ಕೊನೆಗೂ ಸ್ವಷ್ಟನೆ ಕೊಟ್ಟ ಕೃತಿ ಶೆಟ್ಟಿ: ನಟನ ಪುತ್ರನಿಂದ ಟಾರ್ಚರ್ ಬಗ್ಗೆ ಏನೆಂದರು ಗೊತ್ತಾ?
‘ಉಪ್ಪೇನಾ’ (Uppena Film) ಸಿನಿಮಾದ ಸುಂದರಿ ಕೃತಿ ಶೆಟ್ಟಿ ಅವರು ಮೂಲತಃ ಮಂಗಳೂರಿನವರು. ತುಳುನಾಡಿನ ಈ ಬೆಡಗಿ ಕೃತಿ ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಹೀಗಿರುವಾಗ ಈಗ ವಿಷ್ಯವಾಗಿ ಕೃತಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡ್ತಿದ್ದಾನೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಚರ್ಚೆಗೆ ಗ್ರಾಸವಾಗಿತ್ತು. ಈ ಸುದ್ದಿ ನಿಜಾನಾ? ಸ್ವತಃ ಕೃತಿ ಶೆಟ್ಟಿ (Krithi Shetty) ಅವರೇ ಸ್ಪಷ್ಟನೆ ನೀಡಿದ್ದಾರೆ.
ತೆಲುಗಿನ ‘ಉಪ್ಪೇನಾ’ ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ಆದ ಯುವನಟಿ ಕೃತಿ ಶೆಟ್ಟಿ ಅವರು ಸಾಕಷ್ಟು ಸ್ಟಾರ್ ನಟರ ಸಿನಿಮಾ ಅವಕಾಶಗಳನ್ನ ಬಾಚಿಕೊಂಡರು. ಆದರೆ ಹೇಳಿಕೊಳ್ಳುವಂತಹ ಬಿಗ್ ಬ್ರೇಕ್ ಸಿಗಲಿಲ್ಲ. ಇತ್ತೀಚಿಗೆ ನಾಗಚೈತನ್ಯ ಜೊತೆ ‘ಕಸ್ಟಡಿ’ (Custody) ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸಿನಿಮಾ ಕಡೆ ಗಮನ ಕೊಡ್ತಿರೋ ಬ್ಯೂಟಿಗೆ ತನ್ನ ವಿಚಾರ ಸಖತ್ ಚರ್ಚೆಯಾಗ್ತಿರೋದು ಗಮನಕ್ಕೆ ಬಂದಿದೆ.
ಈಗ ಮುಂಚಿನ ಹಾಗೇ ಕೃತಿಗೆ ಹೇಳಿಕೊಳ್ಳುವಂತಹ ಚಾನ್ಸ್ ಸಿಗುತ್ತಿಲ್ಲ. ಅದರಲ್ಲೂ ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಎಂಟ್ರಿಯಿಂದ ಕೃತಿಗೂ ಎಫೆಕ್ಟ್ ಆಗಿದೆ. ಶ್ರೀಲೀಲಾ ಸ್ಟಾರ್‌ಡಂನಿಂದ ಕೃತಿ ಶೆಟ್ಟಿಗೆ ಅವಕಾಶ ಕಮ್ಮಿಯಾಗ್ತಿದೆ. ಕೃತಿಗೆ ಡಿಮ್ಯಾಂಡ್ ಕಮ್ಮಿಯಾಗಿದ್ದರ ನಡುವೆ ಸ್ಟಾರ್ ನಟನ ಪುತ್ರನಿಂದ ಕಿರುಕುಳ ಕೊಡ್ತಿದ್ದಾನೆ ಎಂಬ ಸುದ್ದಿ ಟಿಟೌನ್ ಅಡ್ಡಾದಲ್ಲಿ ಗಿರಿಕಿ ಹೊಡೆದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಕೃತಿ ಹಂಚಿಕೊಂಡಿದ್ದಾರೆ ಎನ್ನಲಾಗ್ತಿತ್ತು. ಕೃತಿ ಶೆಟ್ಟಿ ಜೊತೆ ಸ್ನೇಹ ಸಂಪಾದಿಸಲು ಸ್ಟಾರ್ ನಟನ ಮಗನೊಬ್ಬ ಪ್ರಯತ್ನಿಸುತ್ತಿದ್ದಾನಂತೆ. ಇದೇ ಕಾರಣಕ್ಕೆ ಪದೇ ಪದೇ ಫೋನ್ ಮಾಡಿ ಆತ ನಟಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಚರ್ಚೆ ಶುರುವಾಗಿತ್ತು. ಪ್ರತಿ ಈವೆಂಟ್‌ನಲ್ಲೂ ಆಕೆಯ ಸುತ್ತಾಮುತ್ತಾ ತಿರುಗಾಡುತ್ತಾ ತೊಂದರೆ ಕೊಡುತ್ತಿದ್ದಾನೆ ಎನ್ನಲಾಗ್ತಿತ್ತು. ಇದೆಲ್ಲಾ ಶುದ್ಧ ಸುಳ್ಳು ಎಂದು ನಟಿ ಉತ್ತರಿಸಿದ್ದಾರೆ.
ಇದೀಗ ಈ ಪೋಸ್ಟ್‌ಗೆ ಕೃತಿ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡುವುದನ್ನು ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಿ. ಇದು ಜಾಲತಾಣದಲ್ಲಿ ಕಾಣಿಸಿಕೊಂಡಾಗಿನಿಂದ ಇದೊಂದು ಆಧಾರವಿಲ್ಲದ ವದಂತಿ, ನಿರ್ಲಕ್ಷಿಸುವುದು ಸರಿ ಎಂದು ಚಿಂತಿಸಿದ್ದೆ ಆದರೆ, ಇದು ಹೆಚ್ಚು ಸುದ್ದಿಯಾಗಿ ಎಲ್ಲೆ ಮೀರಿ ಹೋಗಿದ್ದರಿಂದ ನಾನು ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಹೇಳಿದ್ದಾರೆ. ಸ್ಟಾರ್ ಹೀರೋ ಮಗನಿಂದ ತನಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಕೃತಿ ಕ್ಲ್ಯಾರಿಟಿ ನೀಡಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೂ ನಟಿ ಬ್ರೇಕ್ ಹಾಕಿದ್ದಾರೆ.
ಕನ್ನಡದಲ್ಲಿ ಮಾತನಾಡಿದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ
ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಈ ಹಿಂದೆ ರಶ್ಮಿಕಾ ಕನ್ನಡ ಮಾತನಾಡಲ್ಲ ಅಂತಾ ಗರಂ ಆಗಿದ್ದರು. ಈಗ ಪ್ರೀತಿಯಿಂದ ಮನಬಿಚ್ಚಿ ಕನ್ನಡ ಮಾತನಾಡಿದ್ದಾರೆ. ಈ ಕುರಿತ ಸಣ್ಣ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸ್ಯಾಂಡಲ್‌ವುಡ್‌ನ (Sandalwood) ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಬಣ್ಣದ ಬದುಕು ಶುರು ಮಾಡಿದ ನಟಿ, ಮೊದಲ ಸಿನಿಮಾದಲ್ಲೇ ಭರ್ಜರಿ ಸಕ್ಸಸ್ ಕಂಡರು. ಬಳಿಕ ಅಂಜನಿಪುತ್ರ, ಚಮಕ್, ಯಜಮಾನ, ಪೊಗರು (Pogaru) ಸಿನಿಮಾಗಳ ಮೂಲಕ ಮೋಡಿ ಮಾಡಿದ್ರು ಕೂರ್ಗ್ ಬ್ಯೂಟಿ. ಕಡೆಯದಾಗಿ ಧ್ರುವ ಸರ್ಜಾ ನಾಯಕಿಯಾಗಿ ಪೊಗರು ಸಿನಿಮಾದಲ್ಲಿ ನಟಿಸಿದ್ದರು. ಈಗ ಟಾಲಿವುಡ್- ಬಾಲಿವುಡ್ ಅಂತಾ ಅಲ್ಲೇ ಸೆಟಲ್ ಆಗಿದ್ದಾರೆ.
ಸದ್ಯ ಅವರು ತಮಗೆ ಕನ್ನಡದ ಮೇಲೆ ಇರುವ ಅಭಿಮಾನವನ್ನ ತೋರಿಸಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಫ್ಯಾನ್ಸ್‌ಗಾಗಿ ಪ್ರಶ್ನಾವಳಿಯನ್ನ ನಟಿ ಮಾಡಿದ್ದಾರೆ. ಆಗ ಅವರಿಗೆ ಬಗೆ ಬಗೆಯ ಪ್ರಶ್ನೆಗಳು ಎದುರಾಗಿದೆ. ಅದರಲ್ಲಿ ಕನ್ನಡದಲ್ಲಿ (Kannada) ಮಾತನಾಡಿ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ನಟಿ ಕೂಡ ಉತ್ತರಿಸಿದ್ದಾರೆ. ಖುಷಿಯಿಂದ ಮಾತನಾಡಿದ್ದಾರೆ.
ಹಾಯ್, ಎಲ್ಲರೂ ಹೇಗಿದ್ದೀರಾ, ಚೆನ್ನಾಗಿದ್ದೀರಾ? ಯಾವಾಗಲೂ ನಗುತ್ತಾಯಿರಿ ನಾನು ನಿಮ್ಮ ಬಗ್ಗೆ ಯೋಚನೆ ಮಾಡುತ್ತಾ ಇದ್ದೀನಿ. ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತೀನಿ. ಸೆಡಿಂಗ್ ಯೂ ಲವ್ ಎಂದು ರಶ್ಮಿಕಾ ಮಂದಣ್ಣ ವೀಡಿಯೋದಲ್ಲಿ ಹೇಳಿದ್ದಾರೆ. ಈ ಪ್ರಶ್ನಾವಳಿ ಮೂಲಕ ನಟಿ ಕನ್ನಡದಲ್ಲೇ ಮಾತನಾಡಿದ್ದಾರೆ.
ಸದ್ಯ ರಣ್‌ಬೀರ್ ಕಪೂರ್(Ranbir Kapoor)-ರಶ್ಮಿಕಾ ನಟನೆಯ ಸಿನಿಮಾ ‘ಅನಿಮಲ್’ (Animal) ಈ ವರ್ಷದ ಅಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಪುಷ್ಪ 2, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೂರ್ಗ್ ಬ್ಯೂಟಿ ಬ್ಯುಸಿಯಾಗಿದ್ದಾರೆ.