ಗುರುವಾರ, ಮೇ 16, 2024
ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!-8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಿರಿಯ ನಟ ಶಿವರಾಂ ನಿಧನ.

Twitter
Facebook
LinkedIn
WhatsApp
ಹಿರಿಯ ನಟ ಶಿವರಾಂ ನಿಧನ .

ಬೆಂಗಳೂರು: ಕನ್ನಡ ಚಿತ್ರರಂಗದ ಮಂದಿಗೆ ಮನೆಯ ಹಿರಿಯಣ್ಣನನ್ನು ಕಳೆದುಕೊಂಡ ಭಾವ. ಶಿವರಾಮಣ್ಣ ಎಂದೇ ಆಪ್ತರಾಗಿದ್ದ ಹಿರಿಯ ನಟ ಶಿವರಾಂ (83) ನಮ್ಮನ್ನಗಲಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೊಸಕೆರೆ ಹಳ್ಳಿಯ ಖಾಸಗಿ ಅಸ್ಪತ್ರೆಗೆ ಅವರು ದಾಖಲಾಗಿದ್ದರು . 3 ದಿನಗಳ ಹಿಂದೆ ಕಾರಿನಲ್ಲಿ ತೆರಳುವಾಗ ಅಪಘಾತವಾಗಿತ್ತು. ಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದ ಅವರ ಆರೋಗ್ಯ ಹದಗೆಟ್ಟಿತ್ತು.

ಶಿವರಾಂ ಅವರ ನಟನೆಯ ಚಿತ್ರಗಳು:
1958 ರಿಂದ 1965 ವರೆಗೆ ಶಿವರಾಂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪೋಷಕ ನಟನಾಗಿ ಕಲ್ಯಾಣ್ ಅವರ ಚಿತ್ರ “ಬೆರೆತ ಜೀವ” ದ ಮೂಲಕ ಸಿನಿ ಪಯಣ ಆರಂಭಿಸಿದ ಇವರು, ಸುಮಾರು 6 ದಶಕಗಳಿಂದ ಕಿರಿ ಹಾಗೂ ಹಿರಿ ತೆರೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಶಿವರಾಂ ನಟನೆಯ ಶರಪಂಜರ’, ‘ನಾಗರಹಾವು’ , ‘ಶುಭಮಂಗಳ’, ‘ಚಲಿಸುವ ಮೋಡಗಳು’ , ‘ಶ್ರಾವಣ ಬಂತು’ , ‘ಹಾಲು ಜೇನು’, ‘ಹೊಂಬಿಸಿಲು’, ‘ಹೊಸ ಬೆಳಕು’, ‘ಗುರು ಶಿಷ್ಯರು’ , ‘ಸಿಂಹದಮರಿ ಸೈನ್ಯ’ , ‘ಮಕ್ಕಳ ಸೈನ್ಯ’, ‘ಆಪ್ತಮಿತ್ರ’, ‘ಹುಚ್ಚ’, ಬಜರಂಗಿ, ‘ಹೃದಯವಂತ’ ಮುಂತಾದ ಸಿನಿಮಾಗಳು ಪ್ರಮುಖವಾದವು.
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗೃಹಭಂಗ’, ರವಿಕಿರಣ್ ನಿರ್ದೇಶಿಸಿದ ‘ಬದುಕು’ ಧಾರಾವಾಹಿಯಲ್ಲೂ ಶಿವರಾಂ ಅಭಿನಯಿಸಿದ್ದಾರೆ. ಇದಿಷ್ಟೇ ಅಲ್ಲದೆ, ಶಿವರಾಂ ಅವರು ಸಹೋದರ ಎಸ್.ರಾಮನಾಥನ್‍ ಅವರ ಜೊತೆ ‘ರಾಶಿ ಬ್ರದರ್ಸ್’ ಎಂಬ ಸಂಸ್ಥೆ ಕಟ್ಟಿ, ಈ ಮೂಲಕ ಕನ್ನಡ, ಹಿಂದಿ ಚಿತ್ರಗಳನ್ನು ಕೂಡ ನಿರ್ಮಿಸಿದ್ದಾರೆ. ಇವುಗಳ ಪೈಕಿ ಡಾ. ರಾಜ್ ಕುಮಾರ್ ನಟನೆಯ 175ನೇ ಸಿನೆಮಾ ‘ನಾನೊಬ್ಬ ಕಳ್ಳ’, ರಜನಿಕಾಂತ್ ನಟನೆಯ ‘ಧರ್ಮ ದುರೈ’ ಜನ ಮನ್ನಣೆಗೆ ಪಾತ್ರವಾಗಿವೆ. ರಾಶಿ ಬ್ರದರ್ಸ್ ನಿರ್ದೇಶನದ ‘ ಗೇರಫ್ತರ್’ ಬಾಲಿವುಡ್ ಚಿತ್ರ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ರಜನಿಕಾಂತ್ ಈ ಮೂರು ದಿಗ್ಗಜರು ಒಟ್ಟಾಗಿ ನಟಿಸಿದ ಏಕೈಕ ಚಿತ್ರವಾಗಿದೆ.

ಪ್ರಶಸ್ತಿಗಳು
2010-11 ರಲ್ಲಿ ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್ ಕುಮಾರ್ ಲೈಫ್ ಟೈಂ ಆಚಿವ್‌ಮೆಂಟ್ ಅವಾರ್ಡ್ ಹಾಗೂ 2013 ರ ಪದ್ಮಭೂಷಣ ಡಾ. ಸರೋಜಾದೇವಿ ನ್ಯಾಷನಲ್ ಅವಾರ್ಡ್‌ಗೂ ಶಿವರಾಂ ಅವರು ಭಾಜನರಾಗಿದ್ದರು.
ತಮ್ಮ ರಾಶಿ ಬ್ರದರ್ಸ್ ಸಂಸ್ಥೆ ಮೂಲಕ ‘ಗೆಜ್ಜೆಪೂಜೆ’, ‘ಉಪಾಸನೆ’, ‘ನಾನೊಬ್ಬ ಕಳ್ಳ’, ‘ಡ್ರೈವರ್ ಹನುಮಂತು, ‘ಬಹಳ ಚೆನ್ನಾಗಿದೆ’ ಸಿನಿಮಾ ನಿರ್ಮಿಸಿದ್ದಾರೆ. ಸಿಂಗೀತಮ್ ಶ್ರೀನಿವಾಸರಾವ್ ನಿರ್ದೇಶನದ ರಾಜಕುಮಾರ್ ನಟನೆಯ ಏಳು ಚಿತ್ರಗಳಿದ್ದು, ಈ ಏಳರಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು