ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜ.1ರಿಂದ ಡ್ರೈವಿಂಗ್ ಕಲಿಯೋಕೆ ಫೀಸ್ ಹೆಚ್ಚಳ ; ಇಲ್ಲಿದೆ ಮಾಹಿತಿ

Twitter
Facebook
LinkedIn
WhatsApp
ಜ.1ರಿಂದ ಡ್ರೈವಿಂಗ್ ಕಲಿಯೋಕೆ ಫೀಸ್ ಹೆಚ್ಚಳ ; ಇಲ್ಲಿದೆ ಮಾಹಿತಿ

ಬೆಂಗಳೂರು: ಬಹಳಷ್ಟು ಜನರಿಗೆ ನಾಲ್ಕು ಚಕ್ರದ ವಾಹನಗಳ ಚಾಲನೆಯನ್ನು ಕಲಿಯಬೇಕು ಎಂಬ ಹಂಬಲ ಇರುತ್ತದೆ. ಆದರೆ, ಈಗ ಬೇಡ, ಇನ್ನೊಮ್ಮೆ ಡ್ರೈವಿಂಗ್‌ ಸ್ಕೂಲ್‌ಗೆ (Driving school) ಹೋದರಾಯಿತು ಎಂಬ ಉದಾಸೀನವೂ ಇರುತ್ತದೆ. ಕೆಲವೊಮ್ಮೆ ಅದಕ್ಕೆ ದುಡ್ಡನ್ನು ಹೊಂದಿಸಿ ಕಲಿಕೆ ಮಾಡಬೇಕು ಅಂದುಕೊಂಡವರೂ ಇದ್ದಾರೆ. ಆದರೆ, ಈಗ ವಾಹನ ಚಾಲನಾ ತರಬೇತಿಯನ್ನು (Driving Training) ಪಡೆಯುವ ಉಮೇದಿನಲ್ಲಿರುವವರಿಗೆ ಕಹಿಯಾಗುವ ಹಾಗೂ ಜೇಬಿಗೆ ಕತ್ತರಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್​ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸಿದೆ.

 

ಹೀಗಾಗಿ ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗವಾಗಿ ವಿಂಗಡನೆ ಮಾಡಲಾಗಿದ್ದು, ಅವುಗಳಿಗೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ. ಅಂದಹಾಗೆ, ವಾಹನ ಚಾಲನಾ ತರಬೇತಿಯು ಇದೇ 2024ರ ಜನವರಿ 1ರಿಂದ ದುಬಾರಿಯಾಗಲಿದೆ.

 

4 ಸಾವಿರ ಇದ್ದ ದರ ಈಗ 8 ಸಾವಿರ ಆಗಿದೆ!

ಇಲ್ಲಿಯವರೆಗೆ ಕಾರು ಚಾಲನಾ ತರಬೇತಿಗೆ 4 ಸಾವಿರ ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಆದರೆ, ಇಷ್ಟಕ್ಕೇ ಇದು ನಿಲ್ಲುತ್ತಿರಲಿಲ್ಲ. ಎಲ್​ಎಲ್ಆರ್‌, ಡಿಎಲ್ ಎಲ್ಲವನ್ನೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್‌ನವರು ಒಟ್ಟು 8 ಸಾವಿರ ರೂಪಾಯಿವರೆಗೆ ಅಭ್ಯರ್ಥಿಯಿಂದ ವಸೂಲಿ ಮಾಡುತ್ತಿದ್ದರು ಎಂಬ ದೂರುಗಳು ಇತ್ತು. ಈಗ ಜನರಿಗೆ ಭಯ ಕಾಡುತ್ತಿರುವುದೂ ಸಹ ಇದೇ ಆಗಿದೆ. ಇಷ್ಟರೊಳಗೇ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿಯನ್ನು ಸ್ವೀಕಾರ ಮಾಡಲಾಗುತ್ತಿತ್ತು. ಇನ್ನು ಮುಂದೆಯೂ ಇದೇ ಮಾದರಿಯನ್ನು ಅನುಸರಿಸಿದರೆ ಕಷ್ಟವಾಗುತ್ತದೆ ಎಂಬ ಆತಂಕವನ್ನು ಹೊರಹಾಕಲಾಗುತ್ತಿದೆ. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು, ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಸೂಲಿ ಮಾಡುವಂತಿಲ್ಲ ಎಂದು ಸೂಚನೆಗಳನ್ನು ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಪಾಲನೆ ಆಗಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.

ಚಾಲನೆ-ಎಲ್‌ಎಲ್‌-ಡಿಎಲ್‌ಗೆ 8350 ರೂ. ಖರ್ಚು!

ಜನವರಿಯಿಂದ ಕಾರು ಚಾಲನೆ ಕಲಿಯುವವರಿಗೆ 7 ಸಾವಿರ ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದಲ್ಲದೆ ಎಲ್​ಎಲ್​ಗೆ 350 ರೂ. ಹಾಗೂ ಡಿಎಲ್​ಗೆ 1,000 ರೂ. ಪ್ರತ್ಯೇಕವಾಗಿ ಆರ್​ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ. ಖರ್ಚು ಮಾಡಬೇಕು.

10 ವರ್ಷಗಳ ನಂತರ ಹೆಚ್ಚಳ

ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದ ಈ ಬದಲಾವಣೆಗಳು ಆಗಿವೆ. 10 ವರ್ಷಗಳ ನಂತರ ದರ ಹೆಚ್ಚಿಸಲು ಸಾರಿಗೆ ಇಲಾಖೆ ಅನುಮತಿಯನ್ನು ನೀಡಿದೆ. ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಲಘು ಮೋಟಾರು ವಾಹನ (ಕಾರು) ಚಾಲನಾ ತರಬೇತಿಗೆ ಹೊಸ ದರ 7 ಸಾವಿರ ರೂ. ನಿಗದಿ ಪಡಿಸಲಾಗಿದೆ.

ಶುಲ್ಕ ಏರಿಕೆ ಯಾಕೆ?

ಎಲ್ಲ ಬೆಲೆಗಳಲ್ಲೂ ಏರಿಕೆಯಾಗುತ್ತಿದೆ. ಕಳೆದ 10 ವರ್ಷಗಳಿಂದ ಒಂದೇ ಮಾದರಿಯ ದರವನ್ನು ನಿಗದಿ ಮಾಡಲಾಗಿದೆ. ಆದರೆ, ಡ್ರೖೆವಿಂಗ್ ಸ್ಕೂಲ್​ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಶುರೆನ್ಸ್, ಚಾಲಕರ ಸಂಬಳ ಇನ್ನಿತರ ಸಮಸ್ಯೆಗಳು ಇರುತ್ತವೆ. ಹೀಗಾಗಿ ಹೆಚ್ಚಿನ ಶುಲ್ಕ ಪಡೆಯುವುದು ಅನಿವಾರ್ಯ ಎಂದು ಡ್ರೈವಿಂಗ್‌ ಸ್ಕೂಲ್‌ಗಳ ಮಾಲೀಕರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದರು. ಇದರಿಂದ ಸಾರಿಗೆ ಇಲಾಖೆಯು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್​ಟಿಒಗಳ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿಯು ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಿ ಸಾರಿಗೆ ಇಲಾಖೆಗೆ 2 ವರ್ಷಗಳ ಹಿಂದೆಯೇ ಸಲ್ಲಿಸಿತ್ತು. ಈಗ ಈ ವರದಿಯನ್ನು ಅಂಗೀಕಾರ ಮಾಡಲಾಗಿದೆ.

ಶುಲ್ಕ ಪರಿಷ್ಕರಣೆ, ವಾಹನ ಮೊದಲು ಈಗ (ರೂ.ಗಳಲ್ಲಿ)

  • ಮೋಟಾರು ಸೈಕಲ್: 2,200-3000
  • ಆಟೋ ರಿಕ್ಷಾ: 3,000-4000
  • ಕಾರುಗಳು: 4,000-7000
  • ಸಾರಿಗೆ ವಾಹನ: 6,000-9000

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist