ಭಾನುವಾರ, ಮೇ 5, 2024
ಕ್ರಿಸ್ ಗೇಲ್ ದಾಖಲೆ ಮುರಿದ RCB ನಾಯಕ ಫಾಫ್ ಡುಪ್ಲೆಸಿಸ್!-ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ-ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪುತ್ತೂರಿನಿಂದ ನೇರಮಾತು, ನೇರ ವಿಶ್ಲೇಷಣೆ--ಶಾಸಕ ಸಂಜೀವ ಮಠಂದೂರು ಅವರನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲು ಪುತ್ತೂರು ಕಾಂಗ್ರೆಸ್ ಈ ಬಾರಿ ಯಶಸ್ವಿಯಾಗಬಹುದೆ?

Twitter
Facebook
LinkedIn
WhatsApp
ಪುತ್ತೂರಿನಿಂದ ನೇರಮಾತು, ನೇರ ವಿಶ್ಲೇಷಣೆ–ಶಾಸಕ ಸಂಜೀವ ಮಠಂದೂರು ಅವರನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲು ಪುತ್ತೂರು ಕಾಂಗ್ರೆಸ್ ಈ ಬಾರಿ ಯಶಸ್ವಿಯಾಗಬಹುದೆ?

ಪುತ್ತೂರು: ಇವತ್ತಿನ ನೇರ ರಾಜಕೀಯ ವಿಶ್ಲೇಷಣೆ ಪುತ್ತೂರಿನಿಂದ. ಪುತ್ತೂರು ವಿಧಾನ ಸಭಾ ಕ್ಷೇತ್ರ ಬಹುತೇಕ ಬಿಜೆಪಿಗೆ ಮಣೆ ಹಾಕಿದ ಕ್ಷೇತ್ರ. ಕಳೆದ ಬಾರಿ ಬಿಜೆಪಿ ಭಾರಿ ಅಂತರದಿಂದ ಪುತ್ತೂರು ಕ್ಷೇತ್ರವನ್ನು ಗೆದ್ದಿತ್ತು.

ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಜನಪ್ರಿಯತೆ ಕಳೆದುಕೊಂಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಸಂಜೀವ ಮಠಂದೂರು ತೃಪ್ತಿದಾಯಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಜನರಿಗೆ ತೃಪ್ತಿ ಯಾಗುವ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದರಿಂದ ಅವರ ಜನಪ್ರಿಯತೆಗೆ ತೊಂದರೆ ಯಾಗಿಲ್ಲ. ಜನರಿಗೆ ಸುಲಭವಾಗಿ ಕೈಗೆ ಸಿಗುತ್ತಾರೆ ಹಾಗೂ ಜನರ ಕೆಲಸವನ್ನು ಆಸಕ್ತಿಯಿಂದ ಮಾಡುತ್ತಾರೆ ಎಂಬ ಉತ್ತಮ ಅಭಿಪ್ರಾಯ ಮತದಾರರಲ್ಲಿ ಇದೆ. ಆದರೆ ಕೆಲವೊಂದು ವಿವಾದಗಳು ಪುತ್ತೂರು ಬಿಜೆಪಿಯನ್ನು ಸುತ್ತುವರಿದು ಕುಳಿತುಕೊಂಡಿದೆ. ಆದರೂ ಶಾಸಕ ಸಂಜೀವ ಮಟಂದೂರು ನನ್ನ ಜನಪ್ರಿಯತೆಗೆ ತೊಂದರೆ ಉಂಟು ಮಾಡಿಲ್ಲ.

ಈ ನಡುವೆ ಕಾಂಗ್ರೆಸ್ಸಿನ ಬ್ಲಾಕ್ ಗಳು ಬಹಳಷ್ಟು ಚುರುಕಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಬಿಜೆಪಿಯನ್ನು ವಿವಿಧ ವಿಷಯಗಳಲ್ಲಿ ಕಟ್ಟಿಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ.

ಆದರೆ ಕಾಂಗ್ರೆಸ್ನ ಒಳಗೆ ಇರುವ ಬಣ ಜಗಳ ಕಾಂಗ್ರೆಸ್ಸಿನ ಸುಗಮ ಕಾರ್ಯಕ್ಕೆ ಅಡ್ಡಿ ಆಗುತ್ತಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ. ಶಕುಂತಳಾ ಶೆಟ್ಟಿ ಹಾಗೂ ಹೇಮನಾಥ ಶೆಟ್ಟಿ ಬಣಗಳ ನಡುವೆ ಸ್ಪರ್ಧೆ ನಡೆಯುತ್ತಿದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಈ ನಡುವೆ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ ಆದರೆ ಬಣ ರಾಜಕೀಯ ಅದಕ್ಕೆ ತೊಂದರೆಯನ್ನು ಉಂಟು ಮಾಡುತ್ತಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಪುತ್ತೂರಿನ ಕಾಂಗ್ರೆಸ್ಸಿಗರು ಈ ಬಾರಿಯಾದರೂ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ಏರಿಸಲು ನಿರ್ಧರಿಸಿದರು ಕೂಡ, ಬಣ ರಾಜಕೀಯ ಅವರನ್ನು ತುಸು ಹಿನ್ನಡೆಯತ್ನ ಸಾಗುವಂತೆ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಜನಪ್ರಿಯತೆ ಕಳೆದುಕೊಳ್ಳದ ಶಾಸಕ ಮಟಂದೂರು ಅವರನ್ನು ಚಕ್ರವ್ಯೂಹದೊಳಗೆ ಕಟ್ಟಿಹಾಕಲು ಕಾಂಗ್ರೆಸ್ ಯಶಸ್ವಿಯಾಗಬಹುದೆ? ಅಥವಾ ತಾನೇ ಚಕ್ರವ್ಯೂಹದೊಳಗೆ ಸಿಲುಕಬಹುದೆ? ಎಂಬುದು ಉತ್ತರ ಸಿಗದ ಪ್ರಶ್ನೆಗಳು. ಪಕ್ಷಗಳ ಕಾರ್ಯನಿರ್ವಹಣೆಯ ಮೇಲೆ ಉತ್ತರ ಅಡಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು