30ಕ್ಕೂ ಅಧಿಕ ಮಂಗಗಳ ಮಾರಣಹೋಮ..!
ಸುಳ್ಯ: ಬಳ್ಪ ಕಮಿಲ ಕ್ರಾಸ್ ಸಮೀಪದ ಕಾಡಿನ ರಸ್ತೆ ಬದಿಯಲ್ಲಿ 30ಕ್ಕೂ ಅಧಿಕ ಮಂಗಗಳ ಮೃತದೇಹವು ಎಸೆದಿರುವುದು ಪತ್ತೆಯಾಗಿದೆ.
ಮಂಗಗಳ ಮಾರಣಹೋಮವು ಜನರಲ್ಲಿ ಅಚ್ಚರಿ ಮೂಡಿಸಿದೆ. ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಅರಣ್ಯ ಇಲಾಖೆಯವರು ಕನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಗುರುವಾರ ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಶವ ಇರುವುದು ಬೆಳಕಿಗೆ ಬಂದಿದೆ. ಆ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಮಂಗಗಳನ್ನು ಕೊಂದು ಕಾಡೊಳಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಇದೀಗ ಮಂಗಗ ಶವವನ್ನು ಯೇನೆಕಲ್ಲು ನರ್ಸರಿಗೆ ಸಾಗಾಟ ಮಾಡಿದ್ದು, ಶುಕ್ರವಾರ ಶವಗಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕವೇ ಮಂಗಗಳ ಸಾವಿಗೆ ಕಾರಣ ತಿಳಿದುಬರಲಿದೆ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ. ಮಂಗಗಳ ಮಾರಣಹೋಮದ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್ಯಾಂತರ ರೂ. ಮೌಲ್ಯದ ಅಕ್ಕಿ ನಾಪತ್ತೆ – 4ತಿಂಗಳಾದ್ರೂ ಆರೋಪಿಗಳ ಪತ್ತೆಯಾಗಿಲ್ಲ..!
ಬಂಟ್ವಾಳ: ಬಡ ಜನರಿಗೆ ಅನ್ನಭಾಗ್ಯ ಯೋಜನೆಯಡಿ ನೀಡಬೇಕಾಗಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ಕಿ ಕಳ್ಳತನವಾಗಿತ್ತು. ಅಧಿಕಾರಿಗಳೇ ಈ ಅಕ್ಕಿ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಆದ್ರೆ ಕಳ್ಳತನ ಆಗಿ ನಾಲ್ಕು ತಿಂಗಳಾದ್ರೂ ಇನ್ನೂ ಆರೋಪಿಗಳ ಬಂಧನ ಆಗಿಲ್ಲ.
ಕಳೆದ ಆ. 17 ರಂದು ಬಂಟ್ವಾಳದ ಪೊನ್ನೋಡಿಯಲ್ಲಿರುವ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಬರೋಬ್ಬರಿ 1.32 ಕೋಟಿ ಮೌಲ್ಯದ 3,850 ಕಿಂಟ್ವಾಲ್ ಅಕ್ಕಿ ಕಳ್ಳತನ ಆಗಿತ್ತು. ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಯೋರ್ವರ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸರ್ಕಾರ ಜಿಲ್ಲಾ ಆಹಾರ ನಿರೀಕ್ಷಕರೋರ್ವರನ್ನು ಅಮಾನತ್ತು ಮಾಡಿತ್ತು. ಆಹಾರ ಇಲಾಖೆಯ ಅಧೀನದಲ್ಲೇ ಇರೋ ಈ ಘಟಕದಿಂದ ಇಷ್ಟೊಂದು ದೊಡ್ಡ ಪ್ರಮಾಣದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ಕಿ ಕಳ್ಳತನ ಮಾಡಲು ಅಧಿಕಾರಿಗಳೇ ಶಾಮೀಲಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೂ ಕಳ್ಳತನ ನಡೆದು ನಾಲ್ಕು ತಿಂಗಳು ಕಳೆದರೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನೂ ಬಂಧಿಸಿಲ್ಲ.
ಹೀಗಾಗಿ ಈ ಪ್ರಕಣದಲ್ಲಿ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಕ್ಕಿ ಕಳ್ಳತನದ ಜಾಲವನ್ನು ಬೇಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹೋರಾಟಗಾರರೋರ್ವರು ಆಗ್ರಹಿಸಿದ್ದಾರೆ.