ಬುಧವಾರ, ಮೇ 22, 2024
ಮನೆಯೊಂದರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮಹಿಳೆಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ.!-Rain Alert: ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ; ಸಮುದ್ರ ತೀರದಲ್ಲಿ ಹೈ-ಅಲರ್ಟ್.!-Rave Party :ಇಂದು ಮತ್ತೊಂದು ವಿಡಿಯೋ ಹರಿಬಿಟ್ಟ ನಟಿ ಹೇಮಾ; ರೇವ್ ಪಾರ್ಟಿಯಲ್ಲಿ ಇದ್ದಿದ್ದು ನಿಜಾನಾ.?-ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್ ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ; ಕೆ.ಎಸ್ ಈಶ್ವರಪ್ಪ-2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ

Twitter
Facebook
LinkedIn
WhatsApp
Aamir Khans daughter Ira Khan shares picture in a yellow and black bikini 3 1

ಕಂಬಳ (Kambala) ಮತ್ತು ಜಲ್ಲಿಕಟ್ಟುಗಳಂತಹ ಸಾಂಪ್ರದಾಯಿಕ ಕ್ರೀಡೆಗಳಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹಸಿರು ನಿಶಾನೆ ನೀಡಿದ್ದು, ಕಂಬಳ ಮತ್ತು ಜಲ್ಲಿಕಟ್ಟು ನಡೆಸಬಹುದು ಎಂದು ಹೇಳಿದೆ. ಈಗಾಗಲೇ ಕಂಬಳದಲ್ಲಿ ತಂತ್ರಜ್ಞಾನದ ಪರಿಚಯದೊಂದಿಗೆ ಕ್ರೀಡೆಯ ಆಧುನೀಕರಣಕ್ಕೆ ವೇದಿಕೆ ಸಜ್ಜಾಗಿದೆ ಮತ್ತು ಮುಂಬರುವ ನವೆಂಬರ್‌ನಿಂದ ಮಹಿಳೆಯರು ಕೂಡ ಈ ಕಂಬಳದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇತ್ತೀಚೆಗೆ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ, ಎತ್ತಿನಗಾಡಿ ಓಟದ ಜೊತೆಗೆ ಗೂಳಿ ಪಳಗಿಸುವ ಕ್ರೀಡೆಗಳಾದ ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಅವಕಾಶ ನೀಡಿತು.

ಕರಾವಳಿ ಜಿಲ್ಲೆಯ ಕಂಬಳ ಅಕಾಡೆಮಿಯಿಂದ ಮಹಿಳೆಯರಿಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಸಜ್ಜಾಗಿದೆ. ಈಗಾಗಲೇ ಈ ಪ್ರಯತ್ನವನ್ನು ಕರಾವಳಿ ಜಿಲ್ಲೆಯ ಕಂಬಳ ಅಕಾಡೆಮಿ ಮಾಡುತ್ತಿದೆ, ಮಹಿಳೆಯರು ಕೂಡ ಕೋಣಗಳನ್ನು ಓಡಿಸಬಹುದು ಎಂದು ಕರಾವಳಿ ಜಿಲ್ಲೆಯ ಕಂಬಳ ಅಕಾಡೆಮಿ ತಿಳಿಸಿದೆ.

ಈಗಾಗಲೇ ಮಾಡಿರುವ ಸಿದ್ಧತೆಗಳು ಸಫಲಗೊಂಡರೆ ಮಹಿಳೆಯರು ಕೂಡ ಕಂಬಳದಲ್ಲಿ ಭಾಗವಹಿಸಬಹುದು. ಈಗಾಗಲೇ ಮಹಿಳೆಯರು ಕರವಾಳಿ ಭಾಗದಲ್ಲಿ ರಂಗಭೂಮಿ ಯಕ್ಷಗಾನ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ, ಇದೀಗ ಕಂಬಳ ಒಂದು ಪ್ರಮುಖವಾಗಿದೆ.

ದಕ್ಷಿಣ ಕನ್ನಡ ಕಂಬಳ ಸಮಿತಿಯ ಸಂಸ್ಥಾಪಕ-ಕಾರ್ಯದರ್ಶಿ ಕೆ ಗುಣಪಾಲ ಕದಂಬ ಅವರು ಟೈಮ್ಸ್​​ ಆಫ್​​​ ಇಂಡಿಯಾ (TOI) ಕ್ಕೆ ನೀಡಿದ ಹೇಳಿಕೆ ಪ್ರಕಾರ ಪಾರದರ್ಶಕತೆಯನ್ನು ತರುವ ಮತ್ತು ಪ್ರಾರಂಭದ ಹಂತದಲ್ಲಿ ವಿಳಂಬವನ್ನು ತಡೆಯುವ ತಂತ್ರಜ್ಞಾನವನ್ನು ಪರಿಚಯಿಸುವ ಕುರಿತು ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಕಂಬಳ 24 ಗಂಟೆಗಳ ಒಳಗೆ ಮುಕ್ತಾಯಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

ಮಿಯಾರ್ ಮತ್ತು ಮೂಡುಬಿದಿರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಬಳ ಅಕಾಡೆಮಿಯು ತುಳುನಾಡಿನ ಸಾಂಪ್ರದಾಯಿಕ ಪುರುಷ ಪ್ರಧಾನ ಕ್ರೀಡೆಯಾದ ಕಂಬಳದ ವಿವಿಧ ಅಂಶಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಚಿಂತನೆ ನಡೆಸಿದೆ. ಅವರಿಗೂ ಹೆಚ್ಚಿನ ತರಬೇತಿಯ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ