ಸಾಲ ಬಾಧೆ : ನೀರಿನ ಟ್ಯಾಂಕರ್'ಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು: ಸಾಲ ಬಾಧೆ ತಾಳಲಾರದೆ ನೀರಿನ ಟ್ಯಾಂಕರ್’ಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಮೃತ ವ್ಯಕ್ತಿಯನ್ನು ನವಲ್ ಪಂಡಿತ್ (25) ಎಂದು ಕುರ್ತಿಸಲಾಗಿದೆ. ಈತ ಹಾಲು ಒಕ್ಕೂಟದ ಉತ್ಪಾದನಾ ವಿಭಾಗದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬಿಹಾರ ಮೂಲದವರಾದ ಇವರು, ನಗರದಲ್ಲಿ ವೆಂಕಟೇಶ್ವರ ಲೇಔಟ್‌ನಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ಸ್ನೇಹಿತ ಕಿಶೋರಿಲಾಲ್ ಪಂಡಿತ್ ಜೊತೆಗೆ ವಾಸವಿದ್ದರು. ಬಿಹಾರದಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದೆ ಖಿನ್ನತೆಗೊಳಗಾಗಿದ್ದರು. ಎರಡು ತಿಂಗಳ ಹಿಂದೆ ಕೆಲಸವನ್ನು ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಸಾಲ ಮರುಪಾವತಿ ಮಾಡಲಾಗದ ಕಾರಣ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿಕೊಂಡಿದ್ದ. ವಿಚಾರಣೆ ಪೂರ್ಣಗೊಂಡ ಬಳಿಕ ನವಲ್ ಅವರನ್ನು ಅವರ ಸ್ನೇಹಿತ ಕಿಶೋರಿ ಲಾಲ್ ಮತ್ತು ಇಬ್ಬರು ಸ್ನೇಹಿತರೊಂದಿಗೆ ಕಳುಹಿಸಿದ್ದರು. ಶನಿವಾರ ನೀರಿನ ಟ್ಯಾಂಕರ್’ಗೆ ಹಾರಿ ಮೃತಪಟ್ಟಿದ್ದಾರೆ. ಈ ಸಂಬಂಧ ಎಸ್ ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.