ಸೋಮವಾರ, ಮೇ 20, 2024
ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ-ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!-ಗಗನೇಕ್ಕೇರುತ್ತಿದೆ ಚಿಕನ್ ದರ; ಮೊಟ್ಟೆ ಬೆಲೆಯೂ ಏರಿಕೆ.!-ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ; ಲೈಸೆನ್ಸ್ ಇರುವ ಗನ್​​ಗಳು, ಶಸ್ತ್ರಗಳನ್ನು ಠಾಣೆಗಳಲ್ಲಿ ಜಮಾ ಮಾಡಲು ಸೂಚನೆ..!

Twitter
Facebook
LinkedIn
WhatsApp
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ; ಲೈಸೆನ್ಸ್ ಇರುವ ಗನ್​​ಗಳು, ಶಸ್ತ್ರಗಳನ್ನು ಠಾಣೆಗಳಲ್ಲಿ ಜಮಾ ಮಾಡಲು ಸೂಚನೆ..!

ಲೋಕಸಭೆ (Lok Sabha Elections) ಕುರುಕ್ಷೇತ್ರ ದಿನ ದಿನಕ್ಕೂ ರಂಗೇರುತ್ತಿದೆ. ಅಖಾಡದಲ್ಲಿ ನೀನಾ ನಾನಾ ಅಂತ ಸೆಣೆಸಾಡುವುದಕ್ಕೆ ರಾಜಕೀಯ ಹುರಿಯಾಳುಗಳು ಸನ್ನದ್ಧವಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನಿನ್ನೆ ದಿನಾಂಕ ಘೋಷಣೆ ಮಾಡಿದೆ. ಚುನಾವಣಾ ತಯಾರಿ, ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ಮೂಲಕ ಇಂಚಿಂಚೂ ಮಾಹಿತಿ ನೀಡಿದ್ದಾರೆ. ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ರಾಜ್ಯದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸದ್ಯ ಎಲ್ಲಾ ಪೊಲೀಸ್ ಠಾಣೆಗಳಿಗೂ ನಿವಾಸಿಗಳ ಬಳಿ ಇರುವ ಗನ್ ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ.

ಲೈಸೆನ್ಸ್ ಇರುವ ಗನ್​​ಗಳು, ಶಸ್ತ್ರಗಳನ್ನು ಹೊಂದಿರುವ ಎಲ್ಲಾ ನಾಗರಿಕರು ತಮ್ಮ ಶಸ್ತ್ರಗಳನ್ನ ಆಯಾ ಠಾಣೆಗಳಿಗೆ ಜಮಾ ಮಾಡುವಂತೆ ಸೂಚಿಸಲಾಗಿದೆ.

ನಿನ್ನೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದು, ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಇದೆ. ಹಾಗಾಗಿ ಚೆಕ್ ಪೋಸ್ಟ್​ಗಳನ್ನ ರಚಿಸಲಾಗಿದೆ. 29 ಜಿಲ್ಲೆಗಳ ಜೊತೆ ಬಾರ್ಡರ್ ಬರಲಿದೆ. ಎಲ್ಲಾ ಕಡೆ ಚೆಕ್ ಪಾಯಿಂಟ್ ಹಾಕಿದ್ದೇವೆ. ಕಳೆದ ಆರು ತಿಂಗಳಿಂದ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

532 ಕೋಟಿ ರೂ. ಹಣವನ್ನ ಸೀಜ್ ಮಾಡಲಾಗಿದೆ. ಆಗಸ್ಟ್​ನಿಂದ ಮಾರ್ಚ್​ವರೆಗೆ ಸೀಜ್ ಮಾಡಲಾಗಿದೆ. 42 ಕೋಟಿ ರೂ. ಲಿಕ್ಕರ್, 26 ಕೋಟಿ ರೂ. ಮೌಲ್ಯದ ಡ್ರಗ್ಸ್, 71 ಕೋಟಿ ರೂ. ಮೌಲ್ಯದ ಗೋಲ್ಡ್ ಸೀಜ್ ಮಾಡಿದ್ದೇವೆ. ಇಲ್ಲಿಯವರೆಗೆ 531 ಕೋಟಿ ರೂ. ಸೀಜ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ

ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಮಾರ್ಚ್ 28ರಿಂದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಲಿದೆ. ನಾಮಿನೇಷನ್‌ಗೆ ಏಪ್ರಿಲ್ 4 ಕೊನೇ ದಿನವಾಗಿದ್ದು, ಏಪ್ರಿಲ್ 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8ರೊಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಕರ್ನಾಟಕದಲ್ಲಿ ಏಪ್ರಿಲ್ 26ಕ್ಕೆ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ