ಸ್ಫೋಟಗೊಂಡ ಮೊಬೈಲ್: ಸ್ಥಳದಲ್ಲೇ ಯುವತಿ ಸಾವು
ಚೆನ್ನೈ: ಚಾರ್ಜಿಂಗ್ ವೇಳೆ ಮೊಬೈಲ್ನಲ್ಲಿ ಮಾತನಾಡಬಾರದು ಎಂದು ಹೇಳಿದರೂ ಕೆಲವರು ಇನ್ನು ಅದೇ ಅಭ್ಯಾಸದಲ್ಲಿ ತೊಡಗಿರುವುದನ್ನು ನೋಡಿದ್ದೇವೆ. ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಪ್ರಾಣವನ್ನು ಕಸಿಯುತ್ತದೆ ಎಂಬುದು ತಿಳಿದಿರಬೇಕು. ಅಲ್ಲದೆ, ಉತ್ತಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಇಲ್ಲವಾದಲ್ಲಿ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಮೊಬೈಲ್ ಅನ್ನು ಚಾರ್ಜ್ಗೆ ಇಟ್ಟು ಅದರಲ್ಲಿ ಮಾತನಾಡುವಾಗ ಸ್ಫೋಟಗೊಂಡ ಪರಿಣಾಮ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಮೃತ ಯುವತಿಯನ್ನು ಕೊಕಿಲಾಂಪಾಲ್ (33) ಎಂದು ಗುರುತಿಸಲಾಗಿದೆ. ಈಕೆ ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದವಳು. ಮದುವೆಯಾಗಿದ್ದು ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟನು.
ಗಂಡ ಮೃತಪಟ್ಟ ಬಳಿಕ ಜೀವನೋಪಾಯಕ್ಕಾಗಿ ಕೋಕಿಲಾಂಪಾಲ್ ಮೇಲಕಾಪಿಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು. ನಿನ್ನೆ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದರು. ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಕೋಕಿಲಾಂಪಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಗಡಿಯಲ್ಲಿದ್ದ ಎಲ್ಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಕೋಕಿಲಂಪಾಲ್ ಅವರ ತಂದೆ ಮನೋಕರನ್ ಅವರು ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಾರ್ಖಂಡ್ನಲ್ಲಿ ಹಸಿವಿನಿಂದ ಸಾವನ್ನಪ್ಪಿದ ಹಿರಿಯ ವ್ಯಕ್ತಿ; ಆಹಾರ ಧಾನ್ಯಗಳು ಸಿಗದೆ ತೊಂದರೆಗೀಡಾದ ಬಡ ಕುಟುಂಬಗಳು
ಜಾರ್ಖಂಡ್: ದಂಡೈ ಬ್ಲಾಕ್ ಆಫೀಸ್ ಬಳಿ ವಾಸಿಸುವ ಮುಸಾಹರ್ ಕುಟುಂಬದ ಜನರಿಗೆ ಕಳೆದ ಏಳು ತಿಂಗಳಿಂದ ಪಡಿತರ ಸಿಗುತ್ತಿಲ್ಲ. ಈಗ ಅವರೆಲ್ಲರೂ ಉಪವಾಸವಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬುಧವಾರ, 50 ವರ್ಷದ ಸುರೇಶ್ ಮುಸಾಹರ್ ಹಸಿವಿನಿಂದ (ಆಹಾರದ ಕೊರತೆಯಿಂದ) ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ.
ಶಂಕರ ಮುಸಾಹರ, ಉಮೇಶ ಮುಸಾಹರ, ದಿನೇಶ ಮುಸಾಹರ, ಮಹೇಂದ್ರ ಮುಸಾಹರ ಸೇರಿದಂತೆ ಮೃತರ ಕುಟುಂಬದವರು ಕಳೆದ ಏಳು ತಿಂಗಳಿಂದ ನಮಗೆ ಪಡಿತರ ಸಿಗುತ್ತಿಲ್ಲ. ಬರಗಾಲದಿಂದಾಗಿ ಗ್ರಾಮಗಳಲ್ಲಿ ಭಿಕ್ಷೆಯೂ ಸಿಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸಿಗದ ಕಾರಣ ಸುರೇಶ ಮುಸಾಹರ್ ದೌರ್ಬಲ್ಯ ಹೊಂದಿದ್ದು, ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ದೂರಿದ್ದಾರೆ.
ಇತ್ತ ಸುರೇಶ್ ಮುಸಾಹರ್ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದಂಡಾಯಿಯ ಬಿಡಿಒ ಚೋನಾರಾಮ್ ಹೆಂಬ್ರಾಂ ತಿಳಿಸಿದ್ದಾರೆ.
ಜಾರ್ಖಂಡ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೀನ್ ಕಾರ್ಡ್ ಪಡಿತರ ಯೋಜನೆ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದ್ದು, ಬಡವರು ಎಂಟು ತಿಂಗಳಿಂದ ಅಕ್ಕಿಗಾಗಿ ಕಾಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಬಡವರು ಫೆಬ್ರವರಿ ತಿಂಗಳ ಪಡಿತರ ಪಡೆಯುತ್ತಿದ್ದಾರೆ. ರಾಜ್ಯದ 485806 ಗ್ರೀನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳು ಸರ್ಕಾರದ ಆಹಾರ ಧಾನ್ಯಗಳನ್ನು ಪಡೆಯದೆ ತೊಂದರೆಗೀಡಾಗಿದ್ದಾರೆ.
ಎಂಟು ತಿಂಗಳಿಂದ ಅವರಿಗೆ ಸರ್ಕಾರದ ಆಹಾರ ಧಾನ್ಯಗಳು ಸಿಗುತ್ತಿಲ್ಲ. ಎಫ್ಸಿಐ ಗೋದಾಮಿನಿಂದ ಗ್ರೀನ್ ಕಾರ್ಡ್ ಪಡಿತರ ಯೋಜನೆ ಹೊಂದಿರುವವರಿಗೆ ಆಹಾರ ಧಾನ್ಯಗಳು ಲಭ್ಯವಿಲ್ಲ. ರಾಜ್ಯ ಸರ್ಕಾರ ಹಂಚಿಕೆ ಮಾಡುತ್ತಿಲ್ಲವಾದ್ದರಿಂದ ಸೋತು ಮನೆಗೆ ಮರಳುತ್ತಿದ್ದಾರೆ.