ಡಿಕೆಶಿ ಪುತ್ರಿ ಐಶ್ವರ್ಯಾ ಹೆಗ್ಡೆ ,ತಮನ್ನಾ ಜೊತೆ ಸಕ್ಕತ್ ಡ್ಯಾನ್ಸ್! ಇಲ್ಲಿದೆ ವಿಡಿಯೋ
ಈ ಬಾರಿಯ ಮಹಾಶಿವರಾತ್ರಿ ಉಪ ಮುಖ್ಯಮಂತ್ರಿ ಡಿಕೆಶಿ ಪುತ್ರಿ ಪಾಲಿಗೆ ಏಕತೆ, ಶಕ್ತಿ ಮತ್ತು ಜಾಗೃತಿಯ ರಾತ್ರಿಯಾಗಿತ್ತಂತೆ. ಈ ಮಹಾದಿನವನ್ನು ಕೊಯಂಬತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಕಳೆದಿರುವ ಐಶ್ವರ್ಯಾ, ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ. ಇಲ್ಲಿ ಆದಿಯೋಗಿ ಎದುರು ಆಚರಣೆಯಾದ ಮಹಾಶಿವರಾತ್ರಿಯು ‘ರೋಮಾಂಚಕ ನೃತ್ಯಗಳಿಂದ ಪ್ರಶಾಂತ ಗುಂಪಿನ ಧ್ಯಾನಗಳವರೆಗೆ, ಪ್ರತಿ ಕ್ಷಣವೂ ಲಕ್ಷಾಂತರ ಜನರನ್ನು ಎಚ್ಚರವಾಗಿಡಲು ಮತ್ತು ಪ್ರಪಂಚದಾದ್ಯಂತ ಸಂಪರ್ಕದಲ್ಲಿರಲು ಶಕ್ತಿಯನ್ನು ತುಂಬಿದೆ’ ಎಂದಿದ್ದಾರೆ. ಜೊತೆಗೆ, ‘ಹಿನ್ನೆಲೆ, ಲಿಂಗ ಅಥವಾ ರಾಷ್ಟ್ರೀಯತೆಯ ಹೊರತಾಗಿಯೂ, ನಾವು ಆಚರಿಸಲು ಒಟ್ಟುಗೂಡಿದ್ದೇವೆ. @isha.foundation ನಲ್ಲಿ ಒಬ್ಬರಿಗೊಬ್ಬರು ಸಬಲಗೊಳಿಸುವ ಮೂಲತತ್ವವನ್ನು ಎತ್ತಿ ಹಿಡಿಯಲು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಅಸಂಖ್ಯಾತ ಸ್ವಯಂಸೇವಕರ ಸಮರ್ಪಣೆಗೆ ಸಾಕ್ಷಿಯಾಗುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ’ ಎಂದಿದ್ದಾರೆ.
ಶಿಕ್ಷಣ ಸಂಸ್ಥೆಯ ಒಡತಿ ಹಾಗೂ ಮೋಟಿವೇಶನಲ್ ಸ್ಪೀಕರ್ ಆಗಿರುವ ಐಶ್ವರ್ಯ, ನಮ್ಮ ಪ್ರೀತಿಯ ಸದ್ಗುರು ಅವರ ಆಶೀರ್ವಾದದಿಂದ ರಾತ್ರಿಯ ಆಕಾಶ ಬೆಳಗಿತು ಎಂದು ಇಶಾದಲ್ಲಿ ಕಳೆದ ಕೆಲ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಇದರಲ್ಲಿ ಐಶ್ವರ್ಯಾ ಸದ್ಗುರುವಿನೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು. ಆದರೆ, ಅದೆಲ್ಲಕ್ಕಿಂತ ಹೆಚ್ಚು ಸೆಳೆಯುವುದು ಜನಪ್ರಿಯ ನಟಿ ತಮನ್ನಾ ಭಾಟಿಯಾ ಜೊತೆ ಐಶ್ವರ್ಯಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ. ಹೌದು, ನಟಿ ಹಾಗೂ ಐಶ್ವರ್ಯಾ ಇಬ್ಬರೂ ಕೆಂಪು ಬಣ್ಣದ ಬಟ್ಟೆ ಧರಿಸಿ, ‘ಕೋಯಿ ಕಹೇ ಕೆಹತಾ ರಹೇ’ ಹಾಡನ್ನು ಜೋರಾಗಿ ಹೇಳುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ಪೂರ್ತಿ ಜೋಶ್‌ನಲ್ಲಿರುವ ಇಬ್ಬರೂ ಲಲನಾಮಣಿಯರನ್ನು ನೋಡಿದ ಫ್ಯಾನ್ಸ್, ಮಿಲ್ಕಿ ಬ್ಯೂಟಿಗೇ ಕಾಂಪಿಟೇಶನ್ ಕೊಡುವಷ್ಟು ಬ್ಯೂಟಿ ನಮ್ ಐಶ್ವರ್ಯಾ ಎನ್ನುತ್ತಿದ್ದಾರೆ. ಜೊತೆಗೆ, ಡ್ಯಾನ್ಸ್ ಮೂವ್ಸ್‌ನಲ್ಲೂ ಒಂದು ಕೈ ಮೇಲೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.