ದಾರೆ. ಹಸಿರು ಮತ್ತು ಸಿಲ್ವರ್ ಮಿಶ್ರಿತ ಬಣ್ಣದ ಜ್ಯುವೆಲ್ಲರಿ, ತಲೆಗೆ ಗುಲಾಬಿ ಹೂ ಮುಡಿದು ಡಿಫರೆಂಟ್ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಸಾನ್ಯ ಸೀರೆ ಲುಕ್ ನೋಡ್ತಿದಂತೆ ಸೀರೆಯಲ್ಲಿ ಹುಡುಗಿರ ನೋಡಲೇಬಾರದು ನಿಲ್ಲಲ್ಲ ಟೆಂಪ್ರೇಚರ್ ಎಂದು ಪಡ್ಡೆಹುಡುಗರು ಹಾಡು ಹಾಡಲು ಶುರುಮಾಡಿದ್ದಾರೆ.
ಸಾನ್ಯ ಅಯ್ಯರ್‌ಗೆ ನಾಯಕಿಯಾಗಿ ನಟಿಸಬೇಕು ಎಂಬುದು ಚಿಕ್ಕ ವಯಸ್ಸಿನಿಂದ ಆಸೆ ಇತ್ತು. ಅದರಂತೆ ಈಗ ಇಂದ್ರಜಿತ್ ಲಂಕೇಶ್ (Indrajit Lankesh) ಅವರ ನಿರ್ದೇಶನದ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.