ಮುಂದಿನ ಎರಡು ದಿನ ಕರಾವಳಿಯಲ್ಲಿ ಮಳೆಯ ಮುನ್ಸೂಚನೆ!
ಮಂಗಳೂರು: ಅರಬಿ ಸಮುದ್ರ ದಲ್ಲಿ ನಿಮ್ನ ಒತ್ತಡ ನಿರ್ಮಾಣವಾಗಿದ್ದು, 2 ದಿನ ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಅ. 19ರ ಬೆಳಗ್ಗೆ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿಯ ಕೆಲವೆಡೆ ಮಂಗಳವಾರ ತಡರಾತ್ರಿ ಮಳೆಯಾಗಿತ್ತು. ಬುಧವಾರ ಕೆಲವೆಡೆ ಸಾಧಾರಣ ಮಳೆ ಯಾಗಿದೆ.
ಉಳಿದಂತೆ ಬಿಸಿಲು ಮತ್ತು ಮೋಡದ ವಾತಾವರಣ ಇತ್ತು. ಮಂಗಳೂರಿನಲ್ಲಿ 31.2 ಡಿ.ಸೆ. ಗರಿಷ್ಠ ಮತ್ತು 24.1 ಡಿ.ಸೆ. ಕನಿಷ್ಠ ತಾಪಮಾನ ಇತ್ತು.
ಸಿಡಿಲು ಬಡಿದು ಹಾನಿ
ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆಯ ಗುಡುಗು ಸಹಿತ ಮಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ಶೀನಪ್ಪ ದೇವಸ್ಯ ಅವರ ಮನೆಗೆ ಮಂಗಳವಾರ ಸಂಜೆ ಸಿಡಿಲು ಬಡಿದಿದೆ. ಗೋಡೆ, ಬಾಗಿಲು, ಸ್ವಿಚ್ ಬೋರ್ಡಿಗೆ ಹಾನಿಯಾಗಿದೆ.
ಅರಂಬೂರು ಬಳಿಯ ನೆಡಿcಲ್ ಉಕ್ರಪ್ಪ ಗೌಡ ಅವರ ಮನೆ ಮತ್ತು ಕೊಟ್ಟಿಗೆಗೆ ಸಿಡಿಲು ಬಡಿಲು ಹಾನಿ ಸಂಭವಿಸಿದೆ. ದೇವಚಳ್ಳ ಗ್ರಾಮದ ಸೇವಾಜೆ ಬಳಿಯ ಕರಂಗಿಲಡ್ಕ ಗಂಗಾಧರ ಗೌಡರ ಮನೆಯ ಇನ್ವರ್ಟರ್‌ಗೆ
ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ- ಸ್ಥಳೀಯಾಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದರು.