ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಿಷ್ಕರುಸವಂತೆ ಒತ್ತಾಯ ; ಬಿಸಿಸಿಐ ವಿರುದ್ಧವೂ ಆಕ್ರೋಶ!
India vs Pakistan ODI World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿ ಬಂದಿದೆ. BoycottIndoPakMatch ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬ್ಲಾಕ್‌ಬಸ್ಟರ್ ವಿಶ್ವಕಪ್ (ICC ODI World Cup 2023) ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಉಭಯ ತಂಡಗಳು ಮಹತ್ವದ ಪಂದ್ಯಕ್ಕಾಗಿ ಈಗಾಗಲೇ ಅಹಮದಾಬಾದ್ ತಲುಪಿವೆ. ಈ ನಡುವೆ, ಇಂಡೋ ಪಾಕ್ ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯ ಹೆಚ್ಚುತ್ತಿದೆ.
ಪಾಕಿಸ್ತಾನ ದೇಶವು ನಿರಂತರವಾಗಿ ಭಯೋತ್ಪಾದನೆಯಲ್ಲಿ ತೊಡಗಿರುವ ಕಾರಣ, ಅಭಿಮಾನಿಗಳು ಆ ದೇಶದ ಪಂದ್ಯವನ್ನು ವೀಕ್ಷಿಸಬಾರದು ಎಂಬ ಒತ್ತಾಯ ನೆಟ್ಟಿಗರದ್ದು. ಅಲ್ಲದೆ ಪಾಕಿಸ್ತಾನದ ಉಗ್ರ ದಾಳಿಯಿಂದಾಗಿ ಭಾರತದ ಮುಗ್ದ ಜನರು ಬಲಿಯಾಗಿದ್ದಾರೆ. ಆದರೂ ಪಾಕಿಸ್ತಾನ ತಂಡವನ್ನು ವಿಶೇಷ ಅತಿಥಿಯಂತೆ ಆದರಿಸಿದ್ದು ಸರಿಯಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ (ಟ್ವಿಟರ್) ಶೇಮ್ ಆನ್ ಬಿಸಿಸಿಐ (ShameOnBCCI), ಬಾಯ್ಕಾಟ್ ಇಂಡೋ ಪಾಕ್ ಮ್ಯಾಚ್ (BoycottIndoPakMatch) ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
How Can Do it this BCCI😡
— Deepak Jangid (@itsDeepakJangid) October 13, 2023
What BCCI and Jay Shah have done in the honor of Pakistan team will not be tolerated at all.
Our soldiers are fighting bravely against Pakistan supported terrorists on the border.
Maximum Likes For Indian Army🇮🇳#BoycottIndoPakMatch #BoycottBCCI pic.twitter.com/7gfBis4Ro8
ಕ್ರೀಡೆಯೇ ಬೇರೆ, ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸ್ನೇಹ ಸಂಬಂಧವೇ ಬೇರೆ. ವಿರೋಧ, ಶತ್ರುತ್ವ, ಕೋಪ ದ್ವೇಶಗಳ ನಡುವೆ ಎರಡು ದೇಶಗಳನ್ನು ಸ್ನೇಹಪರವಾಗಿ ಬೆಸೆಯಬಲ್ಲ ಉನ್ನತ ವೇದಿಕೆಯಿದ್ದರೆ ಅದು ಕ್ರೀಡೆ ಮಾತ್ರ. ಹೀಗಾಗಿ ಕ್ರೀಡೆಯೊಂದಿಗೆ ರಾಜಕೀಯ ವೈರತ್ವವನ್ನು ಪೋಣಿಸುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಬಹಿಷ್ಕಾರದ ಕೂಗಿಗೆ ಪರ ವಿರೋಧಗಳು ವ್ಯಕ್ತವಾಗುತ್ತಿವೆ.
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಸೆಪ್ಟೆಂಬರ್ 13 ರಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ, ಭಾರತೀಯ ಸೇನೆಯ ಕರ್ನಲ್, ಮೇಜರ್ ಮತ್ತು ಪೊಲೀಸ್ ಉಪ ಅಧೀಕ್ಷಕರರು ಹುತಾತ್ಮರಾಗಿದ್ದರು. ಇಂಥ ಹಲವಾರು ಘಟನೆಗಳು ಗಡಿಭಾಗದಲ್ಲಿ ನಡೆಯುತ್ತಿವೆ. ಹೀಗಿದ್ದು ಅದೇ ಪಾಕಿಸ್ತಾನ ದೇಶ ಕ್ರಿಕೆಟಿಗರನ್ನು ಗಣ್ಯರಂತೆ ಪರಿಗಣಿಸುತ್ತಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
What BCCI and Jay Shah have done in the honor of Pakistan team will not be tolerated at all.
— GURMEET 𝕏 (@GURmeetG9) October 13, 2023
Our soldiers are fighting bravely against Pakistan supported terrorists on the border.
#BoycottIndoPakMatch#BoycottIndoPakMatchpic.twitter.com/VvQY8HVP1w
ಅದ್ಧೂರಿ ಸ್ವಾಗತಕ್ಕೆ ವಿರೋಧ
ಇತ್ತೀಚೆಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ಏಳು ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ, ಹೈದರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಆ ಬಳಿಕ ಭಾರತ ವಿರುದ್ಧದ ಪಂದ್ಯಕ್ಕಾಗಿ ಅಹಮದಾಬಾದ್‌ಗೆ ತೆರಳಿದ ತಂಡವನ್ನು ರಾಜಾತಿಥ್ಯದೊಂದಿಗೆ ಬರಮಾಡಿಕೊಳ್ಳಲಾಯ್ತು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನ ದೇಶವು ಭಯೋತ್ಪಾದನೆಯನ್ನು ಪೋಷಿಸುತ್ತಿದ್ದು, ಉಗ್ರ ಚಟುವಟಿಕೆಯ ನಿದರ್ಶನಗಳು ಮುಂದುವರೆದಿವೆ. ಈ ನಡುವೆಯೂ ಪಾಕಿಸ್ತಾನಿ ಕ್ರಿಕೆಟಿಗರನ್ನು ಈ ರೀತಿ ಆದರಿಸುವ ಅಗತ್ಯವೇನಿದೆ ಎಂಬುದು ನೆಟ್ಟಿಗರ ಪ್ರಶ್ನೆ. ಪಾಕಿಸ್ತಾನದಿಂದಾಗಿ ಭಾರತದ ಸೈನಿಕರು, ಭದ್ರತಾ ಪಡೆಗಳು ಹಾಗೂ ಪೊಲೀಸರು ಪ್ರಾಣ ಹುತಾತ್ಮರಾಗುತ್ತಿದ್ದಾರೆ. ಹೀಗಿದ್ದರೂ ಇಂಥಾ ಆತಿಥ್ಯ ಬೇಕಾ ಎಂಬ ಚರ್ಚೆ ನಡೆದಿವೆ.
How Can Do it this #BCCI
— Rakshitanagar 🇮🇳 (@rakshitanagar28) October 13, 2023
What #BCCI and #JayShah have done in the honor of Pakistan team will not be tolerated at all. Our soldiers are fighting bravely against Pakistan supported terrorists on the border.
Maximum Likes For Indian Army🇮🇳#BoycottIndoPakMatch #BoycottBCCI… pic.twitter.com/2VNJeROrzR
“ಪಾಕಿಸ್ತಾನ ತಂಡವನ್ನು ಗೌರವಯುತವಾಗಿ ನೋಡಿಕೊಂಡ ಬಿಸಿಸಿಐ ಮತ್ತು ಜಯ್ ಶಾ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ. ಅತ್ತ ಗಡಿಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ವಿರುದ್ಧ ನಮ್ಮ ಸೈನಿಕರು ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ. ಇಲ್ಲಿ ನೋಡಿದರೆ ಅದೇ ಪಾಕಿಸ್ತಾನಕ್ಕೆ ರಾಜಮರ್ಯಾದೆ ನೀಡಲಾಗುತ್ತಿದೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ #BoycottIndoPakMatch #BoycottIndoPakMatch” ಎಕ್ಸ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
Let's use #BoycottIndoPakMatch and make a difference for once. BCCI is too blinded by money and government too is incompetent (like it or not). In the end, it's the common man as always who is responsible for defending his and country's reputation. #ShameOnBCCI pic.twitter.com/NhQyAuT5wk
— Memes Of Bharat 🇮🇳 (@MemesOfBharat) October 13, 2023