ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ವಿದ್ಯುತ್ ಬಿಲ್ ಬಾಕಿ ಪಾವತಿಗೆ ಇಂದು ಸೆ.30 ಕೊನೆಯ ದಿನ!

Twitter
Facebook
LinkedIn
WhatsApp
ವಿದ್ಯುತ್ ಬಿಲ್ ಬಾಕಿ ಪಾವತಿಗೆ ಇಂದು ಸೆ.30 ಕೊನೆಯ ದಿನ!

ಬಳ್ಳಾರಿ(ಸೆ.30): ವಿದ್ಯುತ್ ಬಾಕಿ ಬಿಲ್ ಪಾವತಿಗೆ ಇಂದೇ(ಸೆ.30) ಕೊನೆಯ ದಿನವಾಗಿದೆ. ಇಂದು ವಿದ್ಯುತ್ ಬಾಕಿ ಬಿಲ್ ಪಾವತಿ ಮಾಡದಿದ್ರೆ ಗೃಹ ಜ್ಯೋತಿ ಯೋಜನೆಯ ಲಾಭ ಸಿಗೋದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. 

ಇಂದು ಸಂಜೆಯೊಳಗೆ ಬಾಕಿ ವಿದ್ಯುತ್ ಪಾವತಿಸುವಂತೆ ಗ್ರಾಹಕರಿಗೆ ಜೆಸ್ಕಾಂ ಸೂಚನೆ ನೀಡಿದೆ. ಬಳ್ಳಾರಿ ನಗರದ ಕಸದ ವಾಹನಗಳ ಮೂಲಕ ಜೆಸ್ಕಾಂ ಅಧಿಕಾರಿಗಳು ಸಂದೇಶ ಸಾರುತ್ತಿದ್ದಾರೆ. 

ವಿದ್ಯುತ್ ಬಾಕಿ ಉಳಿಸಿದ್ರೆ ಉಚಿತ ವಿದ್ಯುತ್ ಯೋಜನೆ ರದ್ದಾಗಲಿದೆ. ಸೆ.30 ಒಳಗೆ ವಿದ್ಯುತ್ ಪಾವತಿಗೆ ಜೆಸ್ಕಾಂ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪಂಚಾಯ್ತಿ ಮೂಲಕ ವಿದ್ಯುತ್ ಬಾಕಿ ಬಿಲ್ ಪಾವತಿಗೆ ಮನವಿ ಜೆಸ್ಕಾಂ ಮಾಡಿದೆ. ವಿದ್ಯುತ್ ಬಿಲ್ ಬಾಕಿ ಉಳಿಸಿದ್ರೇ ಗೃಹ ಜ್ಯೋತಿ ಯೋಜನೆಯಿಂದ ಕೈ ಬಿಡ್ತಿವಿ ಎಂಬ ಸಂದೇಶ ಸಾರುತ್ತಿದೆ. 

ಭದ್ರಾವತಿ: ಬರಿದಾಗುತ್ತಿದೆ ಭದ್ರಾ ಡ್ಯಾಂ, ರೈತರಲ್ಲಿ ಆತಂಕ

ಭದ್ರಾವತಿ(ಸೆ.30): ಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಕೊರತೆ ಇದ್ದು, ಈ ನಡುವೆ ರೈತರಿಂದ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಮಳೆಯಾಗುವ ಲಕ್ಷಣಗಳು ದೂರವಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ತೀವ್ರವಾಗಿ ಎದುರಾಗಲಿದೆ. ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ದೀರ್ಘಾವಧಿ ತೆಂಗು, ಅಡಕೆ ಬೆಳೆಗಳು ನಾಶವಾಗುವ ಭೀತಿ ರೈತರಿಗೆ ಎದುರಾಗಿದೆ.

ಪ್ರಸ್ತುತ ಜಲಾಶಯದಲ್ಲಿ 160 ಅಡಿ ಮಾತ್ರ ನೀರಿದ್ದು, ನೀರಾವರಿ ಸಲಹಾ ಸಮಿತಿ ನಿರ್ಧಾರದಂತೆ ನೀರು ಹಂಚಿಕೆ ಮಾಡಲಾಗುತ್ತಿದೆ. ಯಾರು ಸಹ ನಿರೀಕ್ಷಿಸಲು ಆಗದಂತಹ ತೀವ್ರ ಬರಗಾಲ ಇದೀಗ ಎದುರಾಗಿದೆ. ಒಂದೆಡೆ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾದರೇ, ಮತ್ತೊಂದೆಡೆ ಪ್ರಸ್ತುತ ರೈತರು ಬೆಳೆದಿರುವ ಬೆಳೆಗಳಿಗೆ ನೀರು ಪೂರೈಸಬೇಕಾಗದ ಸ್ಥಿತಿ ಎದುರಾಗಿದೆ.

ಈ ಹಿಂದೆ ಸರ್ಕಾರ 100 ದಿನ ನೀರು ಪೂರೈಸುವುದಾಗಿ ಭರವಸೆ ನೀಡಿದೆ. ಈ ಹಿನ್ನೆಲೆ ರೈತರು ಭತ್ತದ ಬೆಳೆಗಳನ್ನು ಬೆಳೆದಿದ್ದರು. ಇದೀಗ ಬರಗಾಲ ಎದುರಾಗಿರುವ ಹಿನ್ನೆಲೆ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಈ ನಡುವೆ ದಾವಣಗೆರೆ ಭಾಗದ ರೈತರು ತಕ್ಷಣ ನೀರು ಬಿಡಬೇಕೆಂದು ಹೋರಾಟ ನಡೆಸಿದ ಪರಿಣಾಮ ಸಲಹಾ ಸಮಿತಿ 43 ದಿನ 2 ಹಂತದಲ್ಲಿ ನೀರು ಪೂರೈಸಲು ತೀರ್ಮಾನಿಸಿದೆ.

ಅದರಂತೆ ಬಲದಂಡೆ ನಾಲೆಗೆ ಮಂಗಳವಾರದಿಂದ ಅ.15ರ ವರೆಗೆ ಒಟ್ಟು 20 ದಿನ ಹಾಗೂ ಅ.26 ರಿಂದ ನ.17 ರವರೆಗೆ ಒಟ್ಟು 23 ದಿನ ನೀರು ಪೂರೈಸಲಾಗುತ್ತಿದೆ. ಉಳಿದಂತೆ ಎಡದಂಡೆ ನಾಲೆಗೆ ಈಗಾಗಲೇ ನೀರು ಹರಿಸಲಾಗುತ್ತಿದ್ದು, ಅ.1 ರವರೆಗೆ ಒಟ್ಟು 15 ದಿನಗಳು, ಅ.12ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನ.6 ರಿಂದ 17ರವರೆಗೆ ಒಟ್ಟು 12 ದಿನಗಳು ನೀರು ಪೂರೈಕೆಯಾಗಲಿದೆ.

ಭತ್ತ ನಾಶವಾಗುವ ಭೀತಿ:

ಈ ಬಾರಿ ಮುಂಗಾರು ಮಳೆ ಸಹ ಕೈಕೊಟ್ಟಿದ್ದು, ಈ ನಡುವೆ 100 ದಿನಗಳ ಬದಲು 43 ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಭತ್ತದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಬೆಳೆ ನಾಶವಾಗುವ ಭೀತಿ ಎದುರಾಗಿದೆ. ಬೆಳೆ ಕಾಳುಕಟ್ಟುವ ಕೊನೆ ಹಂತದಲ್ಲಿ ನೀರು ಲಭ್ಯವಾಗದೇ ನಾಶವಾಗಲಿವೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ಶತಮಾನದ ದೊಡ್ಡ ಬರಗಾಲ ಇದಾಗಿದ್ದು, ಇಂತಹ ಸಂದರ್ಭದಲ್ಲಿ ವಿವೇಚನೆ ಇಲ್ಲದವರು 100 ದಿನ ನೀರು ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಂಬಿದ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಈ ಹಿನ್ನೆಲೆ ನಷ್ಟವನ್ನು ಸರ್ಕಾರವೇ ತುಂಬಿಕೊಡಬೇಕು. ಬೇಸಿಗೆಯಲ್ಲಿ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹಂಚಿಕೆ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ನೀರನ್ನು ಮಿತವಾಗಿ ಬಳಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ರೈತ ಮುಖಂಡ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.  

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist