ಫಾಸ್ಟ್ ಟ್ಯಾಗ್ ಕೆವೈಸಿ ಪ್ರಕ್ರಿಯೆಗೆ ಫೆ. 29 ರ ವರೆಗೆ ಗಡುವು ವಿಸ್ತರಣೆ ಸಾಧ್ಯತೆ.?
ಬೆಂಗಳೂರು, ಫೆಬ್ರವರಿ 01: ಒಂದು ವಾಹನ ಒಂದು ಫಾಸ್ಟ್ ಟ್ಯಾಗ್ ನೀತಿಯ ಅನ್ವಯ ವಾಹನಗಳ ಮಾಲೀಕರು ತಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ಸಿಹಿಸುದ್ದಿಯನ್ನು ನೀಡಿದೆ.
ಎನ್‌ಹೆಚ್‌ಎಐನ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಫಾಸ್ಟ್ ಟ್ಯಾಗ್ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಇದ್ದ ಗಡುವು ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಫೆಬ್ರವರಿ ಅಂತ್ಯದ ತನಕ ಸಮಯ ದೊರೆಯಲಿದೆ.
ಅಕ್ರಮ ಫಾಸ್ಟ್ ಟ್ಯಾಗ್; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿ ಪ್ರಕಾರ ಇರುವ ಅಕ್ರಮ ಫಾಸ್ಟ್ ಟ್ಯಾಗ್ 1.27 ಕೋಟಿ. ಇದರಲ್ಲಿ 7 ಲಕ್ಷ ಫಾಸ್ಟ್ ಟ್ಯಾಗ್ ಮಾತ್ರ ಇ ಕೆವೈಸಿ ಆಗಿದೆ. ಈ ಹಿನ್ನಲೆಯಲ್ಲಿ ಇ ಕೆವೈಸಿ ಅಪ್‌ಡೇಟ್ ಮಾಡಲು ಇದ್ದ ಗಡುವು ವಿಸ್ತರಣೆ ಮಾಡಲಾಗುತ್ತಿದೆ.
ವಾಹನ ಸವಾರರು ಹೆದ್ದಾರಿಗಳ ಟೋಲ್‌ಗಳಲ್ಲಿ, ತಮ್ಮ ಬ್ಯಾಂಕ್‌ಗಳಲ್ಲಿ, ಎನ್‌ಹೆಚ್‌ಎಐ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಕೆವೈಸಿ ಅಪ್ ಡೇಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಒಂದೇ ಫಾಸ್ಟ್ ಟ್ಯಾಗ್ ಅನ್ನು ಹಲವು ವಾಹನಗಳಲ್ಲಿ ಬಳಕೆ ಮಾಡುವುದನ್ನು ತಪ್ಪಿಸಲು ಕೆವೈಸಿ ಅಪ್‌ಡೇಟ್ ಮಾಡಲಾಗುತ್ತಿದೆ. ಒಂದು ವಾಹನಕ್ಕೆ ಒಂದು ಫಾಸ್ಟ್ ಟ್ಯಾಗ್ ಎಂಬುದು ಸರ್ಕಾರದ ನಿಯಮವಾಗಿದೆ. ಆದರೆ ಕೆಲವು ವಾಹನ ಮಾಲೀಕರು ಒಂದೇ ಫಾಸ್ಟ್ ಟ್ಯಾಗ್ ಅನ್ನು ಹಲವಾರು ವಾಹನಗಳಿಗೆ ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಮಾಲೀಕರು ತಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಿಸುವಂತೆ ಎನ್‌ಹೆಚ್‌ಎಐ ಸೂಚನೆ ನೀಡಿದೆ.
ಈ ಹಿಂದೆ ಜನವರಿ 31ರೊಳಗೆ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಿಸಬೇಕು. ಇಲ್ಲವಾಲ್ಲಿ ಫಾಸ್ಟ್ ಟ್ಯಾಗ್ ರದ್ದುಗೊಳಿಸಲಾಗುತ್ತದೆ ಎಂದು ಎನ್‌ಹೆಚ್‌ಎಐ ಹೇಳಿತ್ತು. ಈಗ ವಾಹನ ಮಾಲೀಕರ ಬೇಡಿಕೆಯಂತೆ ಕೆವೈಸಿ ಮಾಡಿಸುವ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಟೋಲ್‌ಗಳಲ್ಲಿ ಕಾಯುವ ಸಮಯವನ್ನು ಇದು ಉಳಿತಾಯ ಮಾಡಿದೆ. ವಾಹನಗಳ ಮಾಲೀಕರ ಫಾಸ್ಟ್ ಟ್ಯಾಗ್‌ನಿಂದ ಹಣ ಕಡಿತವಾಗುವ ವ್ಯವಸ್ಥೆ ಮಾಡಲಾಗಿದೆ.