ಶನಿವಾರ, ಡಿಸೆಂಬರ್ 21, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Dr. Mantar Gowda: ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್(LSM) ಗಾಗಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (GSI)ಗೆ ಹೆಚ್ಚಿನ ಬಜೆಟ್ ಮೀಸಲಿಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ

Twitter
Facebook
LinkedIn
WhatsApp
Dr. Mantar Gowda: ಮಡಿಕೇರಿ ಶಾಸಕ ಡಾ. ಮಂತರ್ ಗೌಡ

ಮಡಿಕೇರಿ: ಪಶ್ಚಿಮ ಘಟ್ಟವು ಸೇರಿದಂತೆ ದೇಶಾದ್ಯಂತ ಘಟ್ಟ ಪ್ರದೇಶಗಳ ಸಂಪೂರ್ಣದ ಅಧ್ಯಯನದ ಭೂಕುಸಿತ ಒಳಗಾಗುವ ಮ್ಯಾಪಿಂಗ್ (Landslide suspectibility Mapping) ಕುರಿತಂತೆ ಜಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಗೆ ಸರಕಾರ ಹೆಚ್ಚಿನ ಹಣವನ್ನು ಮೀಸಲು ಇಟ್ಟು, ಈ ಮ್ಯಾಪ್ಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ‌ (Dr. Mantar Gowda) ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್(LSM) ಗಾಗಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (GSI –Geological Survey of India) ಗೆ ಹೆಚ್ಚಿನ ಬಜೆಟ್ ಮೀಸಲಿಡುವಂತೆ ಕೇಂದ್ರ ಸರಕಾರಕ್ಕೆ (Dr. Mantar Gowda: ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್(LSM) ಗಾಗಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (GSI)ಗೆ ಹೆಚ್ಚಿನ ಬಜೆಟ್ ಮೀಸಲಿಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ(Dr. Mantar Gowda: ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್(LSM) ಗಾಗಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (GSI)ಗೆ ಹೆಚ್ಚಿನ ಬಜೆಟ್ ಮೀಸಲಿಡುವಂತೆ ಕೇಂದ್ರ ಸರಕಾರಕ್ಕೆ (central government ) ಮನವಿ ಮಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ 

ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್ (LSM) ಮೆಸ್ಕೋ (mesco) (1:10,000) ಸ್ಕೇಲ್ ಮೇಲೆ ನಡಿಯುತ್ತಿರುವ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಹಣಕಾಸಿನ ನೆರವಿನ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜ್ಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೊಡಗಿನ ಗಾಳಿಬೀಡು‌-ಆಂಚಾಲ್ ಪ್ರದೇಶದ ಮ್ಯಾಪಿಂಗ್ ಸೇರಿದಂತೆ ಒಟ್ಟು 37 ಯೋಜನೆಗಳನ್ನು 2023-2024 ಕೈಗೊಂಡಿದೆ.

ಆದರೆ ಈ ಯೋಜನೆಗಳು ವೇಗವಾಗಿ ಗುರಿ ಮುಟ್ಟಬೇಕಾದರೆ ಹಣಕಾಸಿನ ನೆರವು ಅಗತ್ಯವಿದೆ. ಇದರ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮ0ತರ್ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ವೈನಾಡಿನಲ್ಲಿ ಆದ ಭೂಕುಸಿತದ ಹಿನ್ನೆಲೆಯಲ್ಲಿ ಈಗ ಈ ಮ್ಯಾಪಿನ ಅಗತ್ಯತೆಯ ಮಹತ್ವ ಬಹಳಷ್ಟು ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಕೊಡಗಿನಲ್ಲಿ ವಾಡಿಕೆಗಿಂತ ಶೇ.17 ರಷ್ಟು ಅಧಿಕ ಮಳೆ

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ವಾಡಿಕೆಗಿಂತ ಶೇ. 17 ರಷ್ಟು ಹೆಚ್ಚು ಮಳೆಯಾಗಿದೆ. ಮಳೆಯಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು, ಜನ ಈಗಾಗಲೇ ಸಂಕಷ್ಟ ಅನುಭವಿಸುವಂತಾಗಿದೆ. 2018 ರಲ್ಲಿಯೂ ಮಳೆ ಧಾರಾಕಾರವಾಗಿ ಸುರಿದ ಹಿನ್ನೆಲೆಯಲ್ಲಿಆಗಸ್ಟ್‌ ತಿಂಗಳಿನಲ್ಲಿ ದುರಂತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.

ಕೊಡಗಿನಲ್ಲಿಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಈ ಬಾರಿ ಮಾನ್ಸೂನ್‌ನಲ್ಲಿ ಶೇ.106ರಷ್ಟು, ಅಂದರೆ ವಾಡಿಕೆಗಿಂತ ಶೇ.6 ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಮೇ ಮತ್ತು ಜೂನ್‌ ತಿಂಗಳಲ್ಲಿ ಹಾಗೆಯೇ ಕಂಡುಬಂದ ಹವಾಮಾನ ಈಗ ಬದಲಾಗಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಜಿಲ್ಲೆಯ ಜನವರಿಯಿಂದ ಇಂದಿನವರೆಗಿನ ವಾಡಿಕೆ ಮಳೆಗಿಂತ ಶೇ.17 ರಷ್ಟು ಹೆಚ್ಚು ಮಳೆ ಸುರಿದಿದೆ.

ಕಳೆದ ನಾಲ್ಕು ವರ್ಷಗಳ ಜನವರಿಯಿಂದ ಜುಲೈ 29 ರವರೆಗಿನ ಮಳೆ ವರದಿ ಗಮನಿಸಿದರೆ ಈ ವರ್ಷ ಅತಿ ಹೆಚ್ಚು ಮಳೆಯಾಗಿರುವುದು ತಿಳಿದು ಬರುತ್ತಿದೆ. 2018, 19 ಮತ್ತು 20 ರಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೆ 2021 ರಲ್ಲಿ ಶೇ.6 ರಷ್ಟು ಮಳೆ ಕೊರತೆ ಉಂಟಾಗಿತ್ತು. ಬಳಿಕ 22 ರಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿತ್ತು.

ಕೊಡಗು ಜಿಲ್ಲೆಯಲ್ಲಿಈವರೆಗೂ ನಡೆದ ಬಹುದೊಡ್ಡ ಅನಾಹುತಗಳು ಆಗಸ್ಟ್‌ ತಿಂಗಳಲ್ಲಿಯೇ ನಡೆದಿವೆ. 2018 ರಲ್ಲಿ ಜಿಲ್ಲೆಯ ಅಲ್ಲಲ್ಲಿಸಂಭವಿಸಿದ್ದ ಬೃಹತ್‌ ಗುಡ್ಡ ಕುಸಿತ ಮತ್ತು ಭೂಕುಸಿತಗಳು ಆಗಸ್ಟ್‌ 15, 16, 17ರಂದೇ ಆಗಿತ್ತು. ಹಿಂದಿನ ಎರಡು ವರ್ಷಗಳಲ್ಲಿಯೂ ಆಗಸ್ಟ್‌ ತಿಂಗಳಲ್ಲಿ ಭೂಕುಸಿತ, ಸಾವು ನೋವು ಸಂಭವಿಸಿತ್ತು. ನಂತರದ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದ ಕಾರಣ ಅಂತಹ ಅನಾಹುತಗಳೇನೂ ಆಗಿರಲಿಲ್ಲ.

2022 ರಲ್ಲಿ ಮಡಿಕೇರಿ ಸಮೀಪದ 2ನೇ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬಲ್ಲಿ ಜಲಸ್ಫೋಟದಿಂದ ಭೂಕುಸಿತ ಸಂಭವಿಸಿತ್ತು. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಈಗ ಮತ್ತೆ ಮೊದಲ ಎರಡು ತಿಂಗಳು ಮಳೆ ಅಬ್ಬರಿಸಿದೆ. ಮುಂದೆ ಆಗಸ್ಟ್‌ ತಿಂಗಳಲ್ಲಿಇದೇ ರೀತಿ ಮಳೆಯಾದರೆ, ಮತ್ತೆ ಭೂಕುಸಿತಗಳಂತಹ ಅನಾಹುತಗಳು ಸಂಭವಿಸಬಹುದಾದ ಸಾಧ್ಯತೆ ಇದೆ. ಹೀಗಾಗಿ ಬೆಟ್ಟ ಪ್ರದೇಶಗಳಲ್ಲಿವಿಪತ್ತು ನಿರ್ವಹಣಾ ಪ್ರಾಕಾರ ಗುರುತಿಸಿರುವ ಅಪಾಯಕಾರಿ ಪ್ರದೇಶಗಳಲ್ಲಿ ನೆಲೆಸಿರುವವರು ಎಚ್ಚರಿಕೆಯಿಂದಿರಬೇಕಾದ ಅಗತ್ಯತೆಯಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist