ಭಾನುವಾರ, ಏಪ್ರಿಲ್ 21, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್​ ಬಂದಿದ್ದೇನೆ; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ, ಮಾರ್ಟಿನ್ ತಂಡ

Twitter
Facebook
LinkedIn
WhatsApp
ಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್​ ಬಂದಿದ್ದೇನೆ; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ, ಮಾರ್ಟಿನ್ ತಂಡ

ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್​’ ಸಿನಿಮಾ  ತಂಡದವರು ವಿಮಾನ ದುರಂತದಿಂದ ಪಾರಾಗಿದ್ದಾರೆ. ಚಿತ್ರತಂಡದವರು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಷಯ ತಿಳಿಸಿದ್ದಾರೆ. ‘ಮಾರ್ಟಿನ್​’ ಸಿನಿಮಾದ ಶೂಟಿಂಗ್​ ಬಿರುಸಿನಿಂದ ಸಾಗುತ್ತಿವೆ. ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದವರ ಜೊತೆ ಧ್ರುವ ಸರ್ಜಾ ಅವರು ಶ್ರೀನಗರಕ್ಕೆ ತೆರಳಿದ್ದರು. ಅಲ್ಲಿ ಶೂಟಿಂಗ್​ ಮುಗಿಸಿಕೊಂಡು ದೆಹಲಿಗೆ ವಾಪಸ್​ ಬರುವಾಗ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆ ಸಂದರ್ಭದ ವಿಡಿಯೋವನ್ನು ಧ್ರುವ ಸರ್ಜಾ  ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್​​​ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಇಂಡಿಗೋ ವಿಮಾನದಲ್ಲಿ ‘ಮಾರ್ಟಿನ್​’ ಚಿತ್ರತಂಡದವರು ವಿಡಿಯೋ ಮಾಡಿದ್ದಾರೆ. ‘ಇವತ್ತಿನ ರೀತಿ ಇಷ್ಟು ಕೆಟ್ಟ ಅನುಭವ ಇಡೀ ಜೀವನದಲ್ಲೇ ಆಗಿರಲಿಲ್ಲ. ಈಗ ನಾವು ಸೇಫ್​ ಆಗಿದ್ದೇವೆ. ಜೈ ಆಂಜನೇಯ. ಪೈಲಟ್​ಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

 

‘ಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್​ ಬಂದಿದ್ದೇನೆ. ಚಿರು, ತಂದೆ-ತಾಯಿ ಹಾಗೂ ಅಭಿಮಾನಿಗಳು ಆಶೀರ್ವಾದದಿಂದ ಪಾರಾಗಿದ್ದೇನೆ. ಫ್ಲೈಟ್​ನಲ್ಲಿ ಇದ್ದ ಎಲ್ಲರೂ ಜೀವ ಉಳಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. ನಾವು ಸೇಫ್​ ಆಗಿ ಲ್ಯಾಂಡ್​ ಆದಾಗ ಜನರು ಖುಷಿಯಿಂದ ಕೂಗಾಡಿದರು. ತಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿದರು. ಆನಂದ ಭಾಷ್ಪ ಸುರಿಸಿದರು. ಚೆನ್ನಾಗಿ ಬದುಕಲು ನಮಗೆ ಈ ಮರುಜನ್ಮ ಒಂದು ಕಾರಣವಾಗಿದೆ’ ಎಂದು ಧ್ರುವ ಸರ್ಜಾ ಅವರು ಪೋಸ್ಟ್​ ಮಾಡಿದ್ದಾರೆ.

 

‘ಮಾರ್ಟಿನ್’ ಚಿತ್ರತಂಡದವರು ಸೇಫ್​ ಆಗಿದ್ದಾರೆ ಎಂಬುದು ತಿಳಿದು ಅಭಿಮಾನಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ‘ಸುರಕ್ಷಿತವಾಗಿ ಬನ್ನಿ ಅಣ್ಣ. ನಿಮಗಾಗಿ ಕಾಯುತ್ತಿದ್ದೇವೆ. ನಿಮ್ಮ ಜೊತೆ ದೇವರು ಇದ್ದಾನೆ’ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ‘ಮಾರ್ಟಿನ್​’ ಸಿನಿಮಾಗೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್​ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅವರು ಕೂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ