ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಹಿಳಾ ಪೋಲೀಸರಿಂದ ಎನ್ ಕೌಂಟರ್; ಯಶಸ್ವಿಗೆ ಸನ್ಮಾನ

Twitter
Facebook
LinkedIn
WhatsApp
ಮಹಿಳಾ ಪೋಲೀಸರಿಂದ ಎನ್ ಕೌಂಟರ್; ಯಶಸ್ವಿಗೆ ಸನ್ಮಾನ

ನವರಾತ್ರಿಯ ಸಮಯದಲ್ಲಿ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ತಮ್ಮ ಉಗ್ರ ಸ್ವರೂಪವನ್ನು ತೋರಿಸಿದ್ದಾರೆ. ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ,  ದರೋಡೆಕೋರರು, ಗೂಂಡಾಗಳು,  ಮಾಫಿಯಾದಲ್ಲಿ ತೊಡಗಿದ್ದವರ ಹುಟ್ಟಡಗಿಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ನೂರಾರು ಎನ್‌ಕೌಂಟರ್‌ಗಳು ನಡೆದಿವೆ. ಆದರೆ, ಯುಪಿಯಲ್ಲಿ ಕ್ರಿಮಿನಲ್ ಒಬ್ಬನನ್ನು ಮಹಿಳಾ ಪೊಲೀಸರು ಎನ್‌ಕೌಂಟರ್ ಮಾಡಿರುವುದು ಇದೇ ಮೊದಲು.

ಎಸ್ಪಿ ಧವಲ್ ಜೈಸ್ವಾಲ್ ಅವರ ಸೂಚನೆಯ ಮೇರೆಗೆ ಬರವಪಟ್ಟಿ ಪೊಲೀಸ್ ಠಾಣೆಯ ಮಹಿಳಾ ಎಸ್‌ಒ ಮತ್ತು ಅವರ 4 ಮಹಿಳಾ ಪೊಲೀಸರು ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದರು. ಇಮಾಮುಲ್ ಮೇಲೆ 25,000 ರೂಪಾಯಿ ಬಹುಮಾನವನ್ನು ಕೂಡಾ ಘೋಷಿಸಲಾಗಿತ್ತು. ಇದೀಗ, ಇಮಾಮುಲ್ ನನ್ನು ಲೇಡಿಸ್ ಪೋಲೀಸ್ ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದಾರೆ. ಎನ್ ಕೌಂಟರ್ ವೇಳೆ ಇಮಾಮುಲ್ ಕಾಲಿಗೆ ಗುಂಡು ತಗುಲಿದೆ.

ಮಹಿಳಾ ಪೊಲೀಸರ ಮೊದಲ ಎನ್ಕೌಂಟರ್ : 

ಬಂಧಿತ ಕ್ರಿಮಿನಲ್ ಇಮಾಮುಲ್ ವಿರುದ್ಧ ಕುಶಿನಗರ ಮತ್ತು ಸಂತ ಕಬೀರನಗರದಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ರಾಮ್‌ಕೋಲಾ ಪೊಲೀಸ್ ಠಾಣೆಯ ಮೆಹದಿಗಂಜ್‌ನ ಅಮದರಿಯಾ ಕಾಲುವೆ ಬಳಿ ಕ್ರಿಮಿನಲ್ ಇಮಾಮುಲ್ ಅನ್ನು ಮಹಿಳಾ ಪೊಲೀಸರು ಸುತ್ತುವರೆದರು  ಎನ್‌ಕೌಂಟರ್ ನಡೆಸಿ ಬಂಧಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಕುಶಿನಗರದಲ್ಲಿ ಲೇಡಿಸ್ ಪೊಲೀಸರು ನಡೆಸಿದ ಈ ಎನ್‌ಕೌಂಟರ್ ಚರ್ಚೆಯ ವಿಷಯವಾಗಿದೆ. 

ಒಳಗೆ ಬರಬೇಡ ಎಂದ ಪತಿಯನ್ನು ಬಡಿದು ಕೊಂದ ಪತ್ನಿ!

ಮಂಡ್ಯ: ಮನೆಯ ಒಳಗೆ ಬರಬೇಡ ಎಂದಿದ್ದಕ್ಕೆ ಪತಿಯನ್ನು ಆತನ ಪತ್ನಿ (Wife) ಹಾಗೂ ಮಗ ಸೇರಿಕೊಂಡು ಹತ್ಯೆಗೈದ ಘಟನೆ ಮದ್ದೂರಿನ (Maddur) ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಉಮೇಶ್ (45) ಎಂದು ಗುರುತಿಸಲಾಗಿದೆ. ಮೃತನ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಹತ್ಯೆಗೈದ ಆರೋಪಿಗಳಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಸವಿತಾ ಪತಿಯನ್ನು ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದಳು. ಗುರುವಾರ ರಾತ್ರಿ ಪಿತೃಪಕ್ಷ ಹಬ್ಬಕ್ಕೆಂದು ಊರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಪತ್ನಿ ಮನೆಗೆ ಮರಳಿ ಬಂದಾಗ ಉಮೇಶ್ ಮನೆಯ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ಸವಿತಾ ಮಗನನ್ನು ಬೆಂಗಳೂರಿನಿಂದ ಕರೆಸಿಕೊಂಡಿದ್ದಾಳೆ. ಇಬ್ಬರು ಸೇರಿಕೊಂಡು ರೀಪ್‍ನಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಉಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ