ಖ್ಯಾತ ಯ್ಯೂಟೂಬರ್ ದೇವರಾಜ್ ಪಟೇಲ್ ರಸ್ತೆ ಅಪಘಾತದಲ್ಲಿ ಸಾವು!
ರಾಯ್‌ಪುರ: ಖ್ಯಾತ ಯೂಟ್ಯೂಬರ್ ದೇವರಾಜ್ ಪಟೇಲ್ ಅವರು ರಸ್ತೆ ಅವಘಡದಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಟ್ರಕ್ ಢಿಕ್ಕಿ ಹೊಡೆದ ನಂತರ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ 22 ವರ್ಷ ಪ್ರಾಯವಾಗಿತ್ತು
ಮಧ್ಯಾಹ್ನ 3.30 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಪಟೇಲ್ ಹಿಂಬದಿ ಸವಾರನಾಗಿದ್ದರು. ಅವರು ವಿಡಿಯೋ ಚಿತ್ರೀಕರಣ ಮುಗಿಸಿ ನವಾ ರಾಯ್‌ಪುರದಿಂದ ಹಿಂತಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪಟೇಲ್ ಅವರ ಚಾನೆಲ್ ‘ದಿಲ್ ಸೆ ಬುರಾ ಲಗ್ತಾ ಹೈ’ 4 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು 8.80 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಅವರು ತಮ್ಮ ಹಾಸ್ಯ ಮತ್ತು ತಮಾಷೆಯ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದರು.ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘಟನೆಗೆ ಸಂತಾಪ ಸೂಚಿಸಿದ್ದು, ಎಲ್ಲರನ್ನೂ ನಗಿಸಿದ ದೇವರಾಜ್ ಪಟೇಲ್ ನಮ್ಮನ್ನು ಅಗಲಿದ್ದಾರೆ ಎಂದು ಸಂತಾಪ ಸೂಚಿಸಿದ್ದಾರೆ.
ಟೆಲಿಬಂದ ಪೊಲೀಸ್ ಠಾಣೆ ವ್ಯಾಪ್ತಿಯ ಲಾಭಂಡಿ ಪ್ರದೇಶದ ಬಳಿ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಟ್ರಕ್‌ಗೆ ಮೋಟಾರ್‌ಸೈಕಲ್‌ನ ಹ್ಯಾಂಡಲ್ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಮತ್ತು ಪಿಲಿಯನ್ ಸವಾರಿ ಮಾಡುತ್ತಿದ್ದ ಪಟೇಲ್ ಭಾರೀ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.