ಘೋರ ಕೃತ್ಯ: ರಾಡ್‍ನಿಂದ ಹೊಡೆದು ಬಾಲಕಿಯ ಹತ್ಯೆ..!
ನವದೆಹಲಿ: ದೆಹಲಿಯ ಮಾಳವೀಯಾ ನಗರದಲ್ಲಿ ನಡೆದ ಕೊಲೆ ಘಟನೆ ಸಂಚಲನ ಮೂಡಿಸಿದೆ. ಬಾಲಕಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಘಟನೆ ಬಳಿಕ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ನವದೆಹಲಿ ಪೊಲೀಸರಿಗೆ ಬಂದ ಕರೆಯ ಪ್ರಕಾರ, 25 ವರ್ಷದ ಆರೋಪಿಯು ನವದೆಹಲಿಯ ಅರಬಿಂದೋ ಕಾಲೇಜಿನ ಬಳಿ ರಾಡ್‌ನಿಂದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಬಾಲಕಿಯ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ!
ಶುಕ್ರವಾರ ಮಧ್ಯಾಹ್ನ 12.08ರ ಸುಮಾರಿಗೆ ಅರಬಿಂದೋ ಕಾಲೇಜು ಬಳಿ ಬಾಲಕಿಯೊಬ್ಬಳನ್ನು ಕೊಂದು ಆರೋಪಿ ಎಸ್ಕೇಪ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಶವದ ಬಳಿ ಕಬ್ಬಿಣದ ರಾಡ್ ಬಿದ್ದಿದೆ. ಕೊಲೆಯಾದ ಹುಡುಗಿಯ ವಯಸ್ಸು ಸುಮಾರು 25 ವರ್ಷ ಎಂದು ಹೇಳಲಾಗಿದೆ. ಬಾಲಕಿಯ ಮೃತದೇಹ ಉದ್ಯಾನವನದ ನೆಲದ ಮೇಲೆ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
24 ಗಂಟೆಯೊಳಗೆ 2ನೇ ಕೊಲೆ ಪ್ರಕರಣ
24 ಗಂಟೆಗಳಲ್ಲಿ ಇದು ದೆಹಲಿಯಲ್ಲಿ ನಡೆದ 2ನೇ ಕೊಲೆ ಘಟನೆಯಾಗಿದೆ. ದೆಹಲಿಯ ದಾಬ್ರಿ ಪ್ರದೇಶದಲ್ಲಿ ಗುರುವಾರ ರಾತ್ರಿ 8.45ರ ಸುಮಾರಿಗೆ ಬಿಲ್ಡರ್ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೃತ ಮಹಿಳೆಯನ್ನು 40 ವರ್ಷದ ರೇಣು ಎಂದು ಗುರುತಿಸಲಾಗಿದೆ. ದಾಳಿಕೋರರು ಬಿಲ್ಡರ್ ಮನೆಯ ಬಳಿಯೇ ಗುಂಡು ಹಾರಿಸಿ ಆತನ ಪತ್ನಿಯನ್ನು ಹತ್ಯೆ ಮಾಡಿದ್ದಾರೆ.
ಪಾಯಿಂಟ್ ಬ್ಲಾಂಕ್ ರೇಂಜ್‍ನಿಂದ ಗುಂಡು ಹಾರಿಸಿದ ಆರೋಪಿಗಳು!
ದಾಳಿಕೋರರು ರೇಣು ಗೋಯಲ್ ಅವರನ್ನು ಕೊಲ್ಲಲು ಕಾಲ್ನಡಿಗೆಯಲ್ಲಿ ಸ್ಥಳಕ್ಕೆ ಬಂದಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಯಿಂಟ್ ಬ್ಲಾಂಕ್ ರೇಂಜ್‍ನಿಂದ ರೇಣು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದು ಎಂದು ಬುದ್ಧಿವಾದ ಹೇಳಿದ್ದಕ್ಕೆ ನದಿಗೆ ಹಾರಿ SSLC ವಿದ್ಯಾರ್ಥಿನಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಓದು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ನದಿಗೆ ಹಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ (SSLC Student) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು (Gauribidanur) ನಗರದಲ್ಲಿ ನಡೆದಿದೆ.
ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆ ನಿವಾಸಿ ವಿಂಧ್ಯಶ್ರೀ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಗೌರಿಬಿದನೂರು ನಗರದ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಸಹ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ತಡರಾತ್ರಿ ಆಟವಾಡುತ್ತಿದ್ದ ಮಗಳಿಗೆ ಓದುವಂತೆ ತಾಯಿ ಬುದ್ಧಿವಾದ ಹೇಳಿದ್ದು, ಇಲ್ಲವಾದರೆ ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದರು. ಇದೇ ಮಾತನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ವಿಂಧ್ಯಶ್ರೀ ಸೀದಾ ಮನೆಯಿಂದ ಹೊರ ಹೋಗಿ ಗೌರಿಬಿದನೂರು ನಗರದ ಬೈಪಾಸ್ ರಸ್ತೆಯ ಉತ್ತರಪಿನಾಕಿನ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇತ್ತ ತಡರಾತ್ರಿ ಮಗಳಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಆಕೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.