ಮೊಟ್ಟ ಮೊದಲ ಬುಲೆಟ್ ರೈಲು ಟರ್ಮಿನಲ್‌ನ ವೀಡಿಯೋ ಸಖತ್ ವೈರಲ್!
ಗಾಂಧಿನಗರ: ಅಹ್ಮದಾಬಾದ್‌ನಲ್ಲಿ ನಿರ್ಮಾಣಗೊಂಡಿರುವ ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಟರ್ಮಿನಲ್‌ನ ವೀಡಿಯೋವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ಟರ್ಮಿನಲ್‌ನ ವೀಡಿಯೋ ಭಾರೀ ವೈರಲ್ ಆಗಿದ್ದು, ನಿರ್ಮಾಣ ವೈಖರಿಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಹ್ಮದಾಬಾದ್ ಹಾಗೂ ಮುಂಬಯಿ ನಡುವೆ ಸಂಚಾರ ಕಲ್ಪಿಸಲಿರುವ ಬುಲೆಟ್ ರೈಲಿಗಾಗಿ ಈ ಟರ್ಮಿನಲ್ ನಿರ್ಮಾಣಗೊಂಡಿದೆ.
Terminal for India's first bullet train!
— Ashwini Vaishnaw (@AshwiniVaishnaw) December 7, 2023
📍Sabarmati multimodal transport hub, Ahmedabad pic.twitter.com/HGeoBETz9x
ಗಂಟೆಗೆ ಸರಿಸುಮಾರು 350 ಕಿ.ಮೀ. ವೇಗದಲ್ಲಿ ಚಲಿಸಲಿರುವ ಬುಲೆಟ್ ರೈಲು ಈ ಎರಡೂ ನಗರಗಳ ನಡುವಿನ ಪ್ರಯಾಣ ಸಮಯವನ್ನು 2 ಗಂಟೆ ಕಡಿಮೆಯಾಗಿಸಲಿದೆ. ಎಕ್ಸ್‌ನಲ್ಲಿ “ಭಾರತದ ಬುಲೆಟ್ ಟ್ರೈನ್‌ಗೆ ಟರ್ಮಿನಲ್’ ಎನ್ನುವ ತಲೆಬರಹ ನೀಡಿ ವೈಷ್ಣವ್ ವೀಡಿಯೋ ಹಂಚಿಕೊಂಡಿದ್ದಾರೆ.
4 ಲಕ್ಷ ರೂ.ಗೆ ತಾಯಿಯಿಂದ್ಲೇ ಮಗಳ ಮಾರಾಟ – ಖರೀದಿಸಿ ಮದ್ವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ
ಲಕ್ನೋ: ತಾಯಿಯೇ ತನ್ನ ಮಗಳನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣ ಉತ್ತರಪ್ರದೇಶದ (Uttar Pradesh) ಗೋರಖ್‍ಪುರದ ಮಹೇಸ್ರಾ ಎಂಬಲ್ಲಿ ನಡೆದಿದೆ. ಹಣ ಕೊಟ್ಟು ಯುವತಿಯನ್ನು ಮದುವೆಯಾದ (Marriage) ಹರಿಯಾಣ (Haryana) ಮೂಲದ ವ್ಯಕ್ತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಬಲವಂತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ಈಗ ನ್ಯಾಯಕ್ಕಾಗಿ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿದ್ದಾಳೆ. ಚಿಲುತಾಲ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದು, ದೂರಿನಲ್ಲಿ ಹರಿಯಾಣ ಮೂಲದ ವ್ಯಕ್ತಿಯಿಂದ ತನ್ನ ತಾಯಿ ಹಣ ಪಡೆದು ನ.23 ರಂದು ಬಲವಂತದಿಂದ ಮದುವೆ ಮಾಡಿದ್ದಾರೆ. ಈಗ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ನಿರಂತರವಾಗಿ ಆತ ಹಲ್ಲೆ ನಡೆಸುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರು ಆಕೆಯ ಕುಟುಂಬಸ್ಥರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಅವಸ್ತಿ ತಿಳಿಸಿದ್ದಾರೆ.
ಮಹಿಳೆಯ ಇಬ್ಬರು ಹಿರಿಯ ಸಹೋದರಿಯರು ಸಹ ಹರಿಯಾಣದಲ್ಲಿ ಮದುವೆಯಾಗಿದ್ದಾರೆ. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಯುವತಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಚಿಲುತಾಲ್ ಪೊಲೀಸ್ ಠಾಣೆ ಎಸ್‍ಎಚ್‍ಒ ಸಂಜಯ್ ಮಿಶ್ರಾ ಹೇಳಿದ್ದಾರೆ.