ಡಬಲ್ ಸೆಂಚುರಿ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಸರಿಗಟ್ಟಿದ ಸೌದ್ ಶಕೀಲ್

ಗಾಲೆಯ ಇಂಟರ್ನ್ಯಾಷನ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನಿ ಬ್ಯಾಟ್ಸ್ಮನ್ ಸೌದ್ ಶಕೀಲ್ ದ್ವಿಶತಕ ಬಾರಿಸಿ ಮಿಂಚಿದ್ದಾರೆ. 361 ಎಸೆತಗಳನ್ನು ಎದುರಿಸಿದ ಸೌದ್ 19 ಫೋರ್ಗಳೊಂದಿಗೆ ಅಜೇಯ 208 ರನ್ ಬಾರಿಸಿದರು.
ಇದರೊಂದಿಗೆ ಶ್ರೀಲಂಕಾದಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ಪಾಕಿಸ್ತಾನಿ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಈ ದ್ವಿಶತಕದೊಂದಿಗೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರ ವಿಶೇಷ ಸಾಧನೆಯನ್ನು ಸರಿಗಟ್ಟಿದರು.

ಅಂದರೆ ಶ್ರೀಲಂಕಾದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿರುವುದು ಕೇವಲ ಮೂವರು ಬ್ಯಾಟರ್ಗಳು ಮಾತ್ರ. ಇದೀಗ ಈ ಪಟ್ಟಿಗೆ ನಾಲ್ಕನೇ ಬ್ಯಾಟ್ಸ್ಮನ್ ಆಗಿ ಸೌದ್ ಶಕೀಲ್ ಎಂಟ್ರಿ ಕೊಟ್ಟಿದ್ದಾರೆ.
2008 ರಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್ನಲ್ಲಿ 208 ರನ್ ಬಾರಿಸಿ ಅಬ್ಬರಿಸಿದ್ದರು.

ಇನ್ನು 2010 ರಲ್ಲಿ ಸಚಿನ್ ತೆಂಡೂಲ್ಕರ್ ಕೊಲಂಬೊ ಟೆಸ್ಟ್ನಲ್ಲಿ 203 ರನ್ ಬಾರಿಸಿ ಮಿಂಚಿದ್ದರು. ಅಂದರೆ ಇದುವರೆಗೆ ಲಂಕಾ ವಿರುದ್ಧ ಅವರದ್ದೇ ನೆಲದಲ್ಲಿ ದ್ವಿಶತಕ ಬಾರಿಸಿದ ಏಷ್ಯನ್ ಬ್ಯಾಟರ್ಗಳು ಎಂಬ ದಾಖಲೆ ಸಚಿನ್-ಸೆಹ್ವಾಗ್ ಹೆಸರಿನಲ್ಲಿತ್ತು.
ಇದೀಗ ಆತಿಥೇಯ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ 3ನೇ ಏಷ್ಯನ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸೌದ್ ಶಕೀಲ್ ಪಾತ್ರರಾಗಿದ್ದಾರೆ.
ಹಾಗೆಯೇ ಶ್ರೀಲಂಕಾದಲ್ಲಿ ದ್ವಿಶತಕ ಬಾರಿಸಿದ ವಿಶ್ವದ 4ನೇ ಬ್ಯಾಟರ್ ಎಂಬ ದಾಖಲೆ ಕೂಡ ಸೌದ್ ಶಕೀಲ್ ಪಾಲಾಗಿದೆ. ಇದಕ್ಕೂ ಮುನ್ನ ವೀರೇಂದ್ರ ಸೆಹ್ವಾಗ್ (208), ಸಚಿನ್ ತೆಂಡೂಲ್ಕರ್ (203) ಹಾಗೂ ಜೋ ರೂಟ್ (228) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಸೌದ್ ಶಕೀಲ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

RCB ಏಕೆ ಐಪಿಎಲ್ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್
ಮುಂಬೈ: ಪ್ರತಿಷ್ಠಿತ ಐಪಿಎಲ್ (IPL) ಟೂರ್ನಿ 16 ಆವೃತ್ತಿ ಕಳೆದರೂ ಆರ್‌ಸಿಬಿ (RCB) ಒಂದು ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲಲು ಏಕೆ ಸಾಧ್ಯವಾಗಿಲ್ಲ? ಎನ್ನುವ ಪ್ರಶ್ನೆಗೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಯಜುವೇಂದ್ರ ಚಾಹಲ್ (Yuzvendra Chahal) ತಂಡ ಕೈಬಿಟ್ಟ ನಂತರ ಪ್ರಾಮಾಣಿಕ ಉತ್ತರ ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಚಾಹಲ್, ಆರ್‌ಸಿಬಿ ಬಹುತೇಕ ಸೀಸನ್‌ಗಳಲ್ಲಿ ಅತ್ಯುತ್ತಮ ತಂಡವಾಗಿತ್ತು. ಆದರೂ ಒಮ್ಮೆಯೂ ಟ್ರೋಫಿ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಕಳೆದ 8 ವರ್ಷಗಳಿಂದ ನಾನೂ ಆ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
2021ರಲ್ಲಿ ಆವೃತ್ತಿಯ ನಂತರ ಆರ್‌ಸಿಬಿ ತಂಡದಿಂದ ಚಾಹಲ್ ಅವರನ್ನ ಕೈಬಿಡಲಾಯಿತು. ಈ ಕುರಿತು ಸಂದರ್ಶನದಲ್ಲಿ ಮಾತನಾಡುವಾಗ 2016ರ ಆವೃತ್ತಿ ಐಪಿಎಲ್ ಟೂರ್ನಿಯನ್ನ ನೆನಪಿಸಿಕೊಂಡಿದ್ದಾರೆ. ಅಂದು ಆರ್‌ಸಿಬಿ ತಂಡ ಸನ್ ರೈಸರ್ಸ್ ಹೈದರಾಬಾದ್‌ನೊಂದಿಗೆ ಫೈನಲ್‌ನಲ್ಲಿ ಎದುರಾಗಿತ್ತು. ಗೆಲ್ಲುವ ಸನಿಹಕ್ಕೆ ಬಂದು 8 ರನ್‌ಗಳಿಂದ ಸೋತು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಆರ್‌ಸಿಬಿ ಕ್ರಿಸ್‌ಗೇಲ್, ಕೆ.ಎಲ್ ರಾಹುಲ್, ಎ.ಬಿ.ಡಿ ವಿಲಿಯರ್ಸ್, ಶೇನ್ ವಾಟ್ಸನ್‌ರಂತಹ ಬಲಿಷ್ಠ ಬ್ಯಾಟಿಂಗ್ ಪಡೆಯನ್ನ ಹೊಂದಿತ್ತು. ನಾನೂ ಕೂಡ ಆ ಸೀಸನ್‌ನಲ್ಲಿ ಮೊದಲ ಬಾರಿಗೆ ಪರ್ಪಲ್ ಕ್ಯಾಪ್ ಗಳಿಸಿದ್ದೆ. ಆದರೂ ಟ್ರೋಫಿ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಲೀಗ್‌ನಲ್ಲಿ, ಸೆಮಿಫೈನಲ್‌ನಲ್ಲಿ ಗೆದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆಡುವಾ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿದ್ದೆವು. ಅದು ನಮಗೆ ಭಾರೀ ನೋವನ್ನು ಉಂಟು ಮಾಡಿತ್ತು. ಆದ್ರೆ ಪ್ರತಿ ಬಾರಿ ಸೋತಾಗಲೂ ಮುಂದಿನ ವರ್ಷ ನಾವು ವಿಭಿನ್ನವಾಗಿ ಏನು ಮಾಡಬಹುದು ಎಂಬುದರ ಕುರಿತು ಮಾತುಕತೆ ನಡೆಯುತ್ತಿತ್ತು ಎಂದಿದ್ದಾರೆ.
ಈ ಹಿಂದಿನ ಸೀಸನ್ ವೊಂದರಲ್ಲಿ ಸತತ 6 ಪಂದ್ಯಗಳಲ್ಲಿ ಸೋತಿದ್ದೆವು. 7ನೇ ಪಂದ್ಯ ಗೆದ್ದಾಗ ಪ್ರಶಸ್ತಿಯನ್ನೇ ಗೆದ್ದಷ್ಟು ಸಂತಸದಿಂದ ಸಂಭ್ರಮಿಸಿದ್ದೆವು. ಆದ್ರೆ ಈ ಬಾರಿ ರಾಜಸ್ತಾನ ರಾಯಲ್ಸ್ ತಂಡ ಅತ್ಯುತ್ತಮವಾಗಿತ್ತು. ಆದ್ರೂ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ನಮ್ಮ ಕೈಯಲ್ಲಿ ಇಲ್ಲದ ವಿಷಯಗಳ ಬಗ್ಗೆ ನಾವು ಯೋಚಿಸುವುದೂ ಇಲ್ಲ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.