ಪ್ರೀತಿಸಿದ ಯುವತಿಯ ಮೇಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ, ಯುವಕನ ಬಂಧನ
ಬೆಂಗಳೂರು: ಟೆಕ್ಕಿಯೋರ್ವ (Techie) ಪ್ರೀತಿಸಿದ ಯುವತಿಯ ಮೇಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಮೈಕೋ ಲೇಔಟ್‍ನಲ್ಲಿ ನಡೆದಿದೆ.
ರವಿ ಕುಮಾರ್ (28) ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಆತ ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಯುವತಿ ರವಿಯ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ.
ಇದರಿಂದ ಕೋಪಗೊಂಡಿದ್ದ ರವಿಗೆ ಯುವತಿಯ ಮೇಲೆ ಅನುಮಾನ ಮೂಡಿತ್ತು. ಇದರಿಂದ ಪ್ಲಾನ್ ಮಾಡಿ ಆಗಸ್ಟ್ 2ರಂದು ಪ್ರೇಯಸಿಯನ್ನ ತನ್ನ ಪಿಜಿ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಕಬ್ಬಿಣದ ರಾಡ್‍ನಿಂದ ಯುವತಿಯ ತಲೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಯುವತಿಯನ್ನು ಸ್ಥಳೀಯರು ನಿಮ್ಹಾಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿ ರವಿ ಕುಮಾರ್‌ನನ್ನು ಪೊಲೀಸರು (Police) ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!
ಮುಂಬೈ: ಯುವಕನೊಬ್ಬ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ಗೆಳೆಯನ ಕುತ್ತಿಗೆಗೆ ಕಚ್ಚಿದ್ದು, ಬಳಿಕ ಆತನೇ ಹೆಣವಾಗಿ ಹೋದ ಪ್ರಸಂಗವೊಂದು ಮುಹಾರಾಷ್ಟ್ರದಲ್ಲಿ (Maharastra) ನಡೆದಿದೆ.
ಮೃತನನ್ನು ಇಶ್ತಿಯಾಕ್ ಖಾನ್ ಎಂದು ಗುರುತಿಸಲಾಗಿದೆ. ಈತನ ತಲೆಗೆ ಕಲ್ಲಿನಿಂದ ಜಜ್ಜಿ ರಾಹುಲ್ ಲೋಹರ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ನಡೆದಿದ್ದೇನು..?: ರಾಹುಲ್ ತನ್ನ ಗೆಳೆಯರ ಜೊತೆ ಮದ್ಯಪಾನ (Alcohol) ಮಾಡಲು ತೆರಳಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಶ್ತಿಯಾಕ್, ನನಗೆ ನಿನ್ನ ರಕ್ತ ಕುಡಿಯಬೇಕು (Blood) ಎಂದು ಹೇಳಿದ್ದಾನೆ. ಅಲ್ಲದೇ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ರಾಹುಲ್ ಕುತ್ತಿಗೆಗೆ ಕಚ್ಚಿದ್ದಾನೆ.
ಈ ಸಂಬಂಧ ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ರಾಹುಲ್ ಅಲ್ಲಿಂದ ತೆರಳಿದ್ದಾನೆ. ಕೆಲ ಗಂಟೆಗಳ ಬಳಿಕ ರಾಹುಲ್ ಮತ್ತೆ ಗೆಳೆಯ ಇಶ್ತಿಯಾಕ್ ಭೇಟಿಯಾಗಲು ಬಂದಿದ್ದಾನೆ. ಈ ವೇಳೆ ನಿನಗೆ ನನ್ನ ರಕ್ತ ಬೇಕಾ..? ನಿನ್ನ ಜೀವಂತವಾಗಿರಲು ನಾನು ಬಿಡಲ್ಲ ಎಂದು ಹೇಳಿ ಇಶ್ತಿಯಾಕ್ ತಲೆಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಆರೋಪಿ ರಾಹುಲ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ನಿಕಲ್ಜೆ ತಿಳಿಸಿದ್ದಾರೆ.