ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡ್ರೀಮ್‌ 11 ಆಡಿ 1.5 ಕೋಟಿ ರೂ. ಗೆದ್ದ ಪಿಎಸ್ಐ ಅಮಾನತು ; ತನಿಖೆಗೆ ಆದೇಶ!

Twitter
Facebook
LinkedIn
WhatsApp
ಡ್ರೀಮ್‌ 11 ಆಡಿ 1.5 ಕೋಟಿ ರೂ. ಗೆದ್ದ ಪಿಎಸ್ಐ ಅಮಾನತು ; ತನಿಖೆಗೆ ಆದೇಶ!

ಮುಂಬೈ: ಭಾರತದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಜ್ವರ (ICC World Cup 2023 ಜೋರಾಗಿದೆ. ಭಾರತ ತಂಡವೇ ವಿಶ್ವಕಪ್‌ ಗೆಲ್ಲಲಿ ಎಂದು 140 ಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಪ್ರತಿ ಪಂದ್ಯವನ್ನೂ ಕುತೂಹಲ, ನಿರೀಕ್ಷೆಯಿಂದ ವೀಕ್ಷಿಸುತ್ತಿದ್ದಾರೆ. ಇನ್ನು ಕೆಲವು ಆನ್‌ಲೈನ್‌ ಫ್ಯಾಂಟಸಿ ಗೇಮ್‌ಗಳಲ್ಲಿ ಹಣ ಹೂಡಿ, ಗೆದ್ದು ಖುಷಿ ಪಡುವವರು ಹಾಗೂ ಸೋತು ಹಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹಣ ಕಳೆದುಕೊಳ್ಳುವ ಆಪತ್ತಿದ್ದರೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಸೋಮನಾಥ್‌ ಜೆಂಡೆ (PSI Somnath Zende) ಅವರು ಡ್ರೀಮ್‌ 11 ಆಡಿ 1.5 ಕೋಟಿ ರೂ. ಗೆದ್ದಿದ್ದಾರೆ. ಇದೇ ಅವರಿಗೆ ಮುಳುವಾಗಿದ್ದು, ಅಮಾನತುಗೊಳಿಸಲಾಗಿದೆ.

 

ಹೌದು, ಡ್ರೀಮ್‌ 11 ಆಡಿ 1.5 ಕೋಟಿ ರೂ. ಗೆದ್ದ ಸೋಮನಾಥ್‌ ಜೆಂಡೆ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಇವರ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು, ಡಿಸಿಪಿ ಶ್ರೇಣಿಯ ಅಧಿಕಾರಿಯು ತನಿಖೆ ನಡೆಸಲಿದ್ದಾರೆ. ಸೋಮನಾಥ್‌ ಜೆಂಡೆ ವಿರುದ್ಧ ಆರೋಪ ಕೇಳಿಬರುತ್ತಲೇ, ಪಿಂಪ್ರಿ ಚಿಂಚ್‌ವಾಡ್‌ ಪೊಲೀಸ್‌ ಆಯುಕ್ತ ವಿನಯ್‌ ಕುಮಾರ್‌ ಚೌಬೆ ಅವರು ಪ್ರಾಥಮಿಕ ತನಿಖೆಗೆ ಆದೇಶಿಸಿದ್ದರು, ಪ್ರಾಥಮಿಕ ತನಿಖೆ ವರದಿ ಬಳಿಕ ಸೋಮನಾಥ್‌ ಜೆಂಡೆ ಅವರನ್ನು ಅಮಾನತುಗೊಳಿಸಲಾಗಿದೆ.

 

ಅಮಾನತು, ತನಿಖೆ ಏಕೆ?

ಭಾರತದಲ್ಲಿ ಆನ್‌ಲೈನ್‌ ಗೇಮಿಂಗ್‌ ಹಾಗೂ ಆನ್‌ಲೈನ್‌ ಬೆಟ್ಟಿಂಗ್‌ ಅಕ್ರಮ ಎಂಬ ಕಾನೂನು ಇಲ್ಲ. ಹಾಗಾಗಿ, ಡ್ರೀಮ್‌ ಇಲೆವೆನ್‌ ಸೇರಿ ಹಲವು ಆನ್‌ಲೈನ್‌ ಗೇಮಿಂಗ್‌ ಕಂಪನಿಗಳು ಇವೆ. ಆದರೆ, ಸರ್ಕಾರಿ ಅಧಿಕಾರಿಗಳಾದವರು, ಅದರಲ್ಲೂ ಪೊಲೀಸ್‌ ಇಲಾಖೆಯಲ್ಲಿರುವವರು ಆನ್‌ಲೈನ್‌ ಗೇಮಿಂಗ್‌ನಲ್ಲಿ ಪಾಲ್ಗೊಂಡು, ಹಣ ಮಾಡುವುದು ಎಷ್ಟು ಸರಿ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಇದು ಪೊಲೀಸ್‌ ಇಲಾಖೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಸೋಮನಾಥ್‌ ಜೆಂಡೆ ಅವರು ಕೆಲ ದಿನಗಳ ಹಿಂದೆ ನಡೆದ ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶ ಪಂದ್ಯದ ವೇಳೆ ಫ್ಯಾಂಟಸಿ ಗೇಮ್‌ ಆಡಿ 1.5 ಕೋಟಿ ರೂ. ಗೆದ್ದಿದ್ದಾರೆ. ಇವರು ಕಳೆದ ಎರಡು ಮೂರು ತಿಂಗಳಿಂದ ಆಡುತ್ತಿದ್ದು, ಇತ್ತೀಚೆಗೆ ಹಣ ಗೆದ್ದಿದ್ದಾರೆ. ಇಷ್ಟೇ ಆಗಿದ್ದರೆ ಏನೂ ತೊಂದರೆ ಆಗುತ್ತಿರಲಿಲ್ಲ. ಆದರೆ, ಅವರ ಕುರಿತು ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಪ್ರಕಟವಾಗಿದ್ದು, ಇದೇ ಅವರಿಗೆ ಮುಳುವಾಗಿದೆ. ಹಾಗೆಯೇ, ಭಾರತದಲ್ಲಿ ಆನ್‌ಲೈನ್‌ ಗೇಮಿಂಗ್‌ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ. ಹಾಗೆಯೇ, ಕ್ರಿಕೆಟಿಗರು, ನಟರು ಸೇರಿ ಹಲವರು ಆನ್‌ಲೈನ್‌ ಗೇಮಿಂಗ್‌ ಜಾಹೀರಾತುಗಳಲ್ಲಿ ಪಾಲ್ಗೊಳ್ಳುತ್ತಿರುವುದರ ಕುರಿತೂ ಜನರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ