ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

FIFA World Cup ನಾಕೌಟ್‌ಗೆ ಬ್ರೆಜಿಲ್‌ ಲಗ್ಗೆ, ಸ್ವಿಜರ್‌ಲೆಂಡ್‌ ವಿರುದ್ಧ 1-0 ಜಯ

Twitter
Facebook
LinkedIn
WhatsApp
FIFA World Cup ನಾಕೌಟ್‌ಗೆ ಬ್ರೆಜಿಲ್‌ ಲಗ್ಗೆ, ಸ್ವಿಜರ್‌ಲೆಂಡ್‌ ವಿರುದ್ಧ 1-0 ಜಯ

ದೋಹಾ(ನ.29): ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿ ವಿಶ್ವಕಪ್‌ಗೆ ಕಾಲಿಟ್ಟಿರುವ ಬ್ರೆಜಿಲ್‌, ಗುಂಪು ಹಂತದಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ ನಾಕೌಟ್‌ ಹಂತಕ್ಕೆ ಪ್ರವೇಶಿಸಿದೆ. ಸೋಮವಾರ ನಡೆದ ‘ಜಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿ, 6 ಅಂಕಗಳೊಂದಿಗೆ ಗುಂಪಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತು.

83ನೇ ನಿಮಿಷದಲ್ಲಿ ಕ್ಯಾಸಿಮಿರೊ ಬಾರಿಸಿದ ಗೋಲು ಬ್ರೆಜಿಲ್‌ ಪಾಲಿಗೆ ಗೆಲುವಿನ ಗೋಲಾಯಿತು. ಇದಕ್ಕೂ ಮುನ್ನ 66ನೇ ನಿಮಿಷದಲ್ಲಿ ವಿನಿಶಿಯಸ್‌ ಜೂನಿಯರ್‌ ಬಾರಿಸಿದ ಗೋಲನ್ನು ಆಫ್‌ಸೈಡ್‌ ಎಂದು ನಿರಾಕರಿಸಲಾಯಿತು.

ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ಬ್ರೆಜಿಲ್‌ ಹಿಂದೆ ಬಿದ್ದರೂ, ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಯಾವುದೇ ಅಡ್ಡಿಯಾಗಲಿಲ್ಲ. ಸ್ವಿಜರ್‌ಲೆಂಡ್‌ ಆಕರ್ಷಕ ರಕ್ಷಣಾ ಕೌಶಲ್ಯಗಳನ್ನು ಪ್ರದರ್ಶಿಸಿ ಗಮನ ಸೆಳೆಯಿತು. ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ಸ್ವಿಸ್‌ ಆಟಗಾರರಿಗೆ ಹೆಚ್ಚು ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಒಂದು ಗೋಲು ದಾಖಲಾದ ಬಳಿಕ ಬ್ರೆಜಿಲ್‌ ಆಟಗಾರರು ಚೆಂಡು ಬಹುತೇಕ ಸಮಯ ತಮ್ಮ ಬಳಿಯೇ ಇರುವಂತೆ ನೋಡಿಕೊಂಡು, ಸ್ವಿಜರ್‌ಲೆಂಡ್‌ಗೆ ಪುಟಿದೇಳಲು ಅವಕಾಶವನ್ನೇ ನೀಡಲಿಲ್ಲ.

ಮೊದಲ ಪಂದ್ಯದಲ್ಲಿ ಗೆದ್ದಿದ್ದ ಸ್ವಿಸ್‌ ತಂಡ ಈ ಸೋಲಿನೊಂದಿಗೆ ಹಿನ್ನಡೆ ಅನುಭವಿಸಿದ್ದು, ಕೊನೆ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಗೆಲ್ಲಬೇಕಿದೆ. ಕ್ಯಾಮರೂನ್‌ ವಿರುದ್ಧ ಬ್ರೆಜಿಲ್‌ ಗೆದ್ದರೆ, ಸ್ವಿಜರ್‌ಲೆಂಡ್‌ ಡ್ರಾ ಸಾಧಿಸಿದರೂ ಸಾಕು ನಾಕೌಟ್‌ಗೇರಲಿದೆ.

ಜರ್ಮನಿ ನಾಕೌಟ್ ಕನಸು ಜೀವಂತ

ಅಲ್‌ ಖೋರ್‌: ‘ದೈತ್ಯರ ಕಾಳಗ’ ಎಂದೇ ಬಿಂಬಿತವಾಗಿದ್ದ ಸ್ಪೇನ್‌ ಹಾಗೂ ಜರ್ಮನಿ ನಡುವಿನ ಪಂದ್ಯ 1-1 ಗೋಲಿನ ಡ್ರಾನಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ನಾಕೌಟ್‌ ಹಂತಕ್ಕೇರುವ ಜರ್ಮನಿ ತಂಡದ ಆಸೆ ಜೀವಂತವಾಗಿ ಉಳಿಯಿತಾದರೂ, ಸತತ 2ನೇ ಬಾರಿಗೆ ವಿಶ್ವಕಪ್‌ ಗುಂಪು ಹಂತದಿಂದಲೇ ಹೊರಬೀಳುವ ಆತಂಕ ಇನ್ನೂ ದೂರವಾಗಿಲ್ಲ. ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ನಿಕ್ಲಾಸ್‌ ಫುಲ್‌ಕ್ರುಗ್‌ 83ನೇ ನಿಮಿಷದಲ್ಲಿ ಬಾರಿಸಿದ ಗೋಲು ಜರ್ಮನಿ ಸತತ 2ನೇ ಸೋಲಿಗೆ ಗುರಿಯಾಗುವುದನ್ನು ತಪ್ಪಿಸಿತು. ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ 62ನೇ ನಿಮಿಷದಲ್ಲಿ ಸ್ಪೇನ್‌ ಮೊದಲ ಗೋಲು ದಾಖಲಿಸಿತು. ಆಲ್ವಾರೊ ಮೊರಾಟ ಆಕರ್ಷಕ ಗೋಲಿನ ಮೂಲಕ ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಈ ಫಲಿತಾಂಶದೊಂದಿಗೆ ಸ್ಪೇನ್‌ ತನ್ನ ದಾಖಲೆ ಮುಂದುವರಿಸಿದೆ. 1988ರ ಯುರೋಪಿಯನ್‌ ಚಾಂಪಿಯನ್‌ನ ಬಳಿಕ ಅಧಿಕೃತ ಟೂರ್ನಿಗಳಲ್ಲಿ ಜರ್ಮನಿ ವಿರುದ್ಧ ಸ್ಪೇನ್‌ ಸೋತಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ