ಭಾನುವಾರ, ಅಕ್ಟೋಬರ್ 6, 2024
ಮಡಿಕೇರಿ ದಸರಾಕ್ಕೆ ದಸರಾ ಇತಿಹಾಸದಲ್ಲಿ ಅತಿ ಹೆಚ್ಚು 1.50 ಕೋಟಿ ರೂಪಾಯಿ ಅನುದಾನ: ಡಾ. ಮಂತರ್ ಗೌಡ-ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.-30 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತ, 2 ಬಾರಿ ಜಿ. ಪಂ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಸಿಗಬಹುದೇ ಕಾಂಗ್ರೆಸ್ ಟಿಕೆಟ್?-ಮುಡಾ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; 14 ನಿವೇಶನ ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ!-Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು-Udayanidhi Stalin: ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನೇಮಕ; ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ!-CM Siddaramaiah: ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಅಲ್ಲವೇ?-MLC Election:ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ: ಕಾಂಗ್ರೆಸ್ಸಿನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿ.-Hathras: ಶಾಲೆಯ ಏಳಿಗೆಗಾಗಿ ಬಾಲಕನ ಬಲಿ, ಐವರ ಬಂಧನ-ಮುಡಾ ಕೇಸ್ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Gadag: ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ಸಾವು

Twitter
Facebook
LinkedIn
WhatsApp
Gadag: Horrible accident – ​​four members of the same family died

Gadag, ಆಗಸ್ಟ್​.18: ಸರ್ಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ (Accident) ಸಂಭವಿಸಿದ್ದು ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ (Death). ಗದಗ ಜಿಲ್ಲೆ (Gadag) ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ(45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತ ದುರ್ದೈವಿಗಳು.

ಮೃತ ಕುಟುಂಬ ಶ್ರಾವಣ ಮಾಸದ ನಿಮಿತ್ಯ ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟ್ಟಿತ್ತು. ಹೀಗಾಗಿ ಕಲ್ಲಾಪೂರ ಕಡೆಗೆ ಹೊರಟ್ಟಿದ್ದ ಕಾರು ಹಾಘೂ ಇಳಕಲ್ ನಿಂದ ಹುಬ್ಬಳ್ಳಿಗೆ ಹೊರಟಿದ್ದ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಸ್ಕೂಟರ್ ಗಳನ್ನು ಫ್ಲೈ ಓವರ್‌ನಿಂದ ಕೆಳಗೆಸೆದ ದಾರಿಹೋಕರರು!

ಬೆಂಗಳೂರು: ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ವೀಲಿಂಗ್ ಸಾಹಸ ಮಾಡುತ್ತಿದ್ದ ಇಬ್ಬರನ್ನು ನೋಡಿ ಆಕ್ರೋಶಗೊಂಡ ಇತರ ವಾಹನ ಸವಾರರು, ಅವರನ್ನು ಹಿಡಿದು, ಅವರ ಎರಡು ಸ್ಕೂಟರ್‌ಗಳನ್ನು ನೆಲಮಂಗಲ ಮೇಲ್ಸೇತುವೆಯಿಂದ ಕೆಳಗೆ ಎಸೆದ ಘಟನೆ ಗುರುವಾರ ನಡೆದಿದೆ.

ಅನೇಕ ನೆಟಿಜನ್‌ಗಳು ದಾರಿಹೋಕರರ ಕ್ರಮವನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಪೊಲೀಸರು ತಮ್ಮ ಅಂತಹ ಸ್ಟಂಟ್‌ಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರರು ಸೇರಿದಂತೆ ಇಬ್ಬರು ಯುವಕರು ತಮ್ಮ ಸ್ಕೂಟರ್‌ಗಳಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು.

ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಲ್ಲೂಬ್ಬ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಾಹನ ಸವಾರರು ಆತನ ಮತ್ತು ಮತ್ತೊಬ್ಬ ಯುವಕನ ಸ್ಕೂಟರ್​ಅನ್ನು ಫ್ಲೈಓವರ್ ನಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಹೀಲಿಂಗ್‌ ಮಾಡುತ್ತಿದ್ದ ಇಬ್ಬರು ಯುವಕರು ಮತ್ತು ಹಿಂಬದಿ ಸವಾರರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಅಲ್ಲಿ ನೆರೆದಿದ್ದ ವ್ಯಕ್ತಿಯೊಬ್ಬ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದು ಶನಿವಾರ ವೈರಲ್ ಆಗಿದೆ.

ಪರಿಸ್ಥಿತಿ ತಿಳಿಗೊಳಿಸಿ ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ದ್ವಿಚಕ್ರ ವಾಹನದ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಮತ್ತೊಂದೆಡೆ, ಗುರುವಾರ ಬೆಂಗಳೂರು ಈಶಾನ್ಯ ಸಂಚಾರ ಪೊಲೀಸರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೈಕ್​​ ವ್ಹೀಲಿಂಗ್​ ನಡೆಸಿ ಪುಂಡಾಟ ಮೆರೆದಿದ್ದ 44 ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದರು. ಬೈಕ್​ ವ್ಹೀಲಿಂಗ್​​​ ಸಂಬಂಧ 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಪತ್ನಿ ಕೊಂದು ಪರಾರಿಯಾಗಿದ್ದ ಪತಿ ಆತ್ಮಹತ್ಯೆಗೆ ಶರಣು..!

ಬೆಂಗಳೂರು(ಆ.18):  ದೊಡ್ಡಕಮ್ಮನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯ ಕೊಂದು ಶುಕ್ರವಾರ ಪರಾರಿ ಆಗಿದ್ದ ಕಾರ್ಮಿಕ ಆತ್ಮಹತ್ಯೆಗೆ ಶರಣಾದ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಕಮ್ಮನಹಳ್ಳಿ ಮಹೇಶ್ (40) ನಿವಾಸಿ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಮೀನಾ (36) ಮೇಲೆ ಕಬ್ಬಿಣ ಸಲಾಕೆಯಿಂದ ಹಲ್ಲೆ ನಡೆಸಿ ಶುಕ್ರವಾರ ಮಧ್ಯಾಹ್ನ ಕೊಂದು ಮಹೇಶ್ ಪರಾರಿಯಾ ಗಿದ್ದ. ಈ ಕೃತ್ಯದ ಬಳಿಕ ಮನೆ ಸಮೀಪ ನಿರ್ಜನ ಪ್ರದೇಶಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂ ರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ ಬಾಗೇಪಲ್ಲಿ ತಾಲೂಕಿನ ಮೀನಾ ಜ- ಮಹೇಶ್ 2ನೇ ವಿವಾಹವಾಗಿದ್ದ. ಇದಕ್ಕೂ ಮುನ್ನ ತನ್ನ ಮೊದಲಪತಿಯಿಂದ ಪ್ರತ್ಯೇಕವಾಗಿ ಇಬ್ಬರು ಮಕ್ಕಳ ಜತೆ ನಗರಕ್ಕೆ ಮೀನಾ ಬಂದಿ ದ್ದಳು. ಮೀನಾ ಮಕ್ಕಳ ಜನ ಮಹೇಶ್‌ ಅನ್ನೋನ್ಯವಾಗಿಯೆ ಇದ್ದ. ಆದರೆ ಇತ್ತೀಚಿಗೆ ಪತ್ನಿ ನಡವಳಿ ಮೇಲೆ ಶಂಕೆಗೊಂಡಿದ್ದ ಆತ, ಸದಾ ಮೊ ಲ್‌ನಲ್ಲಿ ಮಾತುಕತೆಯಲ್ಲಿ ನಿರತಳಾಗಿದ ಮೀನಾ ವರ್ತನೆಗೆ ಆಕ್ಷೇಪಿಸಿದ್ದ. ಇದೆ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾ ವಾಗಿತ್ತು. ಮನೆಯಲ್ಲಿ ಶುಕ್ರವಾದ ಮಧ್ಯಾಹ್ನ ಸತಿ-ಪತಿ ಮಧ್ಯೆ ಜಗಳವಾಗಿದೆ ಆಗ ಪತ್ನಿಯನ್ನ ಹತ್ಯೆ ಮಾಡಿದ್ದ. 

ಕ್ಷೌರ ಮಾಡುವ ವಿಚಾರಕ್ಕೆ ಜಗಳ,ಯುವಕನ ಕೊಲೆ

ಕೊಪ್ಪಳ, ಆಗಸ್ಟ್​.18: ಕ್ಷೌರ ಮಾಡುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ (Murder) ಅಂತ್ಯ ಕಂಡಿದೆ. ಕೊಪ್ಪಳ (Koppal) ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಕ್ಷೌರಿಕ ದಲಿತ ಯುವಕನ ಕೊಲೆ ಮಾಡಿದ್ದಾನೆ. ಯಮನೂರಸ್ವಾಮಿ ಬಂಡಿಹಾಳ(27) ಕೊಲೆಯಾದ ಯುವಕ. ಕಟಿಂಗ್ ಮಾಡುವ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ನಿನ್ನೆ ಕಟಿಂಗ್ ಮಾಡಿಸಿಕೊಳ್ಳಲು ಯಮನೂರಸ್ವಾಮಿ ಬಂಡಿಹಾಳ ಕಟಿಂಗ್ ಶಾಪ್​ಗೆ ಬಂದಿದ್ದರು. ಈ ವೇಳೆ ಕ್ಷೌರಿಕ ಮುದಕಪ್ಪ ಹಡಪದ ಹಾಗೂ ಯಮನೂರಸ್ವಾಮಿ ಬಂಡಿಹಾಳ ನಡುವೆ ಜಗಳ ಶುರುವಾಗಿತ್ತು.

ಆಗ ಮುದಕಪ್ಪ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ಕ್ಷೌರಿಕ ಮುದಕಪ್ಪ ಹಡಪದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಲಿತರಿಗೆ‌ ಕ್ಷೌರ ಮಾಡಲು ನಿರಾಕರಿಸಿದ್ದಕ್ಕೆ ಜಗಳ ನಡೆದು ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಜೊತೆಗೆ ಕ್ಷೌರಿಕನಿಂದ‌ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ