ಪ್ರಧಾನಿ ಮೋದಿಗೆ ಡಿ.ಕೆ ಶಿವಕುಮಾರ್ ಆತ್ಮೀಯ ಸ್ವಾಗತ!
ಬೆಂಗಳೂರು: ನಗರದ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟರ್ ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DK Shivakumar) ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಮಯದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ. ದಯಾನಂದ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್, ಭಾರತೀಯ ಜನತಾ ಪಾರ್ಟಿ ರಾಜ್ಯಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಹಾಗೂ ಶಾಸಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ನಾನು: ಹೆಚ್.ಡಿ ದೇವೇಗೌಡ
ಹಾಸನ: ಅಂದು ಒಕ್ಕಲಿಗ ಸಮುದಾಯಕ್ಕೆ (Vokkaliga Community) ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ (Muslims) ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಹೇಳಿಕೊಂಡಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡಗೌಡರು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಈಗ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಕೆಲಸವನ್ನು ನಾನೂ ನನ್ನ ಅಧಿಕಾರ ಅವಧಿಯಲ್ಲೇ ಮಾಡಿದ್ದೆ. ಅಂದು ಮುಸ್ಲಿಮರಿಗೆ ಮೀಸಲಾತಿ (Muslims Reservation) ಕೊಟ್ಟಿದ್ದು ದೇವೇಗೌಡ. ನಾನು ಅಧಿಕಾರದಲ್ಲಿದ್ದಾಗ ಒಕ್ಕಲಿಗರಿಗೆ ನೀಡಿದ್ದನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟೆ. ಇದನ್ನು ನಿರ್ಣಯ ಮಾಡಿದ್ದು ದೇವೇಗೌಡ ಎಂದು ಹೇಳಿಕೊಂಡಿದ್ದಾರೆ.
ಗುಂಡೂರಾವ್ ಸರ್ಕಾರದಲ್ಲಿ ಅಂಬೇಡ್ಕರ್ ಅವರು ನೀಡಿದ್ದ 18% ಮೀಸಲಾತಿಯಲ್ಲಿ ಎಸ್ಸಿಗೆ 15%, ಎಸ್ಟಿಗೆ 3% ನೀಡಿದ್ದರು. ಆದ್ರೆ ಆ ಕೋಟಾ ಭರ್ತಿ ಮಾಡಲಿಲ್ಲ. ನಂತರ ನಾನು 1983ರಲ್ಲಿ ಲೋಕೋಪಯೋಗಿ ಸಚಿವನಾದಾಗ ಅಂಬೇಡ್ಕರ್ ಕೊಟ್ಟಂತಹ ಕೋಟಾ ಭರ್ತಿಯಾಗಲು 15% ಮೀಸಲಾತಿಯನ್ನು 18%ಗೆ ಹೆಚ್ಚಿಸಿದೆ. 3% ಇದ್ದ ಎಸ್ಟಿ ಮೀಸಲಾತಿಯನ್ನು 5%ಗೆ ಹೆಚ್ಚಿಸಿದೆ. ಅಂಬೇಡ್ಕರ್ ಅವರ ಆಶಯದಂತೆ ಆ ಕೋಟಾ ಗುರಿಮುಟ್ಟುವವರೆಗೂ ಕೆಲಸ ಮಾಡಿದ್ದೇನೆ. ಅದು ಖಾಯಂ ಆಗಿರಬೇಕು ಅಂತ ಮಾಡಿದ್ದೆ. ಇದು ಎಲ್ಲಾ ಇಲಾಖೆಗಳ ಮೇಲೆ ಪರಿಣಾಮ ಬೀರುತ್ತೆ ಅಂತ ಎಲ್ಲರೂ ಹೇಳಿದ್ರು, ಆದರೂ ನಾನು ಮೀಸಲಾತಿ ಹೆಚ್ಚಿಸಿದ್ದೆ ಎಂದು ತಿಳಿಸಿದ್ದಾರೆ.