ಬೆಂಕಿ ಅವಘಡ, ಒಂಬತ್ತು ಮಂದಿ ಸಜೀವ ದಹನ
ಸಾವೊ ಪಾಲೊ, ಡಿ.11: ಬ್ರೆಜಿಲ್‌ನ (Brazil) ಉತ್ತರ ರಾಜ್ಯವಾದ ಪಾರಾದಲ್ಲಿ ಭೂರಹಿತ ಕಾರ್ಮಿಕ ಚಳವಳಿ ಎಂಎಸ್‌ಟಿಗೆ ಸೇರಿದ ಶಿಬಿರದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) ಒಂಬತ್ತು ಮಂದಿ ಸಜೀವ ದಹನರಾಗಿದ್ದಾರೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಎಂಎಸ್‌ಟಿ ಪ್ರಕಾರ, ಪಾರಾಪೇಬಾಸ್ ಪಟ್ಟಣದಲ್ಲಿರುವ ಗ್ರಾಮೀಣ ರೈತರ ಶಿಬಿರದಲ್ಲಿ ಇಂಟರ್ನೆಟ್ ವೈರಿಂಗ್ ಕಾಮಗಾರಿ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಆಂಟೆನಾವು ಹೈ-ವೋಲ್ಟೇಜ್ ನೆಟ್‌ವರ್ಕ್‌ಗೆ ತಗುಲಿದಾಗ ವಿದ್ಯುತ್ ತಂತಿಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕೆಲವು ಗುಡಿಸಲುಗಳಿಗೆ ಬೆಂಕಿ ತಗುಲಿದೆ.
ಘಟನೆಯಲ್ಲಿ ಮೃತಪಟ್ಟ ಒಂಬತ್ತು ಮಂದಿಯಲ್ಲಿ ಆರು ಮಂದಿ ಶಿಬಿರದಲ್ಲಿದ್ದವರಾಗಿದ್ದು, ಉಳಿದ ಮೂವರು ಇಂಟರ್ನೆಟ್ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಎಂಟು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಏಳು ಮಂದಿ ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರವಾಗಿ ಗಾಯಗೊಂಡ ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿ ಜೀವನ, ಸತ್ತ ಪ್ರಾಣಿಯನ್ನು ತಿನ್ನುವ ಮಹಿಳೆ
ತಮ್ಮ ಆಲೋಚನೆಗೆ ತಕ್ಕಂತೆ ಜೀವನ ನಡೆಸುವ ಹಲವು ಮಂದಿಯನ್ನು ನಾವು ಜಗತ್ತಿನಲ್ಲಿ ನೋಡುತ್ತಿರುತ್ತೇವೆ. ಕೆಲವರು ಐಷಾರಾಮಿ ಜೀವನವನ್ನು ಬಯಸುತ್ತಾರೆ ಆದರೆ ಕೆಲವರು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಕಡಿಮೆ ಸಂಪನ್ಮೂಲಗಳೊಂದಿಗೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ಕೆಲವು ಮಂದಿ ಸಾಕಷ್ಟು ಸಂಪತ್ತನ್ನು ಹೊಂದಿದ್ದರೂ ಸರಳವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ. ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.
ಎಲ್ಲಾ ಸೌಲಭ್ಯಗಳಿದ್ದರೂ ಕೂಡ ಕಾಡಿನಲ್ಲಿ ಹೋಗಿ ವಾಸಿಸುವವರನ್ನು ನೀವು ಎಲ್ಲಾದರೂ ನೋಡಿದ್ದೀರಾ. ಈ ಮಹಿಳೆಗೆ ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿಯಂತೆ ಕುದುರೆಯ ಮೇಲೆ ಸುತ್ತಾಡುತ್ತಿರುತ್ತಾಳೆ. ಸತ್ತ ಪ್ರಾಣಿಗಳನ್ನೇ ತಿನ್ನುತ್ತಾಳೆ.
ಮಹಿಳೆ ತನ್ನದೇ ಆದ ಮನೆಯನ್ನು ಕೂಡ ಮಾಡಿಕೊಂಡಿಲ್ಲ, ದಿನದ 24 ಗಂಟೆಯೂ ಸುತ್ತಾಡುತ್ತಲೇ ಇರುತ್ತಾಳೆ. ಆಕೆಯ ಪ್ರಕಾರ ಇದೇ ಸುಖಕರವಾದ ಜೀವನ. ಮಹಿಳೆಯ ಹೆಸರು ಮ್ಯಾಂಡರ್ಸ್ ಬರ್ನೆಟ್ ಮತ್ತು ಆಕೆಯ ವಯಸ್ಸು 32. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮಾಂಡರ್ಸ್ ಕಳೆದ 4 ವರ್ಷಗಳಿಂದ ಇದೇ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಆಕೆ ಆಧುನಿಕ ಜೀವನದಿಂದ ಬೇಸರಗೊಂಡಿದ್ದಾಳೆ ಮತ್ತು ಅವಳ ಹೃದಯ ಮತ್ತು ಆತ್ಮವು ಪ್ರಕೃತಿಯಲ್ಲಿ ನೆಲೆಸಿದೆ ಎಂದು ಅವರು ಹೇಳುತ್ತಾರೆ.
ಜುಲೈ 2019ರಲ್ಲಿ ಮನೆ ಬಿಟ್ಟು ಕುದುರೆ ಮೇಲೆ ಓಡಾಟ ಆರಂಭಿಸಿದ್ದಾರೆ, ಮುಂದಿನ 6 ವರ್ಷಗಳನ್ನು ಹೀಗೆ ಕಳೆಯಲು ಬಯಸಿದ್ದಾರೆ. ಒಂದು ದಿನ, ಇಡಾಹೊ ನಿವಾಸಿಯಾದ ಮಾಂಡರ್ಸ್, ವರ್ಷಗಳಿಂದ ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಭೇಟಿಯಾದರು. ಅವರ ಜೀವನಶೈಲಿಯಿಂದ ಅವಳು ತುಂಬಾ ಪ್ರಭಾವಿತಳಾಗಿದ್ದರು, ಅಂದೇ ತಮ್ಮ ಕೆಲಸವನ್ನು ತೊರೆದಿದ್ದರು.
ಸತ್ತ ಪ್ರಾಣಿಗಳನ್ನು ತಿನ್ನುತ್ತಾರೆ ಮ್ಯಾಂಡರ್ಸ್ ಬರ್ನೆಟ್ ಇಡಾಹೋದಿಂದ ಒರೆಗಾನ್‌ಗೆ 500 ಮೈಲುಗಳಷ್ಟು ಪ್ರಯಾಣಿಸಿದರು. ಆದಾಗ್ಯೂ, ಅವರು ನಂತರ ಬೇರ್ಪಟ್ಟರು ಮತ್ತು ಈಗ ಮಾಂಡರ್ಸ್ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.
ದಾರಿಯಲ್ಲಿ ಸತ್ತ ಪ್ರಾಣಿಗಳ ಮಾಂಸವನ್ನು ಆಹಾರಕ್ಕಾಗಿ ಬಳಸುತ್ತಾರೆ ಮತ್ತು ಅಡುಗೆಗಾಗಿ ಸೌದೆ ಒಲೆ ಬಳಸುತ್ತಾರೆ. ಸ್ನಾನಕ್ಕೆ, ಬಟ್ಟೆ ಒಗೆಯಲು ಬಾವಿಯ ನೀರನ್ನು ಬಳಸುತ್ತಾರೆ. ಸೋಲಾರ್ ಬ್ಯಾಟರಿಯಿಂದ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ ಮತ್ತು ಮೊಬೈಲ್‌ನಲ್ಲಿ ಚಾನೆಲ್ಗಳನ್ನು ಯಾವುದನ್ನೂ ನೋಡುವುದಿಲ್ಲ.