ಮಾಲ್ಡೀವ್ಸ್ ಸಂಸತ್ತಿನಲ್ಲಿ ಸಂಸದರ ನಡುವೆ ಹೊಡೆದಾಟ ; ಇಲ್ಲಿದೆ ವಿಡಿಯೋ
ಸಂಸತ್ತು ಎಂದ ಮೇಲೆ ವಾದ-ವಿವಾದಗಳು ಸಾಮಾನ್ಯ, ಆದರೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ನಡೆದ ಘಟನೆ ಅಚ್ಚರಿ ಮೂಡಿಸಿದೆ. ಈ ಸಂಸತ್ತಿನಲ್ಲಿ ನಡೆದಿದ್ದು ಮಾತಿನ ವಿವಾದವಲ್ಲ ಬದಲಾಗಿ ಗುದ್ದಾಟ, ಸಂಸದರು ಪರಸ್ಪರ ಎಳೆದಾಡಿಕೊಂಡರು, ಹೊಡೆದಾಡಿಕೊಂಡಿದ್ದಾರೆ. ಭಾನುವಾರ ಮಾಲ್ಡೀವ್ಸ್ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪಿಪಿಎಂ ಮತ್ತು ಪಿಎನ್‌ಸಿ ಪಕ್ಷದ ಸಮ್ಮಿಶ್ರ ಸರ್ಕಾರದ ಸಂಸದರು ಮತ್ತು ವಿರೋಧ ಪಕ್ಷದ ಸಂಸದರ ನಡುವೆ ತೀವ್ರ ವಾಗ್ವಾದ ನಡೆಯಿತು.
ಮಾಲ್ಡೀವ್ಸ್ ಸಂಸತ್ತಿನಲ್ಲಿ ಹಲವು ಸಂಸದರ ನಡುವೆ ಘರ್ಷಣೆ ಸಂಭವಿಸಿದೆ. ಆಡಳಿತ ಒಕ್ಕೂಟದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಮತ್ತು ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಯ ಸಂಸದರ ನಡುವೆ ಘರ್ಷಣೆ ನಡೆದಿದೆ.
*Viewer discretion advised*
— Adhadhu (@AdhadhuMV) January 28, 2024
Parliament proceedings have been disrupted after clashes between PPM/PNC MPs and opposition MPs. pic.twitter.com/vhvfCBgQ1s
ಆಡಳಿತ ಸಮ್ಮಿಶ್ರ ಸಂಸದರು ವಿರೋಧ ಪಕ್ಷದ ಸಂಸದರನ್ನು ಸಂಸತ್ತಿಗೆ ಪ್ರವೇಶಿಸದಂತೆ ತಡೆದಿದ್ದರು ಎನ್ನಲಾಗುತ್ತಿದೆ. ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಎಂಡಿಪಿಯು ಆಡಳಿತ ಪಕ್ಷದ ನಾಲ್ವರು ಸದಸ್ಯರಿಗೆ ಮುಯಿಝು ಅವರ ಸಂಪುಟಕ್ಕೆ ಸೇರಲು ಅನುಮೋದನೆ ನೀಡಲು ನಿರಾಕರಿಸಿದ ನಂತರ ಈ ಘಟನೆ ನಡೆದಿದೆ.
ಸಂಸತ್ತಿನಲ್ಲಿ ಮತದಾನ ನಡೆಯಬೇಕಿತ್ತು, ಪ್ರತಿಪಕ್ಷಗಳು ಇದನ್ನು ನಿಲ್ಲಿಸುವಂತೆ ಕೇಳಿದಾಗ ಆಡಳಿತಾರೂಢ ಸಂಸದರು ಕಲಾಪವನ್ನು ನಿಲ್ಲಿಸಿದರು. ಮಾಲ್ಡೀವ್ಸ್ನ ಹೊಸ ಅಧ್ಯಕ್ಷರನ್ನು ಕಳೆದ ವರ್ಷವಷ್ಟೇ ಆಯ್ಕೆ ಮಾಡಲಾಗಿತ್ತು, ಕೆಲವು ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಆದ್ದರಿಂದ ಪ್ರತಿಪಕ್ಷಗಳು ಅವರನ್ನು ಸಂಪುಟಕ್ಕೆ ಸೇರಿಸಬಾರದು ಎನ್ನುವುದು ಅವರ ವಾದವಾಗಿದೆ.
ಅಟಾರ್ನಿ ಜನರಲ್ ಅಹ್ಮದ್ ಉಷಮ್, ಸಚಿವ ಡಾ. ಅಲಿ ಹೈದರ್, ಡಾ. ಮೊಹಮ್ಮದ್ ಸಯೋದ್ ವಿರುದ್ಧ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಮೊಯಿಝು ಅವರ ಮುಖ್ಯ ಸಲಹೆಗಾರ ಮತ್ತು ಪಿಎನ್‌ಸಿ ಅಧ್ಯಕ್ಷ ಅಬ್ದುಲ್ ರಹೀಮ್ ಅಬ್ದುಲ್ಲಾ ಅವರು ಮಂತ್ರಿಗಳಿಗೆ ಅಧಿಕಾರ ನೀಡದಿದ್ದರೂ ಸಹ, ಅವರಿಗೆ ಮರುನೇಮಕ ಮಾಡುವ ಹಕ್ಕಿದೆ ಎಂದು ಹೇಳಿದರು. ಸಚಿವರ ಅನುಮೋದನೆ ನಿರಾಕರಣೆ ಬೇಜವಾಬ್ದಾರಿ ಎಂದು ಟೀಕಿಸಿದರು.
ಇತ್ತೀಚೆಗಷ್ಟೇ ಮಾಲ್ಡೀವ್ಸ್ ಸಚಿವರು ಭಾರತದ ಬಗ್ಗೆ ಗೇಲಿ ಮಾಡಿದ್ದರೂ, ಲಕ್ಷದ್ವೀಪವನ್ನು ಮಾಲ್ಡೀವ್ಸ್ ರೀತಿ ಮಾಡುವ ನಿಮ್ಮದು ಕನಸಷ್ಟೇ ಎಂದು ಹೇಳಿದ್ದರು. ಇದಾದ ಬಳಿಕ ಮಾಲ್ಡೀವ್ಸ್ ಹಾಗೂ ಭಾರತದ ಸಂಬಂಧ ಹಳಸಿದೆ.