Friday, December 2, 2022
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್-ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ-ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ-6ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವು-ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ-ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!-ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು-ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್-ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ 15ರ ಬಾಲಕ-ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

FIFA World Cup: ಕೋಸ್ಟರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್! ಟಿಕಿ-ಟಾಕ ಶೈಲಿಯ ಆಟ.. ಏನಿದು ಶೈಲಿ?

Twitter
Facebook
LinkedIn
WhatsApp

ದೋಹಾ(ನ.25): ಸ್ಪೇನ್‌ಯ ಯುವ ಪಡೆ ವಿಶ್ವಕಪ್‌ ಅಭಿಯಾನವನ್ನು ಟಾಪ್‌ ಗೇರ್‌ನಲ್ಲಿ ಆರಂಭಿಸಿದೆ. ಕೋಸ್ಟರಿಕಾ ವಿರುದ್ಧ ಬುಧವಾರ ರಾತ್ರಿ ನಡೆದ ಗುಂಪು ‘ಇ’ ಪಂದ್ಯವನ್ನು 7-0 ಗೋಲುಗಳ ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ತಂಡದ ಜನಪ್ರಿಯ ಟಿಕಿ-ಟಾಕ ಶೈಲಿಯ ಆಟಕ್ಕೆ ದೊಡ್ಡ ಯಶಸ್ಸು ದೊರೆಯಿತು.

ಡ್ಯಾನಿ ಒಲ್ಮೊ (11ನೇ ನಿಮಿಷ), ಮಾರ್ಕೊ ಅಸ್ಸೆನ್ಸಿಯೋ(21ನೇ ನಿ.,) ಹಾಗೂ ಫೆರ್ರಾನ್‌ ಟೋರ್ರೆಸ್‌(31ನೇ ನಿ., ಪೆನಾಲ್ಟಿ) ಮೊದಲ 31 ನಿಮಿಷಗಳಲ್ಲೇ ತಲಾ ಒಂದೊಂದು ಗೋಲು ಬಾರಿಸಿ ಕೋಸ್ಟರಿಕಾ ಮೇಲೆ ಒತ್ತಡ ಹೇರಿದರು. ಟೋರ್ರೆಸ್‌(54ನೇ ನಿ.,), ಪಾಬ್ಲೋ ಗಾವಿ(74ನೇ ನಿ.,), ಕಾರ್ಲೊಸ್‌ ಸೋಲರ್‌(90ನೇ ನಿ.,) ಹಾಗೂ ಇವಾರೊ ಮೊರಾಟ(92ನೇ ನಿ.,) ದ್ವಿತೀಯಾರ್ಧದಲ್ಲಿ ತಂಡದ ಮುನ್ನಡೆ ಹೆಚ್ಚಿಸಿದರು.

7 ಗೋಲು ಬಾರಿಸಿದ ಸ್ಪೇನ್‌ಗಿದು ವಿಶ್ವಕಪ್‌ನಲ್ಲಿ ಅತಿದೊಡ್ಡ ಗೆಲುವು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅಂತಿಮ 16ರ ಸುತ್ತು ದಾಟದ ಸ್ಪೇನ್‌, ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಮೊದಲ ಪಂದ್ಯದಲ್ಲೇ ಅಬ್ಬರಿಸಿ ಎದುರಾಳಿಗೆ ಎಚ್ಚರಿಕೆ ನೀಡಿದೆ.

ಸ್ಪೇನ್‌ನ ಟಿಕಿ-ಟಾಕ ಆಟದ ಶೈಲಿಯ ಮುಂದೆ ಕೋಸ್ಟರಿಕಾ ಅಕ್ಷರಶಃ ಮೂಖ ವಿಸ್ಮತಗೊಂಡಿತು. ಪಂದ್ಯದ ಆರಂಭದಿಂದಲೇ ಸ್ಪೇನ್‌ ಹಿಡಿತ ಸಾಧಿಸಿತು. 90 ನಿಮಿಷಗಳ ಆಟದಲ್ಲಿ ಬರೋಬ್ಬರಿ 1003 ಪಾಸ್‌ಗಳನ್ನು ಪೂರ್ಣಗೊಳಿಸಿದ ಸ್ಪೇನ್‌ ಹೊಸ ದಾಖಲೆ ಬರೆಯಿತು. ಜೊತೆಗೆ 17 ಬಾರಿ ಗೋಲು ಗಳಿಸುವ ಯತ್ನವನ್ನೂ ನಡೆಸಿತು. ಪಂದ್ಯದಲ್ಲಿ ಶೇ.75ರಷ್ಟು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸ್ಪೇನ್‌, ಕೋಸ್ಟರಿಕಾಕ್ಕೆ ಒಮ್ಮೆಯೂ ಗೋಲು ಗಳಿಸಲು ಪ್ರಯತ್ನ ನಡೆಸಲು ಬಿಡಲಿಲ್ಲ.

ಏನಿದು ಟಿಕಿ-ಟಾಕ ಶೈಲಿ?

ಸಣ್ಣ ಸಣ್ಣ ಪಾಸ್‌ಗಳ ಮೂಲಕ ನಿರಂತರವಾಗಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ವಿವಿಧ ದಿಕ್ಕುಗಳಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಕೊಂಡೊಯ್ಯುವ ತಂತ್ರವೇ ಟಿಕಿ-ಟಾಕ. 2006ರಿಂದ ಈ ಸ್ಪೇನ್‌ ಈ ಆಟದ ಶೈಲಿಯನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. 90ರ ದಶಕದಲ್ಲೇ ಈ ಆಟದ ಶೈಲಿ ಪರಿಚಯಗೊಂಡಿತ್ತಾದರೂ 2006ರ ಸಮಯದಲ್ಲಿ ಕೋಚ್‌ಗಳಾಗಿದ್ದ ಲೂಯಿಸ್‌ ಅರಾಗೋನೆಸ್‌ ಹಾಗೂ ವಿಸ್ಸೆಂಟೆ ಡೆಲ್‌ ಬೊಶ್ಕಾ ಈ ಶೈಲಿಗೆ ಹೆಚ್ಚು ಒತ್ತು ನೀಡಿ ಜನಪ್ರಿಯಗೊಳಿಸಿದರು.

ಗೋಲು ಬಾರಿಸಿದ 3ನೇ ಅತಿಕಿರಿಯ ಆಟಗಾರ ಗಾವಿ!

ಫಿಫಾ ವಿಶ್ವಕಪ್‌ನಲ್ಲಿ ಗೋಲು ಬಾರಿಸಿದ 3ನೇ ಅತಿಕಿರಿಯ ಆಟಗಾರ ಎನ್ನುವ ಹಿರಿಮೆಗೆ ಸ್ಪೇನ್‌ನ ಪಾಬ್ಲೊ ಗಾವಿ ಪಾತ್ರರಾಗಿದ್ದಾರೆ. 1958ರಲ್ಲಿ ಪೀಲೆ (17 ವರ್ಷ 249 ದಿನ ವಯಸ್ಸು) ಬಳಿಕ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಅತಿಕಿರಿಯ ಆಟಗಾರ ಎನ್ನುವ ದಾಖಲೆಗೆ ಗಾವಿ ಪಾತ್ರರಾಗಿದ್ದಾರೆ. 1930ರಲ್ಲಿ 18 ವರ್ಷದ ಮೆಕ್ಸಿಕೋ ಆಟಗಾರ ಮ್ಯಾನುಯಲ್‌ ರೊಸಾಸ್‌ ಗೋಲು ಬಾರಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ