ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್

ಮುಂಬಯಿ: ಬಾಲಿವುಡ್ ನಟ ಆಮಿರ್ ಖಾನ್ ಮಗಳು ಇರಾ ಖಾನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರ ಸರಳ ವ್ಯಕ್ತಿತ್ವದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇರಾ ಖಾನ್ ಅವರು ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಅವರೊಂದಿಗೆ ನವೆಂಬರ್ 18, 2022 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ನೂಪುರ್ ಶಿಖರೆ ಇರಾ ಖಾನ್ ಅವರನ್ನು ಪ್ರಪೋಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು.
ಇದೀಗ ಆಮಿರ್ ಪುತ್ರಿ ಇರಾ ಆಟೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ತನ್ನ ಸ್ನೇಹಿತೆಯೊಂದಿಗೆ ಸಂಚರಿಸುವ ವೇಳೆ ಮನೆಯಲ್ಲಿದ್ದ ದುಬಾರಿ ಕಾರನ್ನು ಬಿಟ್ಟು ಮನೆಯಿಂದಲೇ ಆಟೋವೊಂದರಲ್ಲಿ ಪ್ರಯಾಣ ಬೆಳೆಸಿದ ವಿಡಿಯೋ ವೈರಲ್ ಆಗಿದೆ.

ಪಾಪರಾಜಿ ಅವರ ಆಟೋ ಸಂಚಾರದ ವಿಡಿಯೋವನ್ನು ಸೆರ ಹಿಡಿದ್ದಾರೆ. ಅವರತ್ತ ಕೈಬೀಸಿ ಇರಾ ನಗುಮುಖದಿಂದ ಥ್ಯಾಂಕ್ಯೂ ಹೇಳಿದ್ದಾರೆ.
“ಇವರು ಸಿಂಪಲ್ ಸ್ಟಾರ್ ಕಿಡ್ “ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ರಂಗಭೂಮಿಯಲ್ಲಿ ನಾಟಕ ನಿರ್ದೇಶಕಿಯಾಗಿಯೂ ಪಾದಾರ್ಪಣೆ ಮಾಡಿರುವ ಇರಾ ಅವರು, ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ಅನುಭವವನ್ನು ಆಗಾಗ ಹಂಚಿಕೊಳ್ಳುತ್ತಾರೆ.
