ಶುಂಠಿಗೆ ಕಳೆನಾಶಕ ಸಿಂಪಡಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು
ಹಾಸನ, ಆ.29: ಕಳೆನಾಶಕ ಸಿಂಪಡಣೆ ವೇಳೆ ಮುಂಜಾಗ್ರತಾ ಕ್ರಮ ವಹಿಸದೆ ಯಡವಟ್ಟು ಮಾಡಿಕೊಂಡಿದ್ದು ಅಮಾಯಕ ಯುವಕ ಸಾವನ್ನಪ್ಪಿದ್ದಾನೆ(Death).
ಹಾಸನ(Hassan) ತಾಲೂಕಿನ ಕಾರ್ಲೆ ಗ್ರಾಮದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯದಿಂದ ಕೀರ್ತಿ(23) ಎಂಬ ಯುವಕ ಮೃತಪಟ್ಟಿದ್ದಾನೆ. ಕೀರ್ತಿ, ಸತತ 1 ವಾರ ಕಾಲ ಶುಂಠಿಗೆ(Ginger) ಕಳೆನಾಶಕ ಸಿಂಪಡಿಸಿದ್ದ. ಬಳಿಕ ದಿಢೀರನೆ ವಾಂತಿ, ಸುಸ್ತಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ.
ಆಸ್ಪತ್ರೆಗೆ ದಾಖಲಾಗಿ 4 ದಿನಗಳ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ. ರಕ್ತದ ಪರೀಕ್ಷೆ ವೇಳೆ ಕೀರ್ತಿ ದೇಹದಲ್ಲಿ ವಿಷ ಇರೋದು ದೃಢವಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟೋಲ್ ಗೇಟ್ ಸಿಬ್ಬಂದಿ ಜೊತೆ ವಾಗ್ವಾದ
ಉಡುಪಿಯ ಹೆಜಮಾಡಿ ಟೋಲ್ ಗೇಟ್ನಲ್ಲಿ ಮಾರಾಮಾರಿಯಾಗಿದೆ. ಬೆಂಗಳೂರಿನಿಂದ ಬಂದಿದ್ದ ಯುವಕರ ತಂಡ ಮತ್ತು ಸಿಬ್ಬಂದಿ ನಡುವೆ ಮಾರಾಮಾರಿಯಾಗಿದೆ. ಬೆಂಗಳೂರಿನ ಯುವಕರು ಫಾಸ್ಟ್ ಟ್ಯಾಗ್ ಇಲ್ಲದ ಕಾರಿನಲ್ಲಿ ಬಂದಿದ್ದರು. ಉಡುಪಿ ಮತ್ತು ಮಂಗಳೂರು ಗಡಿಭಾಗದಲ್ಲಿರುವ ಹೆಜಮಾಡಿ ಟೋಲ್ ಬಳಿ ಗೇಟ್ ತೆಗೆದು ಕಾರ್ ಪಾಸ್ ಮಾಡಿದ್ದರು.
ಈ ವೇಳೆ ಟೋಲ್ ಸಿಬ್ಬಂದಿ ದುರಹಂಕಾರದಿಂದ ವರ್ತಿಸಿ, ರೌಡಿಗಳಂತೆ ಮುಗಿಬಿದ್ದಿದ್ದಾರೆ. ಸಿಬ್ಬಂದಿ ವರ್ತನೆಯಿಂದ ಆಕ್ರೋಶಗೊಂಡ ಯುವಕರ ತಂಡ ಜಗಳಕ್ಕೆ ಮುಂದಾಗಿದ್ದು ಟೋಲ್ ಸಿಬ್ಬಂದಿ ಮತ್ತು ಯುವಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಹೀಗೆ ಜಗಳದಿಂದಾಗಿ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.