ಮಂಗಳವಾರ, ಡಿಸೆಂಬರ್ 5, 2023
ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!-ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೊಹಮ್ಮದ್ ಶಮಿ ಜೊತೆ ಮದುವೆಯಾಗಲು ರೆಡಿ ಎಂದ ಖ್ಯಾತ ನಟಿ; ಆದರೆ ಷರತ್ತು.....!

Twitter
Facebook
LinkedIn
WhatsApp
ಮೊಹಮ್ಮದ್ ಶಮಿ ಜೊತೆ ಮದುವೆಯಾಗಲು ರೆಡಿ ಎಂದ ಖ್ಯಾತ ನಟಿ; ಆದರೆ ಷರತ್ತು.....!

ಮುಂಬಯಿ: ವಿವಾದಾತ್ಮಕ ಬಹುಭಾಷಾ ನಟಿ ಪಾಯಲ್​ ಘೋಷ್​ (Payal Ghosh) ಮತ್ತೆ ಸುದ್ದಿಯಾಗಿದ್ದಾರೆ. ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ(mohammed shami) ಅವರನ್ನು ಮದುವೆಯಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಆದರೆ ಒಂದು ಷರತ್ತನ್ನು ಕೂಡ ವಿಧಿಸಿದ್ದಾರೆ.

ಹೌದು, ನಟಿ ಪಾಯಲ್​ ಘೋಷ್​ ಅವರು, ಮೊಹಮ್ಮದ್​ ಶಮಿಯ ಬಗ್ಗೆ ಅವರು ಮೆಚ್ಚುಗೆ ಸೂಚಿಸಿ ಮದುವೆಯ ಪ್ರಸ್ತಾವ ಇಟ್ಟಿದ್ದಾರೆ. ‘ಶಮಿ ನೀವು ಇಂಗ್ಲಿಷ್ ಕಲಿತರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದು ಟ್ವೀಟ್ ಮಾಡಿದ್ದಾರೆ. 

ಈ ಪೋಸ್ಟ್​ ಸಕತ್​ ವೈರಲ್​ ಆಗಿದೆ. ಇದರ ಜತೆಗೆ ಇನ್ನೊಂದು ಪೋಸ್ಟ್​ನಲ್ಲಿ, ‘ಶಮಿ ಅವರೇ ನೀವು ಸೆಮಿಫೈನಲ್‌ನಲ್ಲಿ ಹೀರೋ ಆಗುವುದನ್ನು ನಾನು ನೋಡಬೇಕು’ ಎಂದಿದ್ದಾರೆ.

https://x.com/iampayalghosh/status/1720134156473020568?s=20

ಶಮಿಯ ಯಶಸ್ಸಿನ ಬಗ್ಗೆ ವಿಲಕ್ಷಣ ಹೇಳಿಕೆ ನೀಡಿದ ವಿಚ್ಛೇದಿತ ಪತ್ನಿ

ಶಮಿ ಅವರ ಅಸಾಧಾರಣ ಪ್ರದರ್ಶನದ ಬಗ್ಗೆ ಇಡೀ ಕ್ರಿಕೆಟ್ ಕ್ಷೇತ್ರವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ತಮ್ಮ ಪತಿಯ ಯಶಸ್ಸಿನ ಬಗ್ಗೆ ವಿಲಕ್ಷಣ ಹೇಳಿಕೆ ನೀಡಿದ್ದಾರೆ.

ನ್ಯೂಸ್ ನೇಷನ್​ಗೆ ನೀಡಿದ ಸಂದರ್ಶನದಲ್ಲಿ, ಹಸೀನ್ ಜಹಾನ್ ಅವರನ್ನು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಶಮಿ ಮತ್ತು ಟೀಮ್ ಇಂಡಿಯಾದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆರಂಭದಲ್ಲಿ, ಜಹಾನ್ ಅವರು ಕ್ರಿಕೆಟ್ ಮತ್ತು ಕ್ರಿಕೆಟಿಗರ ಅಭಿಮಾನಿಯಲ್ಲ ಎಂದು ಹೇಳಿಕೊಂಡರು. ಆದಾಗ್ಯೂ, ಶಮಿ ಉತ್ತಮ ಪ್ರದರ್ಶನ ನೀಡಿದರೆ, ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಅವರು ಉತ್ತಮವಾಗಿ ಸಂಪಾದಿಸುತ್ತಾರೆ. ಅದು ಕುಟುಂಬದ ಭವಿಷ್ಯಕ್ಕೆ ಒಳ್ಳೆಯದು ಎಂದು ವಿಭಿನ್ನ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಕುಚ್ ಭಿ ಹೈ, ಅಚ್ಚಾ ಪರ್ಫಾರ್ಮ್ ಕೆರ್ ರಾ ಹೈ, ಅಚ್ಚಾ ಖೇಲೆಗಾ, ಟೀಮ್ ಮೇನ್ ಬಿನಾ ರೇಗಾ, ಅಚ್ಚಾ ಕಾಮಯೇಗಾ ತೋ ಹುಮಾರಾ ಭಾವಿಶ್ಯ ಸೆಕ್ಯೂರ್ ರೇಗಾ” (ಅದೇನೇ ಇರಲಿ, ಶಮಿ ಉತ್ತಮ ಪ್ರದರ್ಶನ ನೀಡಿದರೆ, ಅವರು ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಉತ್ತಮವಾಗಿ ಸಂಪಾದಿಸುತ್ತಾರೆ, ಅದು ನಮ್ಮ ಭವಿಷ್ಯವನ್ನು ಭದ್ರಪಡಿಸುತ್ತಾರೆ” ಎಂದು ಜಹಾನ್ ಸಂದರ್ಶನದಲ್ಲಿ ಹೇಳಿದ್ದಾರೆ. ಮಾರ್ಚ್ 8, 2018 ರಂದು, ಜಹಾನ್ ತನ್ನ ಪತಿಯ ವಿರುದ್ಧ ಬೆದರಿಕೆ, ದಾಂಪತ್ಯ ದ್ರೋಹ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ದಂಪತಿಗಳು 2018 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ