ಶುಕ್ರವಾರ, ಏಪ್ರಿಲ್ 26, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

FIFA World Cup: ಕ್ರೊವೇಷಿಯಾ ಸವಾಲು ಗೆಲ್ಲುತ್ತಾ ಬಲಿಷ್ಠ ಬ್ರೆಜಿಲ್?

Twitter
Facebook
LinkedIn
WhatsApp
FIFA World Cup: ಕ್ರೊವೇಷಿಯಾ ಸವಾಲು ಗೆಲ್ಲುತ್ತಾ ಬಲಿಷ್ಠ ಬ್ರೆಜಿಲ್?

ಅಲ್‌ ರಯ್ಯನ್‌(ಡಿ.09): ದಾಖಲೆಯ 6ನೇ ವಿಶ್ವಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಬ್ರೆಜಿಲ್‌ಗೆ ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಕ್ರೊವೇಷಿಯಾದ ಸವಾಲು ಎದುರಾಗಲಿದೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಅಮೋಘ ಆಟವಾಡುವ ಮೂಲಕ ಬ್ರೆಜಿಲ್‌ ತನ್ನ ಎದುರಾಳಿಗಳಿಗೆ ಸ್ಪಷ್ಟಸಂದೇಶ ರವಾನಿಸಿದೆ. ಮತ್ತೊಂದೆಡೆ ಜಪಾನ್‌ ವಿರುದ್ಧ ಹೋರಾಡಿ ಪೆನಾಲ್ಟಿಶೂಟೌಟ್‌ನಲ್ಲಿ ಗೆದ್ದ ಕ್ರೊವೇಷಿಯಾ ಮತ್ತೊಂದು ಕಠಿಣ ಚಾಲೆಂಜ್‌ಗೆ ಸಿದ್ಧವಾಗಿದೆ.

ಸತತ 2ನೇ ಹಾಗೂ ಒಟ್ಟಾರೆ 3ನೇ ಬಾರಿಗೆ ಕ್ರೊವೇಷಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿದೆ. ಜಪಾನ್‌ ವಿರುದ್ಧ ನಿಗದಿತ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗೋಲು ಬಾರಿಸಲು ವಿಫಲವಾದರೂ, ಶೂಟೌಟ್‌ನಲ್ಲಿ ತಂಡದ ಗೋಲ್‌ಕೀಪರ್‌ ಲಾಟ್ಕೊ ಡಾಲಿಚ್‌ ತೋರಿದ ಹೋರಾಟ ತಂಡವನ್ನು ಅಂತಿಮ 8ರ ಸುತ್ತಿಗೇರಿಸಿತು. ದೊಡ್ಡ ವೇದಿಕೆಯಲ್ಲಿ ಹೈ ಡ್ರಾಮಾ ಕ್ರೊವೇಷಿಯಾಗೆ ಹೊಸದಲ್ಲ. ಪ್ರಮುಖ ಪಂದ್ಯಾವಳಿಗಳ ಕಳೆದ 8 ನಾಕೌಟ್‌ ಪಂದ್ಯಗಳನ್ನು ಕ್ರೊವೇಷಿಯಾ ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದಿದೆ.

ಇನ್ನು ವಿಶ್ವಕಪ್‌ನಲ್ಲಿ ಕ್ರೊವೇಷಿಯಾದ ಕಳೆದ 5 ನಾಕೌಟ್‌ ಪಂದ್ಯಗಳಲ್ಲಿ 4 ಪಂದ್ಯಗಳು ಹೆಚ್ಚುವರಿ ಸಮಯವನ್ನು ಕಂಡಿವೆ. ಈ ಪೈಕಿ 3ರಲ್ಲಿ ಕ್ರೊವೇಷಿಯಾ ಶೂಟೌಟ್‌ನಲ್ಲಿ ಗೆದ್ದಿದೆ. 5 ಪಂದ್ಯಗಳ ಪೈಕಿ 2018ರ ಫೈನಲ್‌ನಲ್ಲಿ ಫ್ರಾನ್ಸ್‌ ವಿರುದ್ಧ 2-4 ಗೋಲುಗಳಲ್ಲಿ ಸೋತಿದ್ದೊಂದೇ 90 ನಿಮಿಷಗಳಲ್ಲಿ ನಿರ್ಧಾರವಾಗಿರುವ ಪಂದ್ಯ.

ಭರ್ಜರಿ ಲಯ: ಕ್ರೊವೇಷಿಯಾ ಕಳೆದ 10 ಅಂ.ರಾ. ಪಂದ್ಯಗಳಲ್ಲಿ ಸೋತಿಲ್ಲ. 2020ರ ಯುರೋ ಕಪ್‌ನಿಂದ ಈ ತನಕ 20 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲುಂಡಿದೆ. ಕ್ರೊವೇಷಿಯಾದ ಗುಣಮಟ್ಟದ ಫುಟ್ಬಾಲ್‌ ಕೌಶಲ್ಯಗಳು ಬ್ರೆಜಿಲ್‌ ವಿರುದ್ಧ ಪರೀಕ್ಷೆಗೆ ಒಳಗಾಗಲಿವೆ.

ಬ್ರೆಜಿಲ್‌ ಕ್ವಾರ್ಟರ್‌ ಹಾದಿ

ಗುಂಪು ಹಂತ

ಸರ್ಬಿಯಾ ವಿರುದ್ಧ 2-0 ಜಯ

ಸ್ವಿಜರ್‌ಲೆಂಡ್‌ ವಿರುದ್ಧ 1-0 ಜಯ

ಕ್ಯಾಮರೂನ್‌ ವಿರುದ್ಧ 0-1 ಸೋಲು

ಪ್ರಿ ಕ್ವಾರ್ಟರ್‌ ಫೈನಲ್‌

ಕೊರಿಯಾ ವಿರುದ್ಧ 6-1 ಜಯ

ಕ್ರೊವೇಷಿಯಾ ಕ್ವಾರ್ಟರ್‌ ಹಾದಿ

ಗುಂಪು ಹಂತ

ಮೊರಾಕ್ಕೊ ವಿರುದ್ಧ 0-0 ಡ್ರಾ

ಕೆನಡಾ ವಿರುದ್ಧ 4-1 ಜಯ

ಬೆಲ್ಜಿಯಂ ವಿರುದ್ಧ 0-0 ಡ್ರಾ

ಪ್ರಿ ಕ್ವಾರ್ಟರ್‌ ಫೈನಲ್‌

ಜಪಾನ್‌ ವಿರುದ್ಧ 3-1 ಜಯ(ಶೂಟೌಟ್‌)

ಪಂದ್ಯ ಆರಂಭ: ರಾತ್ರಿ 8.30ಕ್ಕೆ, 
ನೇರ ಪ್ರಸಾರ: ಸ್ಪೋರ್ಟ್ಸ್ 18/ಜಿಯೋ ಸಿನಿಮಾ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ