ತುಳು ರಂಗಕರ್ಮಿ, ಮೇರುನಟ ವಿ.ಜಿ ಪಾಲ್ ನಿಧನ..!!
ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ವಿ.ಜಿ. ಪಾಲ್ ಎಂದೇ ಖ್ಯಾತರಾಗಿರುವ ರಂಗಕರ್ಮಿ, ಸಂಘಟಕ, ನಿರ್ದೇಶಕ ವೇಣುಗೋಪಾಲ್ ಟಿ. ಕೋಟ್ಯಾನ್ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮಂಗಳೂರಿನ ಬೊಕ್ಕಪಟ್ಣದಲ್ಲಿ 1946ರಲ್ಲಿ ಜನಿಸಿದ ಅವರು ಬೊಕ್ಕಪಟ್ಣ ಶಾಲೆಯಲ್ಲಿ ಶಿಕ್ಷಣ, ಬಳಿಕ ಐಟಿಐ ಶಿಕ್ಷಣ ಪಡೆದ ಅವರು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿದ್ದರು. ಅವರು ಸುಮಾರು 3 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು.ಇವರು ೧೦೧ ಸಿನಿಮಾಗಳಲ್ಲಿ ನಟಿಸಿದ್ದು, ದುಬೈ ಕೊಲ್ಲಿ ರಾಷ್ಟ್ರಗಳಿಗೆ ತುಳು ಸಿನಿಮಾ ಪರಿಚಯಿಸಿದ ಕೀರ್ತಿ ವಿ.ಜಿ. ಪಾಲ್ ಅವರಿಗೆ ಸಲ್ಲುತ್ತದೆ
1961ರಲ್ಲಿ ಕಲ್ಜಿಗದ ಕುರುಕ್ಷೇತ್ರ ತುಳುನಾಟಕದ ಮೂಲಕ ಮೊದಲ ರಂಗಪ್ರವೇಶ ಮಾಡಿದರು. ಸುಮಾರು 2 ಸಾವಿರ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 50 ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದಾರೆ. ಪೂ ಪನ್ನೀರ್ ತುಳು ವೀಡಿಯೋ ಚಿತ್ರ, ಹಲವು ಕಿರುತೆರೆ ಚಿತ್ರಗಳಲ್ಲಿ ಅಭಿನಯಿಸಿದ್ದು ಕೇಂದ್ರ ಸರಕಾರದ ಕರಾವಳಿ ಮತ್ತು ತೆರೆಗಳು ಸಾಕ್ಷ್ಯಚಿತ್ರಗಳಲ್ಲೂ ಪಾತ್ರ ಮಾಡಿದ್ದಾರೆ. ನಾಟಕ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದ.ಕ. ರಾಜ್ಯೋತ್ಸವ ಪ್ರಶಸ್ತಿ, ರಂಗ ಚಾವಡಿ ಪ್ರಶಸ್ತಿ, ಮೊಗವೀರಸಾಧನಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ೧೦ ಗಂಟೆಗೆ ಸ್ವಗೃಹದಲ್ಲಿ ಸಾರ್ವಜನಿಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರ ಪುತ್ರ ಸಚಿನ್ ಪಾಲ್ ತಿಳಿಸಿದ್ದಾರೆ.
ತುಳು ರಂಗಕರ್ಮಿ, ಮೇರುನಟ ವಿ.ಜಿ ಪಾಲ್ ನಿಧನ..!!
ಮಂಜೇಶ್ವರ :ಬೆಂಕಿ ತಗಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ವರ್ಕಾಡಿಯಲ್ಲಿ ನಡೆದಿದೆ. ವರ್ಕಾಡಿ ತೌಡುಗೋಳಿಯ ಆಗ್ನೇಸ್ ಮೊಂತೆರೋ ( 66) ಮೃತಪಟ್ಟವರು.
ಮಾರ್ಚ್ 11 ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಹುಲ್ಲಿಗೆ ತಗಲಿದ್ದ ಬೆಂಕಿಗೆ ಆಗ್ನೇಸ್ ಸಿಲುಕಿದ್ದು , ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಹತ್ತು ಮಂದಿ ರೌಡಿಶೀಟರ್ ಗಡಿಪಾರು
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 10 ಮಂದಿ ರೌಡಿಶೀಟರ್‌ಗಳಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಮಂಗಳೂರು ಕಸಬಾ ಬೆಂಗ್ರೆಯ ಸುಹೇಲ್ (21), ಕಣ್ಣೂರು ಜಾನಕಿತೋಟ ಕಂಪೌಂಡ್‌ನ ನಿಕ್ಷಿತ್ ಪೂಜಾರಿ ಯಾನೆ ನಿಶಿತ್ (21), ಉಳ್ಳಾಲ ಸೋಮೇಶ್ವರದ ಸುನೀಲ್ (24), ಕುದ್ರೋಳಿಯ ಲತೀಶ್ ನಾಯಕ್ ಯಾನೆ ಲತೀಶ್ ಯಾನೆ ಲತ್ಸ (34), ಉಳ್ಳಾಲ ಬಸ್ತಿಪಡ್ಪುವಿನ ಯತೀಶ್ (46), ಮುಲ್ಕಿ ಕಾರ್ನಾಡುವಿನ ಧಮಲಿಂಗ ಯಾನೆ ಧರ್ಮ (34), ಕಣ್ಣೂರು ದಯಾಂಬು ಹನೀಝ್ (32), ಮುಲ್ಕಿ ಚಿತ್ರಾಪುರದ ತೇಜ್‌ಪಾಲ್ ಆರ್ ಕುಕ್ಯಾನ್ (40), ವಾಮಂಜೂರು ಉಳಾಯಿಬೆಟ್ಟುವಿನ ಅನ್ಸಾರ್ (31), ಪಾಂಡೇಶ್ವರ ಶಿವನಗರದ ಅಭಿಷೇಕ್ ಯಾನೆ ಅಭಿ (29) ಎಂಬವರನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಇದಕ್ಕೂ ಹಿಂದೆ ಅದಲ್ಲದೆ 367 ಮಂದಿಯಿಂದ ಮುಚ್ಚಳಿಕೆ, 19 ಮಂದಿ ವಿರುದ್ದ ಗಡಿಪಾರು ಹಾಗೂ ಮೂವರ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.