ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗಗನ ಸಖಿಗೆ ಲೈಂಗಿಕ ಕಿರುಕುಳ; ವಿದೇಶಿ ಪ್ರಜೆಯ ಬಂಧನ!

Twitter
Facebook
LinkedIn
WhatsApp
ಗಗನ ಸಖಿಗೆ ಲೈಂಗಿಕ ಕಿರುಕುಳ; ವಿದೇಶಿ ಪ್ರಜೆಯ ಬಂಧನ!

ಬೆಂಗಳೂರು: ವಿಮಾನದಲ್ಲಿ (Airplane) ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಪ್ರಜೆಯನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Devanahalli International Airport) ಪೊಲೀಸರು ಬಂಧಿಸಿದ್ದಾರೆ. ಅಕ್ರಂ ಅಹಮದ್ ಬಂಧಿತ ಅರೋಪಿ. ಮಾಲ್ಡೀವ್ಸ್​​​ನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ​ವಿಮಾನದಲ್ಲಿ ಆರೋಪಿ ಅಕ್ರಂ ಅಹಮದ್ ಬಿಜಿನೆಸ್ ಕ್ಲಾಸ್​​ನಲ್ಲಿ ಪ್ರಯಾಣ ಮಾಡುತ್ತಿದ್ದನು. ಈ ವೇಳೆ ಆರೋಪಿ ಗಗನಸಖಿಗೆ (Air Hostess) ನಿನ್ನ ರೇಟ್ ಎಷ್ಟು ? ಎಷ್ಟಕ್ಕೆ ಬರುತ್ತೀಯಾ? ಎಷ್ಟು ಡಾಲರ್ ಕೊಟ್ಟರೇ ಬರುತ್ತೀಯಾ? ನೂರು ಡಾಲರ್ ಕೊಟ್ಟರೇ ಸಾಕಾ? ಅಥವಾ ಇನ್ನೂ ಬೇಕೆ ? ಎಂದೆಲ್ಲಾ ಕೇಳಿದ್ದಾನೆ.

ಈ ನಡುವೆ ಅಕ್ರಂ ಅಹಮದ್​ ಕುಳಿತಿದ್ದ ಸೀಟ್ ಬಳಿ ಗಗನಸಖಿ ನಡೆದುಕೊಂಡು ಹೋಗುವಾಗ ಆರೋಪಿ​ ಮೈ ಮೇಲೆ ಕೈ ಹಾಕಿದ್ದಾನೆ. ಘಟನೆ ಸಂಬಂಧ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೂರು ಡಾಲರ್ ಕೊಟ್ಟರೇ ಸಾಕಾ ಎಂದ ಆರೋಪಿ

ಆರೋಪಿ I have been looking for a girl like you , how much you charge for service and when will you be free ಎಂದು ಕೇಳಿದ್ದಾನೆ. ನಂತರ  ಸರ್ವಿಸ್​ಗೆ ಹತ್ತು ಡಾಲರ್ ಬದಲಾಗಿ ನೂರು ಡಾಲರ್ ನೀಡುತ್ತೇನೆ. ನೀನೆ ಇಟ್ಟಿಕೋ ಎಂದಿದ್ದಾನೆ. ಅಲ್ಲದೇ ಗಗನ ಸಖಿಯ ದೇಹವನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಬೆಂಗಳೂರಲ್ಲಿ ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ಆರೋಪಿ ಎದ್ದು ನಿಲ್ಲಲು ಪ್ರಯತ್ನಿಸಿದ್ದಾನೆ. ಈ ವೇಳೆ ಗಗನಸಖಿ ಕುಳಿತುಕೊಳ್ಳಿ ಎಂದು ಹೇಳಿದಾರೆ. ಆಗ ಆರೋಪಿ I love rough things and you are very rough ಎಂದು ಹೇಳಿ ಮುಜುಗರ ಉಂಟು ಮಾಡಿದ್ದಾನೆ.

ಕೊರಿಯರ್ ಮೂಲಕ ವಂಚನೆ: ನೀವು ಸ್ವಲ್ಪ ಯಾಮಾರಿದರೂ ವಂಚಕರ ಆಟ ಹೇಗಿರುತ್ತೆ ನೋಡಿ

ಆನ್​ಲೈನ್ ಶಾಪಿಂಗ್ ಈಗ ಬಹಳ ಸಾಮಾನ್ಯವಾಗಿ ಹೋಗಿದೆ. ಸಣ್ಣ ಪುಟ್ಟ ವಸ್ತುಗಳನ್ನೂ ನಾವು ಆನ್​ಲೈನ್ ಮೂಲಕವೇ ಖರೀದಿಸುವುದು ಅಭ್ಯಾಸವಾಗುತ್ತಿದೆ. ಅಂತೆಯೇ ಆನ್​ಲೈನ್ ಸಂಬಂಧಿತ ಸೈಬರ್ ಕ್ರೈಮ್ (cyber crime cases) ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಎಟಿಎಂ ಕಾರ್ಡ್ ವಿವರ ಪಡೆಯುವುದು, ನಕಲಿ ಲಿಂಕ್ ಮೂಲಕ ಹ್ಯಾಕ್ ಮಾಡುವುದು, ಸುಳ್ಳು ಭರವಸೆ ನೀಡಿ ಹಣ ಲಪಟಾಯಿಸುವುದು ಹೀಗೆ ನಾನಾ ರೀತಿಯಲ್ಲಿ ವಂಚನೆಗಳು ನಡೆಯುತ್ತವೆ. ದುಷ್ಕರ್ಮಿಗಳು ವಂಚನೆಯ ಹೊಸ ಹೊಸ ದಾರಿ ಹುಡುಕುತ್ತಿರುತ್ತಾರೆ. ಕೆಲವೊಮ್ಮೆ ನಾವು ಅಂದಾಜೂ ಮಾಡಲು ಸಾಧ್ಯ ಇಲ್ಲದಂತಹ ರೀತಿಯ ಪ್ರಕರಣಗಳನ್ನು ಕಾಣಬಹುದು. ಇದೀಗ ಕೊರಿಯರ್ ಕಂಪನಿಯ ಹೆಸರಿನಲ್ಲಿ ವಂಚನೆ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ನೀವು ಆನ್​ಲೈನ್​ನಲ್ಲಿ ಶಾಪಿಂಗ್ ಮಾಡಿದಾಗ ಸಾರಿಗೆ ಅಥವಾ ಕೊರಿಯರ್ ಕಂಪನಿಯು ಆ ಸರಕನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ. ಡೆಲಿವರಿಗೆ ಒಂದಷ್ಟು ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಇದು 1ರಿಂದ 5 ದಿನಗಳವರೆಗೆ ಸಮಯ ಇರುತ್ತದೆ. ನೀವು ಸ್ವಲ್ಪ ವ್ಯವಧಾನ ಕಳೆದುಕೊಂಡರೆ ಯಡವಟ್ಟಾಗುವ ಸಾಧ್ಯತೆ ಇರುತ್ತದೆ. ಬೇಗನೇ ಪಾರ್ಸಲ್ ಪಡೆಯಬೇಕೆಂಬ ಆಸೆಯಲ್ಲಿ ನೀವು ಕೊರಿಯರ್ ಕಂಪನಿಯ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ ಮೂಲಕ ಹುಡುಕಿ ಪಡೆಯುತ್ತೀರಿ.

ಗೂಗಲ್​ನಿಂದ ಪಡೆದ ಆ ಸಂಖ್ಯೆಗೆ ಕರೆ ಮಾಡಿ, ಪಾರ್ಸಲ್ ಅನ್ನು ಬೇಗನೇ ಕಳುಹಿಸಿ ಎಂದು ಕರೆ ಮಾಡುತ್ತೀರಿ. ಆ ಫೋನ್ ರಿಸೀವ್ ಮಾಡಿದ ವ್ಯಕ್ತಿ, ತಾನು ಬೇಗನೆ ಪಾರ್ಸಲ್ ಡೆಲಿವರಿಗೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ. ಆದರೆ 5 ರೂ ಇತ್ಯಾದಿ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿ ಕ್ಯೂಆರ್ ಕೋಡ್ ಅನ್ನು ನಿಮ್ಮ ಮೊಬೈಲ್​ಗೆ ಕಳುಹಿಸಲಾಗುತ್ತದೆ. ನೀವು ಆ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಿದರೆ 5 ರೂ ಬದಲು 5,000 ರೂ, 10,000 ರೂ ಇತ್ಯಾದಿ ಅಧಿಕ ಮೊತ್ತದ ಹಣವು ಖಾತೆಯಿಂದ ಕಡಿತಗೊಳ್ಳುತ್ತದೆ. ಈ ಮೂಲಕ ನೀವು ವಂಚನೆಗೊಳಗಾಗುತ್ತೀರಿ.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

ನಿಮಗೆ ಪಾರ್ಸೆಲ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದರೆ, ಕೊರಿಯರ್ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಒದಗಿಸಲಾದ ವಿವರಗಳನ್ನು ಬಳಸಿ. Google ನಲ್ಲಿ ಹುಡುಕುವಾಗ ಜಾಗರೂಕರಾಗಿರಿ. ಹಲವು ನಕಲಿ ವೆಬ್‌ಸೈಟ್‌ಗಳಿಂದ ವಂಚನೆ ನಡೆಯುತ್ತಿದೆ. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳ CVV ಅಥವಾ OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ವಂಚನೆಯ ಸಂದರ್ಭದಲ್ಲಿ, ನೀವು ಭಾರತ ಸರ್ಕಾರದ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬೇಕು. ಯಾವುದೇ ರೀತಿಯ ಸೈಬರ್ ವಂಚನೆಯ ಸಂದರ್ಭದಲ್ಲಿ ನೀವು cybercrime.gov.in ನಲ್ಲಿ ದೂರು ಸಲ್ಲಿಸಬಹುದು .

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist