ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸತೀಶ್ ಜಾರಕಿಹೊಳಿ ಜೊತೆ ಗೌಪ್ಯ ಭೇಟಿ ಮಾಡಿ ದೆಹಲಿಗೆ ಹೊರಟ ಡಿಕೆ ಶಿವಕುಮಾರ್!

Twitter
Facebook
LinkedIn
WhatsApp
ಸತೀಶ್ ಜಾರಕಿಹೊಳಿ ಜೊತೆ ಗೌಪ್ಯ ಭೇಟಿ ಮಾಡಿ ದೆಹಲಿಗೆ ಹೊರಟ ಡಿಕೆ ಶಿವಕುಮಾರ್!

ಬೆಂಗಳೂರು, (ನವೆಂಬರ್ 07): ಕೆಲ ಕಾರಣಾಂತರಗಳಿಂದ ಮುನಿಸಿಕೊಂಡಿರುವ ಸಚಿವ ಸತೀಶ್  ಜಾರಕಿಹೊಳಿ(satish Jarkiholi) ಅವರನ್ನು ಖುದ್ದು ಡಿಕೆ ಶಿವಕುಮಾರ್ (DK Shivakumar)​ ಭೇಟಿ ಮಾಡಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ಹೌದು..ಇಂದು (ನವೆಂಬರ್ 07) ಬೆಳಗ್ಗೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ಜಾತಕಿಹೊಳಿಯವರ ಸರ್ಕಾರಿ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಅವರು ನೇರವಾಗಿ ದೆಹಲಿಗೆ ಹೋಗಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದರು. ಬೆಳಗಾವಿ ರಾಜಕೀಯದಲ್ಲಿ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿರುವ ಮಧ್ಯೆ ಡಿಕೆ ಶಿವಕುಮಾರ್ ಭೇಟಿ ಕುತೂಹಲ ಮೂಡಿಸಿದೆ.

ಮಹತ್ವ ಪಡೆದುಕೊಂಡ ಡಿಕೆಶಿ-ಸತೀಶ್ ಜಾರಕಿಹೊಳಿ ಭೇಟಿ

ಕಳೆದ ವಾರ ಪರಮೇಶ್ವರ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಮಾಡಿದ ಬೆನ್ನಲ್ಲೇ ಅಲರ್ಟ್ ಆಗಿರುವ ಡಿಕೆ ಶಿವಕುಮಾರ್, ಸಚಿವರಾದ ಹೆಚ್​ ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಒಳಗಿಂದೊಳಗೆ ಆಗುತ್ತಿರುವ ಗೊಂದಲಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದರು. ಅಲ್ಲದೇ ಮುಂದೆ 2028ರಲ್ಲಿ ನಾನು ಸಿಎಂ ಸ್ಥಾನ ಕೇಳುತ್ತೇನೆ ಎಂದು ಸತೀಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದರು. ಈ ಮೂಲಕ ಜಾರಕಿಹೋಳಿ ಸಹ ಮುಂದೆ ಸಿಎಂ ರೇಸ್​ನಲ್ಲಿದ್ದೇನೆ ಎನ್ನುವ ಸಂದೇಶ ರವಾನಿಸಿದ್ದರು. ಈ ಎಲ್ಲಾ ಬೆಳವಣಿಗೆ ಮಧ್ಯೆ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಭೇಟಿ ಮಹತ್ವ ಪಡೆದುಕೊಂಡಿದೆ.

ಡಿಕೆಶಿ ಭೇಟಿ ಬಗ್ಗೆ ಜಾರಕಿಹೊಳಿ ಹೇಳಿದ್ದೇನು?

ಇನ್ನು ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಖುದ್ದು ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ವಿಚಾರ ಬಗ್ಗೆ ಚರ್ಚಿಸಿದ್ದಾರೆ. ಸಂಘಟನೆ, ಎಂಪಿ ಚುನಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಮಾತುಕತೆ ಮಾಡಿದ್ದು, ಬೆಳಗಾವಿ ವಿಚಾರದಲ್ಲಿ ಮಾತಾಡುವಂತಹದ್ದು ಏನಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ಕೆಲ ಜಿಲ್ಲಾಧ್ಯಕ್ಷರ ಬದಲಾವಣೆ ಸೇರಿದಂತೆ ಇನ್ನಿತರ ವಿಚಾರದ ಬಗ್ಗೆ ಚರ್ಚಿಸಲು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಆದ್ರೆ, ದೆಹಲಿಗೆ ತೆರಳುವ ಮುನ್ನ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ನ ಅಸಲಿ ಸತ್ಯ ಬಯಲು, ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಹೇಗಿದೆ ನೋಡಿ

ಶಿವಮೊಗ್ಗ, ನ.07: ಶಿವಮೊಗ್ಗದ ರೈಲ್ವೆ ನಿಲ್ದಾಣದ (Shivamogga Railway Station) ಬಳಿ‌ ಪತ್ತೆಯಾದ ಎರಡು ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಬೃಹತ್ ಬಾಕ್ಸ್​ಗಳು ಪತ್ತೆಯಾಗುತ್ತಿದ್ದಂತೆ ತನಿಖೆಗೆ ಇಳಿದ ಪೊಲೀಸರು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬೀವುಲ್ಲಾ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸದ್ಯ ಪೊಲೀಸರ ವಿಚಾರಣೆಯಲ್ಲಿ ಬಾಕ್ಸ್ ಹಿಂದಿನ ಅಕ್ರಮದ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಬಾಕ್ಸ್​ನಲ್ಲಿ ಕಂತೆ, ಕಂತೆ ಹಣ ಇದೆ. ಆ ಬಾಕ್ಸ್ ನಿಮ್ಮದಾಗಲು 5 ಲಕ್ಷ ಕೊಡಿ ಬಳಿಕ ಬಾಕ್ಸ್ ತೆಗೆದುಕೊಂಡು ಹೋಗಿ ಎಂದು ಉದ್ಯಮಿಯೊಬ್ಬರಿಗೆ ಈ ಖದೀಮರು ಟೋಪಿ ಹಾಕಿದ್ದ ಬಗ್ಗೆ ತನಿಖೆಯಲ್ಲಿ ಬಯಲಾಗಿದೆ.

ಆರೋಪಿ ನಸ್ರುಲ್ಲಾ ಮತ್ತು ಜಬೀವುಲ್ಲಾ ಎಂಬ ಇಬ್ಬರು ಬೇಗ ಹಣ ಮಾಡಬೇಕು ಎಂಬ ದುರುದ್ದೇಶದಿಂದ ತಿಪಟೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವವರನ್ನು ಸಂಪರ್ಕಿಸಿ, ನಮಗೆ ಹಣ ತುಂಬಿದ ಬಾಕ್ಸ್​ಗಳು ಸಿಕ್ಕಿವೆ. ಹಣ ಬೇಕಾ ಎಂದು ಹಣದ ಆಸೆ ತೋರಿಸಿದ್ದರು. ಬಳಿಕ ಹಣ ಬೇಕಾದರೆ ಮೊದಲು ಎರಡೂವರೆ ಲಕ್ಷ ಹಣವನ್ನು ನಮ್ಮ ಖಾತೆಗೆ ಹಾಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ರಮೇಶ್ ಹಣ ಕಳಿಸಿದ್ದಾರೆ. ನಂತರ ಹಣ ಪಡೆದು ಒಂದು ವಾರ ಕಳೆದರೂ ಹಣದ ಬಾಕ್ಸ್​ಗಳನ್ನು ತೋರಿಸದ ಕಾರಣ ರಮೇಶ್​, ಆರೋಪಿಗಳಿಗೆ ಕರೆ ಮಾಡಿ ತಾನು ಕೊಟ್ಟ ಹಣವನ್ನು ವಾಪಾಸ್ ಕೊಡುವಂತೆ ಮನವಿ ಮಾಡಿದ್ದಾರೆ. ಆಗ ಆರೋಪಿಗಳು ಹಣ ಬೇಕಾದರೆ ಮತ್ತೆ ಎರಡೂವರೆ ಲಕ್ಷ ಹಣ ಹಾಕುವಂತೆ ತಿಳಿಸಿದ್ದಾರೆ. ಹೀಗೆ ಒಟ್ಟು ಐದು ಲಕ್ಷ ಹಣ ಪಡೆದಿದ್ದಾರೆ. ಬಳಿಕ ಹಣ ಬೇಕಾದರೆ ಶಿವಮೊಗ್ಗಕ್ಕೆ ಬಾ ಎಂದು ಕರೆಸಿಕೊಂಡು ರೈಲ್ವೆ ನಿಲ್ದಾಣದ ಬಳಿ ಹಣದ ಪೆಟ್ಟಿಗೆ ಇದೆ ಎಂದು ಬಾಕ್ಸ್ ತೋರಿಸಿದ್ದಾರೆ. ಬಾಕ್ಸ್ ನೋಡುತ್ತಿದ್ದಂತೆ ಅನುಮಾನಗೊಂಡ ರಮೇಶ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆರೋಪಿಗಳು ಬಾಕ್ಸ್​ನಲ್ಲಿ ಉಪ್ಪಿನ ಚೀಲ ತುಂಬಿ ಪ್ಯಾಕ್ ಮಾಡಿಟ್ಟಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ನವೆಂಬರ್ 05ರಂದು ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್​​ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ  ಆಗಿತ್ತು. ಜೊತೆಗೆ ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ​​ ಶುಗರ್ಸ್ ಎಂದು ಬರೆಯಲಾಗಿತ್ತು. ಬಾಕ್ಸ್​ಗಳ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಬಾಕ್ಸ್​​ ಬಳಿ ಯಾರೂ ತೆರಳದಂತೆ ಬ್ಯಾರಿಕೇಡ್​​ ಹಾಕಲಾಗಿತ್ತು. ಬಳಿಕ ತುಮಕೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಹಣ ಗಳಿಕೆಗಾಗಿ ಬಾಕ್ಸ್​ಗಳಲ್ಲಿ ಉಪ್ಪು ತುಂಬಿ ಹಣ ಇದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist