ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Darshan: ಗಿರಿಜಾ ಲೋಕೇಶ್ ಏನಂದರು? ದರ್ಶನ್ ಬಗ್ಗೆ ಮಾತನಾಡುತ್ತಲೇ ಕಣ್ಣೀರಿಟ್ಟಿದ್ದೇಕೆ?

Twitter
Facebook
LinkedIn
WhatsApp
Darshan, girija lokesh

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ನಟ ದರ್ಶನ್  (Darshan) ಬಗ್ಗೆ ಮಾತನಾಡುತ್ತಾ ಕಣ್ಣೀರು ಸುರಿಸಿದ್ದಾರೆ. ಸದ್ಯ ಕೊಲೆ ಕೇಸ್ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಟ ದರ್ಶನ್ (Darshan) ಬಗ್ಗೆ ಹಿರಿಯನಟಿ ಗಿರಿಜಾ ಲೋಕೇಶ್ ದುಃಖ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಈಗಿನ ಪರಿಸ್ಥಿತಿ ಹಾಗು ಮೊದಲಿನ ಸ್ಥಿತಿ ನೆನದು ಹಿರಿಯ ನಟಿ ಮಾತನಾಡಿದ್ದಾರೆ. 

ನಾನೇನು ಹೇಳಲಿ. ದರ್ಶನ್ ಈಗ ಕಷ್ಟಪಡ್ತಿರೋದು ನೋಡಿದ್ದರೆ ತುಂಬಾನೇ ನೋವಾಗುತ್ತದೆ. ಆದಷ್ಟು ಬೇಗ ಇದರಿಂದ ಹೊರಬರಲಿ ಎಂದು ಆಶಿಸುತ್ತೇನೆ. ದೇವರಲ್ಲಿ ಬೇಡಿಕೊಳ್ಳುತ್ತೇನೆ ಈ ಬಗ್ಗೆ ‘ಅವನು ಕಷ್ಟ ಪಟ್ಟಿರೋದು ನೋಡಿದ್ರೆ ತುಂಬಾ ಸಂಕಟ ಆಗುತ್ತೆ. ನಟ ದರ್ಶನ್ ಈ ಪರಿಸ್ಥಿತಿಯಿಂದ ಬೇಗ ಆಚೆ ಬರಲಿ ಅಂತ ಹಾರೈಸ್ತಿನಿ’ ಎಂದಿದ್ದಾರೆ. ಜೊತೆಗೆ, ‘ಕಾನೂನಿನ ಚೌಕಟ್ಟಿನಲ್ಲಿ ಇದೇ ನಾವು ಎನು ಮಾತನಾಡೋದಕ್ಕೆ ಆಗಲ್ಲ. ತಪ್ಪು ಮಾಡಿಯೂ ಬಾ ಅಂತ ಹೇಳೋದಿಲ್ಲ, ತಪ್ಪು ಮಾಡಿದಾನೋ ಇಲ್ವೋ ಗೊತ್ತಿಲ್ಲ. ಯಾರಿಗೂ ನಾವು ತಪ್ಪು ಮಾಡಿಬಿಡಿ ಬಂದು ಬಿಡಿ ಅಂತ ಹೇಳೋಕೆ ಆಗಲ್ಲ.  

ನಾನು ಕಂಡಂತೆ ಆ ಮಗು ದರ್ಶನ್ ಆ ತರ ಇಲ್ಲ . ಮುಗ್ಧ ಸ್ವಭಾವ, ಆತ ತಮ್ಮ ತಂದೆಗೇ ಹೆದರಿಕೊಳ್ತಿದ್ದ ಹುಡುಗ. ಎಲ್ಲಾ ದೇವರು ಮಾಡಿರೋದು, ಇದೆಲ್ಲಾ‌ ಕನಸಾಗಿರಬಾರದಾ ಅಂತ ಅನ್ನಿಸುತ್ತೆ.. ಅವ್ರ ತಂದೆ ಸತ್ತಾಗ, ಅಕ್ಕನ ಮದುವೆ ಮಾಡಿದಾಗ ಹೇಗೆ ಎದುರಿಸಿದ ಅಂತ ನಾನು ನೋಡಿದೀನಿ.. ಚಿತ್ರರಂಗಕ್ಕೆ ಬಂದಾಗಲೂ ಅವನು ಯಾವ ರೀತಿ ಅವಮಾನಗಳನ್ನ ಫೇಸ್ ಮಾಡಿ ಬಂದಿದಾನೆ ಎಂಬುದೂ ಗೊತ್ತು. 

ಜೀವನದಲ್ಲಿ ತುಂಬಾ ಕಷ್ಟಗಳನ್ನ ಮೆಟ್ಟಿ ನಿಂತು ಬೆಟ್ಟದಂತೆ ಬೆಳೆದು ನಿಂತ ಹುಡುಗ ದರ್ಶನ್. ಅವರ ತಂದೆ ಸತ್ತಾಗ ಅಕ್ಕನ ಮದುವೆ ಮಾಡಿದಾಗ ಹೇಗೆ ಹೆದರಿಸಿದ ಅಂತ ನಾನು ನೋಡಿದ್ದೀನಿ. ಆದರೆ ಇಂದಿನ ಈ ಘಟನೆ ನೋಡಿ ಆಘಾತವಾಗಿದೆ. ಆದಷ್ಟು ಬೇಗ ಇದರಿಂದ ಮುಕ್ತರಾಗಿ ದರ್ಶನ್‌ ಹೊರಬರಲಿ  ಎಂದು ಗಿರಿಜಾ ಲೋಕೇಶ್ ಭಾವುಕರಾಗಿದ್ದಾರೆ.

ಗಿರಿಜಾ ಲೋಕೇಶ್ ಹಾಗು ಅವರ ಮಗ ನಟ ಸೃಜನ್ ಲೋಕೇಶ್ ಅವರಿಬ್ಬರೂ ಸ್ವಲ್ಪ ಸಮಯದ ಮೊದಲು ಒಳ್ಳೇ ಸ್ನೇಹಿತರಾಗಿದ್ದರು. ಅವರಿಬ್ಬರೂ ಸಾಕಷ್ಟು ವೇಳೆ ಜೊತೆಯಲ್ಲೇ ಇರುತ್ತಿದ್ದರು. ಇತ್ತೀಚೆಗಷ್ಟೇ ಅವರಿಬ್ಬರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಬಂದು ದೂರವಾಗಿದ್ದರು ಎನ್ನಲಾಗುತ್ತಿದೆ. ಆದರೆ, ಗಿರಿಜಾ ಲೋಕೇಶ್ ಅವರು ನಟ ದರ್ಶನ್ ಚಿಕ್ಕ ಮಗುವಾಗಿದ್ದಾಗಿನಿಂದಲೂ ನೋಡಿದವರು, ಎತ್ತಿ ಆಡಿಸಿದವರು. ಹೀಗಾಗಿ ಸಹಜವಾಗಿ ಅವರಿಗೆ ನೋವು ಕಾಡುತ್ತಿದೆ. 

ನಟ ದರ್ಶನ್‌ಗೆ ಕೋರ್ಟ್‌ ಶಾಕ್‌; ಮನೆಯ ಊಟ ತರಿಸಲು ಅನುಮತಿ ಇಲ್ಲ:

ಬೆಂಗಳೂರು: ಮನೆಯೂಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ (Darshan) ಕೋರ್ಟ್‌ ಶಾಕ್‌ ನೀಡಿದೆ. ಮನೆಯೂಟದ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ದರ್ಶನ್‌ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಜಾಗೊಳಿಸಿದೆ.

ಮನೆಯಿಂದ ಊಟ (Home Cooked Food) ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜುಲೈ 25ಕ್ಕೆ ಆದೇಶ ಕಾಯ್ದಿರಿಸಿತ್ತು.  ಇಂದು ದರ್ಶನ್‌ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದ್ದು, ದರ್ಶನ್‌ ಪರ ವಕೀಲರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ. 

ದರ್ಶನ್‌ ಅರ್ಜಿ ವಜಾಗೊಂಡಿದ್ದು ಯಾಕೆ?
Karnataka Prisons and Correctional Services Manual 2021 ರ ಸೆಕ್ಷನ್‌ 728 ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ ಅವಶ್ಯಕತೆ ಕಾಣಿಸುತ್ತಿಲ್ಲ. ಮನೆ ಊಟದ ಅವಶ್ಯಕತೆ ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲ.

ದರ್ಶನ್‌ ಪರ ವಕೀಲರ ವಾದ ಏನಿತ್ತು?
ಆರೋಪಿಗೆ ಜೈಲಿನಲ್ಲಿ ಇರುವಾಗ ಮನೆಯ ಊಟ ಪಡೆಯಬಹುದು. ಇದು ವಿಚಾರಣಾಧೀನ ಕೈದಿಯ ಹಕ್ಕು. ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಆರೋಪಿಗೆ ಕೆಲವೊಂದು ನಿಬಂಧನೆಗಳನ್ನು ಹೇಳಿ ಅವಕಾಶ ಕೊಡಿಸಬಹುದು. ತಮ್ಮದೇ ವೆಚ್ಚದಲ್ಲಿ ಇದನ್ನು ಪಡೆಯಲು ಅವಕಾಶವನ್ನು ಹೊಂದಿಸಲಾಗಿದೆ. ಕೊಲೆಯ ಆರೋಪಿಗಳಿಗೆ ವಿನಾಯಿತಿ ನೀಡಲಾಗಿದೆ.

ಸೆಕ್ಷನ್ 30 ರ ಪ್ರಕಾರ ಜೈಲಿನಲ್ಲಿ ಇರುವ ಆರೋಪಿ ಮನೆಯ ಊಟ ಪಡೆಯಬಹುದು. ಅಲ್ಲದೇ ಮನೆಯಿಂದ ಹಾಸಿಗೆ ವ್ಯವಸ್ಥೆ ಮತ್ತು ಪುಸ್ತಕಗಳನ್ನು ಹೊಂದುವ ಅವಕಾಶ ಇದೆ . ಈ ಎಲ್ಲಾ ಅವಕಾಶಗಳನ್ನು ಆರೋಪಿಗಳಿಗೆ ಒದಗಿಸಿಕೊಡಬಹುದು.

ಮರಣ ದಂಡನೆ ಹೊಂದಿದ ಅಪರಾಧಿಗೂ ಕೆಲ ಅವಕಾಶ ಇದೆ. ಅಲ್ಲದೇ ದರ್ಶನ್ ಅವರು ಸಿನಿಮಾದ ನಟರಾಗಿರುವ ಕಾರಣ ಅತಿ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಹೀಗಾಗಿ ಜೈಲಿನ ಅಧಿಕಾರಿಗಳು ಮನೆಯ ಊಟವನ್ನು ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇದರಿಂದ ಹಿಂದೆ ಸರಿಯುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist