ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಎತ್ತಿನಹೊಳೆ ಮತ್ತು ತುಳು ಭಾಷೆ ವಿಚಾರದಲ್ಲಿ ಬೆಂಬಲ ಸಿಗಲಿಲ್ಲ; ನಾಳೆಯ ಕರ್ನಾಟಕ ಬಂದ್ ಗೆ ಕರಾವಳಿಯಿಂದ ಬೆಂಬಲ ಇಲ್ಲ :ದಿಲ್ ರಾಜ್ ಆಳ್ವ

Twitter
Facebook
LinkedIn
WhatsApp
ಎತ್ತಿನಹೊಳೆ ಮತ್ತು ತುಳು ಭಾಷೆ ವಿಚಾರದಲ್ಲಿ ಬೆಂಬಲ ಸಿಗಲಿಲ್ಲ; ನಾಳೆಯ ಕರ್ನಾಟಕ ಬಂದ್ ಗೆ ಕರಾವಳಿಯಿಂದ ಬೆಂಬಲ ಇಲ್ಲ :ದಿಲ್ ರಾಜ್ ಆಳ್ವ

Cauvery Water Protest: ಕಾವೇರಿ ನದಿ ನೀರಿನ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಹೋರಾಟ ತೀವ್ರಗೊಂಡಿದೆ.

ಈ ಮಧ್ಯೆ ನಾಳೆ ಕರ್ನಾಟಕ ಬಂದ್‌ಗೆ ಕೂಡ ಕರೆ ನೀಡಲಾಗಿದೆ. ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಆ ಮೂಲಕ ಕಾವೇರಿ ಪರ ಹೋರಾಟ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.

ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಜನರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ.

ಸಾಮಾನ್ಯವಾಗಿ ಈ ಹಿಂದಿನ ಅನೇಕ ದಶಕಗಳ ಬೆಳವಣಿಗೆಗಳನ್ನು ಗಮನಿಸಿದಾಗ ಕರ್ನಾಟಕದ ನೆಲ ಜಲ ಪರ ಹೋರಾಟಗಳಿಗೆ ಕರಾವಳಿ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಕಾವೇರಿ ಪರ ಹೋರಾಟ, ಕನ್ನಡ ಪರ ಹೋರಾಟ, ಮೇಕೆದಾಟು, ಸೇರಿದಂತೆ ನೆಲ ಜಲ ಭಾಷೆಗೆ ಸಂಬಂಧಿಸಿದ ಕರ್ನಾಟಕದ ಹೋರಾಟಗಳಿಗೆ ಕರಾವಳಿ ಭಾಗ ಅರ್ಥಾತ್ ತುಳುನಾಡಿನಲ್ಲಿ ಬೆಂಬಲ ವ್ಯಕ್ತವಾಗೋದಿಲ್ಲ.

ಅದರ ಜೊತೆಗೆ ತುಳುನಾಡು ಪರ ಹೋರಾಟಗಳಿಗೂ ಕೂಡ ಕರಾವಳಿ ಹೊರತುಪಡಿಸಿ ಇತರ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಉದಾಃ ತುಳು ಭಾಷೆ, ಎತ್ತಿನಹೊಳೆ ಹೋರಾಟ, ಕಂಬಳ ಸೇರಿದಂತೆ ಇತರ ಹೋರಾಟಗಳಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಬಿಟ್ಟರೆ ಕರ್ನಾಟಕದ ಬೇರೆ ಭಾಗದಿಂದ ಹೇಳಿಕೊಳ್ಳುವಂತಹ ಮಟ್ಟಿಗೆ ಬೆಂಬಲ ವ್ಯಕ್ತವಾದ ಉದಾಹರಣೆ ಇಲ್ಲ.

ಇದೀಗ ಈ ಬಾರಿಯ ಕಾವೇರಿ ಪರ ಹೋರಾಟದಲ್ಲೂ ಕರಾವಳಿಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ದಿನ ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಖಾಸಗಿ ಬಸ್ ಮಾಲಕರ ಸಂಘದ ಮುಖಂಡ ದಿಲ್ ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ, ಜಿಲ್ಲೆಯಲ್ಲಿ ಅಂದು ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಅಲ್ಲದೇ, ತುಳುನಾಡಿನ ನಾಡು ನುಡಿ ಪರ ಹೋರಾಟಗಳಿಗೆ ಕನ್ನಡ ಪರ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ, ಹೀಗಾಗಿ ಕಾವೇರಿ ಹೋರಾಟಕ್ಕೆ ಮಂಗಳೂರಲ್ಲಿ ಖಾಸಗಿ ಬಸ್‌ಗಳ ಬೆಂಬಲ ಇಲ್ಲ ಎಂದು ಹೇಳಿದ್ದಾರೆ.

ದ.ಕ ಜಿಲ್ಲೆಯಲ್ಲಿ ಬಂದ್‌ಗೆ ಕೇವಲ ನೈತಿಕ ಬೆಂಬಲ ಮಾತ್ರ ಎಂದಿರುವ ದಿಲ್‌ರಾಜ್ ಆಳ್ವ, ಬಂದ್, ಪ್ರತಿಭಟನೆ ಮಾಡಿ ಬಂದ್‌ಗೆ ಬೆಂಬಲವನ್ನು ನೀಡೋದಿಲ್ಲ. ಎತ್ತಿನಹೊಳೆ ವಿಚಾರದಲ್ಲಿ ಕನ್ನಡ ಸಂಘಟನೆಗಳ ಬೆಂಬಲ ಕೇಳಿದ್ದೆವು. ಆಗ ನೀರು ಎಲ್ಲರ ಹಕ್ಕು ಎಂದು ಹೇಳಿ ಬೆಂಬಲ ನೀಡಿಲ್ಲ ಎಂದರು.

ತುಳು ಭಾಷೆ ವಿಚಾರದ ಹೋರಾಟದಲ್ಲಿ ನಮಗೆ ಬೆಂಬಲ ಸಿಕ್ಕಿಲ್ಲ, ತುಳು ಭಾಷೆ ಬಗ್ಗೆ ಚರ್ಚೆ ಆದಾಗ ಆ ಭಾಗದ ಶಾಸಕರು ತಮಾಷೆ ಮಾಡಿದ್ದರು. ಎತ್ತಿನ ಹೊಳೆ ಅವೈಜ್ಞಾನಿಕ ಅಂತಾ ಗೊತ್ತಿದ್ದರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಹೀಗಾಗಿ ಕರ್ನಾಟಕ ಬಂದ್‌ಗೆ ನಮ್ಮ ನೈತಿಕ ಬೆಂಬಲ ಮಾತ್ರವೇ ಇದೆ. ಬಸ್ ಗಳ ಓಡಾಟ ಸೇರಿ ಎಲ್ಲವೂ ಅಂದು ಯಥಾಸ್ಥಿತಿಯಲ್ಲಿ ಇರಲಿದೆ ದಿಲ್ ರಾಜ್ ಆಳ್ವ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist