ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಶ್ ಮತ್ತು ಐಶ್ವರ್ಯ ರಜನೀಕಾಂತ್.!

ಐಶ್ವರ್ಯಾ ರಜನಿಕಾಂತ್ ಮತ್ತು ನಟ ಧನುಷ್ ಇದೀಗ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಮೂಲಕ 2022ರಲ್ಲಿ ದೂರವಾಗಿದ್ದ ಈ ಜೋಡಿ ಮತ್ತೆ ಒಂದಾಗಬಹುದು ಎಂಬ ಅಭಿಮಾನಿಗಳ ನಿರೀಕ್ಷೆ ಈ ಮೂಲಕ ಹುಸಿಯಾಗಿದೆ. 2022ರಲ್ಲಿ ಧನುಷ್ ಮತ್ತು ಐಶ್ವರ್ಯ ತಾವಿಬ್ಬರು ಪ್ರತ್ಯೇಕಗೊಳ್ಳುವುದಾಗಿ ಘೋಷಿಸಿದ್ದರು. ಇದೀಗ ಇವರಿಬ್ಬರು ಕಾನೂನು ಪ್ರಕಾರವಾಗಿ ಡಿವೋರ್ಸ್ ಪ್ರಕ್ರಿಯೆ ಆರಂಭಿಸಿದ್ದಾರೆ.
ಇಂಡಿಯಾ ಟುಡೇ ವರದಿ ಪ್ರಕಾರ ಇವರಿಬ್ಬರು ಸೆಕ್ಷನ್ 13 ಬಿಯಡಿ ಪರಸ್ಪರ ಸಮ್ಮತದಿಂದ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರು ಮತ್ತೆ ಒಂದಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಸುದ್ದಿ ಸಹಜವಾಗಿ ಆಘಾತ ತಂದಿದೆ.
ಸುಮಾರು 18 ವರ್ಷಗಳ ಕಾಲ ಜತೆಯಲ್ಲಿದ್ದ ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಜನವರಿ 2022ರಲ್ಲಿ ದೂರವಾಗುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ರೀತಿ ಬೇರೆಯಾಗಿದ್ದರೂ ತಮ್ಮ ಪುತ್ರ ಯಾತ್ರಾನ ಶಾಲಾ ಕಾರ್ಯಕ್ರಮಗಳಲ್ಲಿ ಜತೆಯಾಗಿ ಭಾಗವಹಿಸುತ್ತಿದ್ದರು. ಇವರಿಬ್ಬರು ತಮ್ಮ ಹಾಳಾಗಿರುವ ಸಂಬಂಧವನ್ನು ಸರಿಪಡಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ಹೇಳಿದ್ದವು. ಆದರೆ, ಇವರಿಬ್ಬರು ಒಂದಾಗುವ ಯಾವುದೇ ಸೂಚನೆಗಳು ಇಲ್ಲ ಎಂದು ಇತ್ತೀಚಿನ ವರದಿಗಳು ಸ್ಪಷ್ಟಪಡಿಸಿದ್ದವು. ಇದೀಗ ಇವರಿಬ್ಬರು ಡಿವೋರ್ಸ್ ಪ್ರಕ್ರಿಯೆ ಆರಂಭಿಸಿದ್ದು, ದೂರವಾಗುವ ನಿರ್ಧಾರಕ್ಕೆ ಅಚಲರಾಗಿದ್ದಾರೆ.
🙏🙏🙏🙏🙏 pic.twitter.com/hAPu2aPp4n
— Dhanush (@dhanushkraja) January 17, 2022
ತಮಿಳು ಸಿನಿಮಾರಂಗದಲ್ಲಿ ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ಜನಪ್ರಿಯ ಸಿನಿದಂಪತಿ. ಧನುಷ್ ಜನಪ್ರಿಯ ನಟನಾಗಿದ್ದರೆ, ಐಶ್ವರ್ಯಾ ರೈ ಅವರು ಸಿನಿಮಾ ನಿರ್ದೇಶಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಲಾಲ್ ಸಲಾಮ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು.
2022ರ ವರ್ಷದ ಮೊದಲ ತಿಂಗಳಲ್ಲಿಯೇ ಇವರಿಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪ್ರತ್ಯೇಕಗೊಳ್ಳುವ ತಮ್ಮ ನಿರ್ಧಾರದ ಕುರಿತು ಅಧಿಕೃತವಾಗಿ ಘೋಷಿಸಿದ್ದರು. “ಐಶ್ವರ್ಯಾ ಮತ್ತು ಧನುಷ್ ತಮ್ಮ ಭಿನ್ನತೆಗಳನ್ನು ಮರೆತು ಒಂದಾಗುತ್ತಿಲ್ಲ. ಇವರಿಬ್ಬರು ಪ್ರತ್ಯೇಕಗೊಂಡಿದ್ದಾರೆ ಮತ್ತು ಬೇರೆಬೇರೆ ಹಾದಿಗಳಲ್ಲಿ ಸಾಗುತ್ತಿದ್ದಾರೆ. ತಮ್ಮ ಜೀವನದ ಈ ನಿರ್ಧಾರದ ಕುರಿತು ಇಬ್ಬರೂ ಶಾಂತವಾಗಿದ್ದಾರೆ ಮತ್ತು ತಾವಿಬ್ಬರು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ” ಎಂದು ಹಿಂದೂಸ್ತಾನ್ ಟೈಮ್ಸ್ ಈ ಹಿಂದೆಯೇ ವರದಿ ಮಾಡಿತ್ತು.