‘ಕೆಜಿಎಫ್ 2′ (KGF 2) ಅಧೀರ ಸಂಜಯ್ ದತ್‌ಗೆ ‘ಡಬಲ್ ಇಸ್ಮಾರ್ಟ್’ (Double Ismart) ಚಿತ್ರೀಕರಣದ ವೇಳೆ ತಲೆಗೆ ಪೆಟ್ಟಾಗಿದೆ. ಶೂಟಿಂಗ್‌ಗಾಗಿ ಥೈಲ್ಯಾಂಡ್‌ನಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡ. ಶೂಟಿಂಗ್ ಸಂದರ್ಭದಲ್ಲಿ ಸಂಜಯ್ ದತ್ (Sanjay Dutt) ತಲೆಗೆ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂಜಯ್ ದತ್ ಈಗ ತೆಲುಗಿನ ‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಿಗ್ ಬುಲ್ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಥೈಲ್ಯಾಂಡ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಅವರಿಗೆ ಗಾಯ ಆಗಿದೆ ಎಂದು ವರದಿ ಆಗಿದೆ. ಖಡ್ಗದಲ್ಲಿ ಫೈಟ್ ಮಾಡುವ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಖಡ್ಗ ಅವರ ತಲೆಗೆ ತಾಗಿ ಗಾಯ ಆಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗಾಯಕ್ಕೆ ಹೊಲಿಗೆ ಹಾಕಿಸಿಕೊಂಡು ಅವರು ಮರಳಿ ಸೆಟ್‌ಗೆ ಆಗಮಿಸಿದ್ದಾರೆ. ಬಳಿಕ ತಮ್ಮ ಭಾಗದ ಶೂಟಿಂಗ್‌ನ ಅವರು ಪೂರ್ಣಗೊಳಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.