ಬುಧವಾರ, ಅಕ್ಟೋಬರ್ 4, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Fastrack Smartwatch: ಫಾಸ್ಟ್ರಾಕ್​ ಕಂಪೆನಿಯಿಂದ ಹೊಸ ಸ್ಮಾರ್ಟ್​​​ವಾಚ್​ ಲಾಂಚ್​!

Twitter
Facebook
LinkedIn
WhatsApp
Slay1

ಹಿಂದೆಲ್ಲಾ ವಾಚ್​ಗಳನ್ನೂ (Watch) ಕೇವಲ ಸಮಯವನ್ನು ನೋಡುವ ಕಾರಣಕ್ಕಾಗಿ ಬಳಸುತ್ತಿದ್ದರು. ಆದರೆ ಈಗ ಇದೇ ಒಂದು ಟ್ರೆಂಡ್ ಆಗಿಬಿಟ್ಟಿದೆ. ಇತ್ತೀಚೆಗೆ ಟೆಕ್​ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ಫೋನ್​ಗಳಿಗಿಂತಲೂ ಸ್ಮಾರ್ಟ್​​ವಾಚ್​ (Smartwatch)ಗಳ  ಹಾವಳಿಯೇ ಜೋರಾಗಿದೆ. ಕಲರ್​ಫುಲ್​ ಸ್ಮಾರ್ಟ್​​ವಾಚ್​ಗಳನ್ನು ಕಂಪೆನಿಗಳು ಮಾರುಕಟ್ಟೆಯಲ್ಲಿ ಅನಾವರಣ ಮಾಡುತ್ತಿದೆ. ಇದಕ್ಕೆ ಆಕರ್ಷಿತರಾಗಿ ಜನರು ಸ್ಮಾರ್ಟ್​​ವಾಚ್​ಗಳನ್ನೇ ಕೊಳ್ಳಲು ಮುಂದಾಗುತ್ತಾರೆ. ಹಿಂದಿನಿಂದಲ್ಲೂ ವಾಚ್​ಗಳನ್ನು ಉತ್ಪಾದನೆ ಮಾಡುವಲ್ಲಿ ಜನಪ್ರಿಯತೆಯನ್ನು ಪಡೆದಿರುವ ಕಂಪೆನಿಯೆಂದರೆ ಫಾಸ್ಟ್ರಾಕ್​ ಕಂಪೆನಿ (Fastrack Comapny). ಈ ಕಂಪೆನಿ ಹೊಸ ಹೊಸ ವಾಚ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಅತೀಹೆಚ್ಚು ಗ್ರಾಹಕರನ್ನು ಹೊಂದಿದ ಕಂಪೆನಿ ಇದಾಗಿದೆ. ಇದೀಗ ಈ ಕಂಪೆನಿ ಹೊಸ ಸ್ಮಾರ್ಟ್​ವಾಚ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.

ಜನಪ್ರಿಯ ವಾಚ್​ ತಯಾರಿಕಾ ಕಂಪೆನಿಯಾಗಿರುವ ಫಾಸ್ಟ್ರಾಕ್​ ಕಂಪೆನಿ ಮಾರುಕಟ್ಟೆಗೆ ಇತ್ತೀಚೆಗೆ ಹೊಸ ಮಾದರಿಯ ಸ್ಮಾರ್ಟ್​​ವಾಚ್ ಒಂದನ್ನು ಪರಿಚಯಿಸಿದೆ. ಇದಕ್ಕೆ ರಿಫ್ಲೆಕ್ಸ್​ ಬೀಟ್+ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್​​ವಾಚ್​ ಇದುವರೆಗೆ ಬಿಡುಗಡೆಯಾಗಿರುವ ಉತ್ಪನ್ನಗಳಿಗಿಂತ ಭಿನ್ನ ಮಾದರಿಯಲ್ಲಿದ್ದು, ಸಾಕಷ್ಟು ಫೀಚರ್ಸ್​ಗಳನ್ನು ಇದು ಹೊಂದಿದೆ.

Reflex Hello- Smart Watch with Silicone Black Strap, Health Suite, BT  Calling, & Period Tracker | fastrack

ಫಾಸ್ಟ್ರಾಕ್​ ರಿಫ್ಲೆಕ್ಸ್​ ಬೀಟ್​+ ಸ್ಮಾರ್ಟ್​ವಾಚ್ ಫೀಚರ್ಸ್​

ಫಾಸ್ಟ್ರಾಕ್​​ ಕಂಪೆನಿಯ ಈ ಹೊಸ ಸ್ಮಾರ್ಟ್‌ವಾಚ್ 1.69 ಇಂಚಿನ ಅಲ್ಟ್ರಾ ವಿಯು ಡಿಸ್‌ಪ್ಲೇ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ. ಈ ಡಿಸ್​ಪ್ಲೇಯು 60hz ರಿಫ್ರೆಸ್‌ ರೇಟ್‌ ಹಾಗೂ 500 ನಿಟ್ಸ್​ ಬ್ರೈಟ್‌ನೆಸ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಮೂಲಕ ಯಾವುದೇ ಸಮಯದಲ್ಲೂ ಸಹ ನೀವು ಈ ವಾಚ್‌ ಅನ್ನು ಬಳಕೆ ಮಾಡಬಹುದಾಗಿದೆ.

Fastrack Reflex Hello Bluetooth Calling New Smart Watch Unboxing Pairing  And Features - YouTube

ಸ್ಪೋರ್ಟ್ಸ್​​ ಫೀಚರ್ಸ್​

ಈ ಫಾಸ್ಟ್ರಾಕ್​​ ರಿಫ್ಲೆಕ್ಸ್​ ಬೀಟ್​+ ವಾಚ್ ಯುಟಿಲಿಟಿ ಫೀಚರ್‌ಗಳ ಜೊತೆಗೆ 60 ಮಲ್ಟಿ ಸ್ಪೋರ್ಟ್ಸ್ ಮೋಡ್‌ನೊಂದಿಗೆ ಪ್ಯಾಕ್‌ ಆಗಿದ್ದು, ಹೃದಯ ಬಡಿತ ಮಾನಿಟರ್, ವುಮೆನ್ ಹೆಲ್ತ್ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು SpO2 ಮಾನಿಟರ್‌ನಂತಹ ಆರೋಗ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಐಪಿ68 ರೇಟಿಂಗ್

ಫಾಸ್ಟ್ರಾಕ್​ ರಿಫ್ಲೆಕ್ಸ್ ಬೀಟ್+ ವಾಚ್‌ ಸಿಲಿಕಾನ್ ಪಟ್ಟಿಯೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಇನ್ನು ಈ ಸ್ಮಾರ್ಟ್​ವಾಚ್​ IP68 ರೇಟಿಂಗ್ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ ಧೂಳು ಮತ್ತು ನೀರು-ನಿರೋಧಕವಾಗಿದೆ. ಈ ಮೂಲಕ ಎಲ್ಲಾ ರೀತಿಯ ಕ್ರೀಡೆಗಳು ಮತ್ತು ಸಾಹಸ ಸಮಯಗಳಲ್ಲಿ ಈ ಸ್ಮಾರ್ಟ್‌ವಾಚ್‌ ಅನ್ನು ಯಾವುದೇ ಸಮಸ್ಯೆ ಇಲ್ಲದೆ ಧರಿಸಬಹುದಾಗಿದೆ.

Reflex Curv- Smart Watch with Silicone Black Strap with Health Tracker,  Sleep Tracker, & Big Display | fastrack

ಇದರೊಂದಿಗೆ 100+ ಕ್ಲೌಡ್ ವಾಚ್‌ಫೇಸ್‌ಗಳ ಆಯ್ಕೆ ನೀಡಲಾಗಿದ್ದು, ಬಳಕೆದಾರರು ತಮ್ಮ ವೈಯಕ್ತಿಕ ಶೈಲಿಗೆ ಹೊಂದಿಕೆಯಾಗುವಂತೆಯೂ ವಾಚ್‌ ಫೇಸ್‌ಗಳನ್ನು ಕಸ್ಟಮೈಸ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಇತರೆ ಫೀಚರ್ಸ್​

ಈ ವಾಚ್​ ಮೂಲಕವೇ ಮೊಬೈಲ್​ನ ಕ್ಯಾಮೆರಾ ಕಂಟ್ರೋಲ್‌ ಮತ್ತು ಮ್ಯೂಸಿಕ್​ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇನ್ನು ಬಳಕೆದಾರರಿಗೆ ನೋಟಿಫಿಕೇಶನ್‌ಗಳನ್ನು ನೀಡುವ ಮೂಲಕ ಇದು ಎಚ್ಚರಿಸುತ್ತದೆ. ಜೊತೆಗೆ ಕರೆಗಳನ್ನು ತಿರಸ್ಕರಿಸಲು ಸಹ ಇದು ಅನುಮತಿಸುತ್ತದೆ. ಇದೆಲ್ಲದರ ಜೊತೆಗೆ ಹವಾಮಾನ ಅಪ್​ಡೇಟ್​​ಗಳನ್ನು ಸಹ ಈ ಸ್ಮಾರ್ಟ್​​ವಾಚ್​ ಮೂಲಕ ಪಡೆದುಕೊಳ್ಳಬಹುದು.

ಬೆಲೆ ಮತ್ತು ಲಭ್ಯತೆ

ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫಾಸ್ಟ್ರಾಕ್​ನ ರಿಫ್ಲೆಕ್ಸ್ ಬೀಟ್+ ಸ್ಮಾರ್ಟ್​​ವಾಚ್​ ಅನ್ನು ಕೇವಲ 1,495 ರೂಪಾಯಿಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಬೀಜ್ ಲ್ಯಾಟೆ, ವೈನ್ ರೆಡ್, ಬ್ಲ್ಯಾಕ್​, ಆಲಿವ್ ಗ್ರೀನ್ ಮತ್ತು ಡೀಪ್ ಟೀಲ್ ಸೇರಿದಂತೆ ಐದು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಖರೀದಿಸುವ ಅವಕಾಶವಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ