ಕೈಕೊಟ್ಟ ಇವಿಎಂ ; ವೋಟ್ ಮಾಡಲಾಗದೇ ವಾಪಾಸ್ಸಾದ ಮಿಜೋರಾಂ ಸಿಎಂ..!
Twitter
Facebook
LinkedIn
WhatsApp
ಐಜ್ವಾಲ್: ಮಿಜೋರಾಂ ಹಾಗೂ ಛತ್ತೀಸ್ ಗಢ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ವೇಳೆ ಇವಿಎಂ ದೋಷದಿಂದಾಗಿ ಮಿಜೋರಾಂ ಮುಖ್ಯಮಂತ್ರಿ ಝೊರಂತುಂಗಾ ಅವರಿಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ
ಮಿಜೋರಾಂ ಮುಖ್ಯಮಂತ್ರಿ ಮತ್ತು ಎಂಎನ್ ಎಫ್ ಅಧ್ಯಕ್ಷ ಝೋರಂತಂಗ ಅವರು ಚುನಾವಣೆಗೆ ಮತಚಲಾಯಿಸಲು ತೆರಳಿದರೂ ಇವಿಎಂ ಯಂತ್ರ ಕೈಕೊಟ್ಟ ಕಾರಣ ಮತಚಲಾಯಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ.
ಮತಯಂತ್ರ ಕಾರ್ಯನಿರ್ವಹಿಸದ ಕಾರಣ ಕೆಲ ಸಮಯ ಪ್ರಯತ್ನಿಸಿದೆ. ಆದರೆ ಮತಚಲಾಯಿಸಲು ಆಗದೇ ಹೋದ ಕಾರಣ ಬೆಳಗ್ಗೆ ಸಭೆಯ ನಂತರ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.