Facebook/Instagram: ವಿಶ್ವದಾದ್ಯಂತ ಮೆಟಾದ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ಅಕೌಂಟ್ ದಿಢೀರ್ ಸರ್ವರ್ ಡೌನ್!!
Twitter
Facebook
LinkedIn
WhatsApp
ಡೆಸ್ಕ್‌ಟಾಪ್ ಹಾಗೂ ಮೊಬೈಲ್‌ನಲ್ಲಿ ಬಳಸುವ ಫೇಸ್‌ಬುಕ್ ಅಕೌಂಟ್‌ಗಳು ಲಾಗ್ ಔಟ್ ಆಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಫೇಸ್‌ಬುಕ್ ಜೊತೆಗೆ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಮೆಟಾ ಕಂಪನಿಯ ಸೋಷಿಯಲ್ ಮೀಡಿಯಾಗಳಲ್ಲಿ ಈ ತಾಂತ್ರಿಕ ದೋಷ ಕಂಡು ಬಂದಿದೆ. ಕೆಲ ಹೊತ್ತು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ಲಾಗ್ ಇನ್ ಮಾಡಲು ಪರದಾಡಿದ್ದಾರೆ.
ಫೇಸ್‌ಬುಕ್‌ನ ಲಾಗ್ ಔಟ್ ಆಗಿರೋದು ಯಾರೋ ಒಬ್ಬರದಲ್ಲ. ವಿಶ್ವದಾದ್ಯಂತ ಎಲ್ಲರ ಅಕೌಂಟ್‌ಗಳು ಇಂದು ದಿಢೀರನೇ ಸಮಸ್ಯೆಗೆ ಸಿಲುಕಿದೆ. ಇದಕ್ಕೆ ಜಾಗತಿಕವಾಗಿ ಫೇಸ್‌ಬುಕ್ ಡೌನ್ ಆಗಿರೋದೇ ಕಾರಣ ಎನ್ನಲಾಗಿದೆ.