Esha Deol: ಹೇಮಾ ಮಾಲಿನಿ- ಧರ್ಮೇಂದ್ರ ಮಗಳ ದಾಂಪತ್ಯದಲ್ಲಿ ಬಿರುಕು! ಮದುವೆಯಾದ 12 ವರ್ಷಗಳ ನಂತರ ಡಿವೋರ್ಸ್ ಕೊಟ್ಟ ಇಶಾ ಡಿಯೋಲ್!
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಮತ್ತು ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮಗಳು ಇಶಾ ಡಿಯೋಲ್ ಮದುವೆಯಾಗಿ 12 ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದಾರೆ. ಇಬ್ಬರು ಡಿವೋರ್ಸ್ ಬಗ್ಗೆ ಮಾತಾಡಿದ್ದಾರೆ.
ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ನಡುವೆ ಮನಸ್ತಾಪವಿದೆ ಮತ್ತು ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಇಬ್ಬರೂ ತಮ್ಮ ದಾಂಪತ್ಯ ಬಿರುಕನ್ನು ಒಪ್ಪಿಕೊಂಡಿದ್ದಾರೆ.
ದೆಹಲಿ ಟೈಮ್ಸ್ ಹಂಚಿಕೊಂಡ ಪೋಸ್ಟ್ನಲ್ಲಿ, ನಾವು ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ನಮಗೆ ನಮ್ಮ ಮಕ್ಕಳು ಮುಖ್ಯ. ನಾವು ಯಾವಾಗಲೂ ಅವರ ಸಂತೋಷ ಮತ್ತು ಸುಖದ ಬಗ್ಗೆ ಯೋಚಿಸುತ್ತೇವೆ. ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ಹೇಳಿದ್ದಾರೆ.ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಇಬ್ಬರು ಹೀಗೆ ಹೇಳುವ ಮೂಲಕ ವಿಚ್ಛೇದನವನ್ನು ಘೋಷಿಸಿದ್ದಾರೆ. ಸುದ್ದಿ ಕೇಳಿದ ಇಶಾ ಅಭಿಮಾನಿಗಳು ದೊಡ್ಡ ಆಘಾತಕ್ಕೆ ಒಳಗಾಗಿದ್ದಾರೆ.
ಇಶಾ ಡಿಯೋಲ್ 29 ಜೂನ್ 2012 ರಂದು ಭಾರತ್ ಅವರನ್ನು ವಿವಾಹವಾದರು. ಇಬ್ಬರೂ ಇಸ್ಕಾನ್ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. 5 ವರ್ಷಗಳ ಮದುವೆಯ ನಂತರ ಇಶಾ ರಾಧ್ಯ ಎಂಬ ಮಗಳಿಗೆ ಜನ್ಮ ನೀಡಿದರು. 2019 ರಲ್ಲಿ ಇಶಾ ಅವರ ಎರಡನೇ ಮಗಳು ಮಿರಾಯಾ ತಖ್ತಾನಿಗೆ ಜನ್ಮ ನೀಡಿದರು. ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಮದುವೆಯಾಗಿ 12 ವರ್ಷಗಳಾಗಿದ್ದು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇದೀಗ 12 ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟಿದ್ದಾರೆ.
ಇಶಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದರು ಇತ್ತೀಚಿಗೆ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದರು. ತಮ್ಮ ಹೆಣ್ಣುಮಕ್ಕಳ ಫೋಟೋ ಮಾತ್ರ ಹಂಚಿಕೊಂಡಿದ್ದಾರೆ.
ಹೇಮಾ ಮಾಲಿನಿ ಅವರ 75 ನೇ ಹುಟ್ಟುಹಬ್ಬದಲ್ಲಿ ಇಶಾ ಅವರ ಪತಿ ಭರತ್ ಇರಲಿಲ್ಲ. ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈ ವಿಷಯಗಳೇ ಇಶಾ ಅವರ ವಿಚ್ಛೇದನದ ಸುದ್ದಿ ಹರಡಲು ಕಾರಣವಾಗಿತ್ತು.ಅಷ್ಟೇ ಅಲ್ಲ, ಇಶಾ ಅವರ ಪತಿ ಭರತ್ ತನ್ನ ಕುಟುಂಬದಿಂದ ಬೇರ್ಪಟ್ಟು ತನ್ನ ಗರ್ಲ್ ಫ್ರೆಂಡ್ ಜೊತೆ ವಾಸಿಸುತ್ತಿದ್ದಾರೆ ಹೇಳಲಾಗ್ತಿದೆ. ನೆಟ್ಟಿಗರು, ‘ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ಪಾರ್ಟಿಯೊಂದರಲ್ಲಿ ಇಶಾ ತನ್ನ ಪತಿ ಭರತ್, ಗರ್ಲ್ಫ್ರೆಂಡ್ ಜೊತೆ ಇರೋದನ್ನು ನೋಡಿದ್ದರಂತೆ.